- Advertisement -
ಬೀದರ – ಬಾ ಬಾರೋ ಬಾರೋ ಮಳೆರಾಯ, ರೈತನ ಗೋಳು ಆಲಿಸೆಯಾ ಎಂದು ನೃತ್ಯ ಮಾಡುತ್ತ ಮಳೆರಾಯನಿಗೆ ನಮಿಸಿದ ರೈತ ಮಹಿಳೆ ಬೀದರನಲ್ಲಿ ಸುದ್ದಿಯಾಗಿದ್ದಾರೆ.
ಇದಕ್ಕೂ ಮುಂಚೆ ತಾನೇ ಸ್ವತಃ ಟ್ರಾಕ್ಟರ್ ಚಲಾಯಿಸಿ ಐದು ಎಕರೆಯಷ್ಟು ಜಮೀನನ್ನು ಏಕಾಂಗಿಯಾಗಿ ಬಿತ್ತನೆ ಮಾಡಿದ ರೈತ ಮಹಿಳೆ ವಿಜಯಲಕ್ಷ್ಮಿ ವೀರೇಶ್ ಹಾರಕುಡೆಯವರು ಬಿತ್ತನೆ ಮಾಡಿದ ನಂತರ ಮಳೆ ಕೈಕೊಡದಿರಲಿ ಎಂದು ಮಳೆರಾಯನನ್ನ ನೆನೆದು ಹಾಡುತ್ತ ನೃತ್ಯ ಮಾಡಿದರು. ಹುಮ್ನಾಬಾದ್ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ 116 ಮಿಲಿಮೀಟರ್ ಮಳೆಯಾಗಬೇಕಾಗಿತ್ತು.
- Advertisement -
ಆದರೆ ಮಳೆ ವಾಡಿಕೆಗಿಂತ ಅತಿ ಕಡಿಮೆ ಅಂದರೆ ಕೇವಲ 65 ಮಿಲಿ ಮೀಟರ್ ಮಳೆಯಾಗಿದೆ. ಆದ್ದರಿಂದ ಈಗಲಾದರೂ ಚೆನ್ನಾಗಿ ಮಳೆಯಾಗಲಿ ಎಂದು ಪ್ರಾರ್ಥನೆ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