spot_img
spot_img

ಮಹಾನಗರಿಯ ಟಿ.ಜಿ.ಲೇಔಟ್ ನಲ್ಲಿ ಅವವ್ಯಸ್ಥೆಯ ಆಗರ

Must Read

spot_img

ಬಿಬಿಎಂಪಿ ಅಧಿಕಾರಿಗಳೇ ಸ್ವಲ್ಪ ಇತ್ತ ಕಡೆ ಗಮನ ಹರಿಸಿ !!

ಬೆಂಗಳೂರು – ರಸ್ತೆಯಲ್ಲಿ ಕಸ ತಂದು ಸುರಿಯುವ ಮಹಿಳೆಯರು, ಗಬ್ಬು ನಾರುತ್ತಿದೆ ಪ್ರಮುಖ ರಸ್ತೆ, ರಸ್ತೆಯಲ್ಲಿ ಬಿದ್ದ ಕಸದ ರಾಶಿಯಲ್ಲಿ ಪೇಪರ್ , ಪ್ಲಾಸ್ಟಿಕ್ ಚೀಲ ಯಾವುದು ತಿಳಿಯದೇ ತಿನ್ನುತ್ತಿದೆ ಗೋಮಾತೆ !

ಇದು ನಗರದ ಟಿಜಿ ಲೇಔಟ್ ನಲ್ಲಿ ಕಂಡು ಬಂದ ದಾರುಣ ದೃಶ್ಯ

ಗೋಹತ್ಯೆ ನಿಷೇಧ ಜಾರಿ ಬಳಿಕ ಮುದಿ ಹಾಗೂ ಅಶಕ್ತ ಹಸುಗಳನ್ನು ಸಾಕಲು ರೈತರು, ಹೈನುಗಾರಿಕೆದಾರರು ಹೈರಾಣಾಗುತ್ತಿದ್ದಾರೆ.ಸರ್ಕಾರವೂ ಗೋವುಗಳಿಗೆ ಸರಿಯಾದ ಗೋಶಾಲೆಗಳನ್ನು ಅಗತ್ಯವಿರುವಷ್ಟು ತೆರೆಯದಿರುವುದರಿಂದ ಗೋ ಹತ್ಯೆ ನಿಷೇಧಿಸಿದ ರಾಜ್ಯಗಳಲ್ಲಿ ಬಿಡಾಡಿ ಹಸುಗಳ ಸಂಖ್ಯೆ ಅಧಿಕವಾಗಿದೆ.

