- Advertisement -
ಮೂಡಲಗಿ – ಕಾಣೆಯಾಗಿದ್ದ ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದ ವಿದ್ಯಾರ್ಥಿಯ ಪತ್ತೆಯಾಗಿದ್ದು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ರೈಲ್ವೆ ಪೋಲಿಸರಿಗೆ ದೊರೆತಿದ್ದ.
ರೈಲ್ವೆ ಪೋಲಿಸರು ಮಕ್ಕಳ ಸಹಾಯವಾಣಿಗೆ ವಿಧ್ಯಾರ್ಥಿಯನ್ನು ಹಸ್ತಾಂತರಿಸಿದ್ದು ಅಲ್ಲಿಂದ ಪಾಲಕರ ವಶಕ್ಕೆ ನೀಡಲಾಯಿತು.
ಹಾಸ್ಟೆಲ್ ನಲ್ಲಿ ಓದುತ್ತಿದ್ದ ಈತನಿಗೆ ಹಾಸ್ಟೆಲ್ ಜೀವನ ಸಾಕಾಗಿತ್ತೆನ್ನಲಾಗಿದೆ. ಇತ್ತೀಚೆಗೆ ಗಣಪತಿ ಹಬ್ಬಕ್ಕೆ ಮನೆಗೆ ಬಂದಿದ್ದ. ಹಬ್ಬ ಮುಗಿದ ನಂತರ ಮನೆಯಲ್ಲಿ ತಂದೆ ತಾಯಿ ನಾಳೆ ಆತನನ್ನ ಹಾಸ್ಟೆಲ್ ಗೆ ಓದಲು ಕಳಿಸೋಣ ಎಂದು ಮಾತನಾಡಿದ್ದನ್ನು ಕೇಳಿಸಿಕೊಂಡ ಈತ ಊಟ ಮಾಡಿ ವಾಕಿಂಗ್ ಮಾಡುವುದಾಗಿ ಹೇಳಿ ಮನೆಯಿಂದ ಆಚೆ ಬಂದವ ಕಾಣೆಯಾಗಿದ್ದ.
- Advertisement -
ಈ ಕುರಿತು ಮೂಡಲಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಮಯದಲ್ಲಿ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚೌಕಶಿ ತುಂಬ ಮುತುವರ್ಜಿ ವಹಿಸಿ ಬಾಲಕನ ಪತ್ತೆ ಮಾಡಲು ಸಹಕರಿಸಿದ್ದರು. ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.