ಇಂತಹ ಬೀಡಾಡಿ ಹಸುಗಳು ರಸ್ತೆಯ ಬದಿಯಲ್ಲಿ ಹಾಗೂ ರಸ್ತೆಯಲ್ಲಿ ಕೆಲವರು ಮಾನವೀಯ ಮೌಲ್ಯಗಳನ್ನು ಮರೆತು ಎಸೆದ ಕಸ , ಪ್ಲಾಸ್ಟಿಕ್ ಚೀಲ , ಕೊಳೆತ ಹಣ್ಣು , ತರಕಾರಿಗಳನ್ನು ತಿಂದು ಹಸುಗಳು ರಸ್ತೆಯ ತುಂಬಾ ಓಡಾಡುತ್ತಾ ಇರುವ ದೃಶ್ಯಗಳು ಸಿಲಿಕಾನ್ ಸಿಟಿಯಲ್ಲಿ ಕಂಡು ಬರುತ್ತಿದ್ದು , ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಬಿ.ಬಿ.ಎಂ.ಪಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಬನಶಂಕರಿ 3 ನೇ ಹಂತದ ಟಿ.ಜಿ ಲೇಔಟ್ ನಲ್ಲಿ ರಸ್ತೆಯ ಮೇಲೆ ಕಸದ ರಾಶಿ ರಾಶಿ ಬಿದ್ದಿದೆ , ಆ ಕಸದ ರಾಶಿಯಲ್ಲಿ ಗೋಮಾತೆ ಆಹಾರ ಹಿಡುಕಿ ತಿನ್ನುತ್ತಾ ಇದ್ದರೆ ಬೀದಿ ಬದಿಯ ಬೀದಿ ನಾಯಿ ತನಗೆ ತಿನ್ನಲು ಏನಾದರೂ ರುಚಿ ರುಚಿಯಾದ ಆಹಾರ ಸಿಕ್ಕೀತು ಎಂದು ಕಸದ ರಾಶಿಯಲ್ಲಿ ಹುಡುಕುತ್ತಾ ಇದೆ , ಈ ದೃಶ್ಯ ಕಂಡು ಬಂದಿದ್ದು ಆಗಸ್ಟ್ 29 ರ ಬೆಳಿಗ್ಗೆ ನಾನು ಕಛೇರಿ ಗೆ ಹೊರಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ , ಟಿ.ಜಿ ಲೇಔಟ್ ನ ಸ್ಥಳೀಯ ಮಹಿಳೆಯರು ರಸ್ತೆಯಲ್ಲಿ ಕಸ ತಂದು ಹಾಕುತ್ತಾ ಇದ್ದದ್ದನ್ನು ಕಂಡು ನಾನು ಅವರಿಗೆ ಬಿ.ಬಿ.ಎಂ.ಪಿ ಕಸದ ಗಾಡಿ ಬರುವುದಿಲ್ಲವೆ ಎಂದು ಪ್ರಶ್ನಿಸಿದರೆ, ಅಲ್ಲಿ ಕಸ ಹಾಕುತ್ತಿದ್ದ ಮಹಿಳೆ ಇಲ್ಲ, ಇಲ್ಲಿ ಬಿ.ಬಿ.ಎಂ.ಪಿ ಯವರೆ ಕಸ ಹಾಕಿದ್ದಾರೆ ಅದಕ್ಕೆ ನಾನು ತಂದು ಸುರಿಯುವ ಕೆಲಸ ಮಾಡುತ್ತಾ ಇದ್ದೇನೆ ಎಂದು ಸಮರ್ಥನೆ ಮಾಡುತ್ತ ಇದ್ದಾಗ ಅಲ್ಲಿನ ನಿವಾಸಿ ಮತೊಬ್ಬ ಮಹಿಳೆ ಕಸದ ಚೀಲ ತಂದು ರಸ್ತೆಯ ಮೇಲೆ ಇಟ್ಟು ಹೊರಟ್ಟಿದ್ದರು , ಅವರ ಫೋಟೋ ತೆಗೆಯುವುದಿಲ್ಲವೇ ನೀವು ಎಂದು ನನ್ನ ಬಳಿ ಕೇಳಿದಾಗ ಅವರ ಫೋಟೋ ತೆಗೆದು ಆಯಿತು ಎಂದು ವಿಡಿಯೋ ಚಿತ್ರೀಕರಣ ಆರಂಭಿಸಿದೇ , ಆಗ ವಿಡಿಯೋ ಚಿತ್ರೀಕರಣ ಮಾಡುತ್ತಾ ಇದ್ದೀರಾ ಎಂಬ ಪ್ರಶ್ನೆ ಕಸ ಹಾಕುತ್ತಾ ಇದ್ದ ಮಹಿಳೆಯದ್ದು , ದಾರಿಯಲ್ಲಿ ಕೆಲಸಕ್ಕೆ ಹೋಗುತ್ತಾ ಇದ್ದ ಮಹಿಳೆ ಅಲ್ಲಿ ಬೋರ್ಡ್ ಹಾಕಿದ್ದಾರೆ ಕಸ ಹಾಕಬಾರದು ಎಂದು ಈಗ ಇಲ್ಲಿ ಹಾಕಲು ಶುರು ಮಾಡಿದ್ದಾರೆ , ವಿಡಿಯೋ ಮಾಡಲಿ ತಪ್ಪೇನು ಇದೆ ಎಂದು ನನ್ನ ಪರವಾಗಿ ಕಸಹಾಕುತ್ತಿದ್ದ ಮಹಿಳೆಯ ಬಳಿ ಮಾತನಾಡಿದ್ದರು.

ಗೋಮಾತೆ ಕಸ ತಿನ್ನುತ್ತಾ ಇತ್ತು ಎಷ್ಟೇ ಓಡಿಸಲು ಪ್ರಯತ್ನ ಮಾಡಿದರು ಅದು ಅಲ್ಲಿಂದ ಹೊರಡುವ ಮನಸ್ಸು ಮಾಡಲಿಲ್ಲ ಕಸದ ರಾಶಿ , ಪ್ಲಾಸ್ಟಿಕ್ ಚೀಲ , ಗಬ್ಬು ನಾರುತ್ತಿದ್ದ ರಸ್ತೆ. ಇವೆಲ್ಲವು ಇರುವುದು ನಗರದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಇಟ್ಟಮಡು ವಿನ 18 ನೆ ಕ್ರಾಸ್ ಟಿ .ಜಿ.ಲೇಔಟ್ ನಲ್ಲಿ.

ಇದು ಆರ್ .ಅಶೋಕ್ ಶಾಸಕರ ಕ್ಷೇತ್ರ ಹಾಗೂ ಬಿ.ಬಿ.ಎಂ.ಪಿ ಸದಸ್ಯೆ ಶ್ರೀಮತಿ ರಾಜೇಶ್ವರಿ ಚೋಳರಾಜ್ ಅವರ ವಾರ್ಡು.

ಒಟ್ಟಿನಲ್ಲಿ ಸ್ವಚ್ಛತೆ ಯನ್ನು ಮರೆತಿದ್ದಾರೆ ನಾಗರಿಕರು.ಎಲ್ಲ ನಾಗರಿಕರು ಅಂತ ನಾನು ಹೇಳುತ್ತಿಲ್ಲ. ಕೆಲವು ಮಹಿಳೆಯರು. ಇವರು ರಸ್ತೆಯಲ್ಲಿ ಕಸ ತಂದು ಹಾಕಿ , ರಸ್ತೆಯಲ್ಲಿ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಒಂದೇ ಸಮನೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ, ಕಸದ ರಾಶಿ ಯಿಂದ ಹೊಡೆಯುವ ಗಬ್ಬು ನಾತ. ಅವುಗಳಿಂದ ಸಾಂಕ್ರಾಮಿಕ ರೋಗಗಳು ಕಟ್ಟಿಟ್ಟ ಬುತ್ತಿ. ಈಗಾಗಲೇ ಒಂದೇ ಸಮನೆ ಸುರಿಯುವ ಮಳೆಯಿಂದ ಅನೇಕ ಜನರು ಅನಾರೋಗ್ಯ ಕ್ಕೆ ತುತ್ತಾಗಿದ್ದಾರೆ.

ಆದರೆ ಬನಶಂಕರಿ 3 ನೆ ಹಂತದ ಮಹಿಳೆಯರಿಗೆ ಅದ್ಯಾವ ಪರಿವೆಯೂ ಇಲ್ಲ, ಅವರ ಮನೆಯಲ್ಲಿ ಇರುವ ಗಬ್ಬು ನಾಥ ಬೀರುವ ಕಸ ರಸ್ತೆಯಲ್ಲಿ ಹಾಕಿ ಹೋಗುತ್ತಾರೆ ರಾಜಾರೋಷವಾಗಿ. ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ. ಅಪಾಯ ಸಂಭವಿಸುವ ಮುನ್ನ ಬಿ.ಬಿ.ಎಂ.ಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಬಿ.ಬಿ.ಎಂ.ಪಿ ಅವರೇ ರಸ್ತೆಯಲ್ಲಿ ಕಸ ಹಾಕುತ್ತಾರೆ ಎನ್ನುತ್ತಾರೆ ರಸ್ತೆಯಲ್ಲಿ ಕಸಹಾಕಿದ ಮಹಿಳೆ ! ರಸ್ತೆಯಲ್ಲಿ ಬಿದ್ದ ಕಸ ತಿಂದು ಗೋಮಾತೆ ಸತ್ತು ಹೋದರೆ ಹೊಣೆ ಯಾರು…? ರಸ್ತೆಯಲ್ಲಿ ಕಸದ ರಾಶಿ ನಡುವೆ ಸಾಗುವ ಜನರ ಆರೋಗ್ಯ ಕೆಟ್ಟು ಹೋದರೆ ಹೊಣೆ ಯಾರು?

ರಾಜಾರೋಷವಾಗಿ ಕಸ ಬಿಸಾಕುವ ನಾಗರಿಕರು, ನಿರ್ಲಕ್ಷ್ಯ ಧೋರಣೆಯ ಬಿಬಿಎಂಪಿ ಅಧಿಕಾರಿಗಳು. ಇದಕೆಲ್ಲ ಯಾರು ಹೊಣೆಗಾರರು ? ಸಾರ್ವಜನಿಕರನ್ನು ಕಾಪಾಡುವವರಾರು?


ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!