ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದುಕೊಂಡದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ ಮಂಜಿನಂತೆ ಕರಗಿ ನೆರವಿಗೆ ಧಾವಿಸುತ್ತೇವೆ ಇವೆಲ್ಲ ನಮ್ಮ ಬದುಕಿನ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಹುಟ್ಟು ಸಾವು ಎರಡು ಸೇತುವೆಗಳ ನಡುವೆ ಇರುವ ಕಾಲವೇ ಬದುಕು. ದೈವ ಸೃಷ್ಟಿಯ ಎಲ್ಲ ಜೀವ ಸಂಕುಲಗಳು ಬದುಕುತ್ತವೆ ಆದರೆ ಸರ್ವಶ್ರೇಷ್ಠ ಪ್ರಾಣಿಗಳಾದ ನಾವು ಬರೀ ಬದುಕಬಾರದು ಜೀವಿಸಬೇಕು.

ಹಾಗಾದಾಗಲೇ ಬದುಕಿಗೊಂದು ನಿಜವಾದ ಅರ್ಥ. ಜೀವಿಸಬೇಕೆಂದರೆ ಭಾವಗಳ ನದಿಯಲ್ಲಿ ಈಸಬೇಕು. ಬಾಳಿಗೂ ಭಾವಕೂ ಅವಿನಾಭಾವ ಸಂಬಂಧವಿದೆ ಅದಕ್ಕೆಂತಲೇ ಕವಿಯೊಬ್ಬ ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ಎಂದು ಹಾಡಿ ಹೊಗಳಿ ಬಾಳಿನಲ್ಲಿ ಭಾವನೆಗಳ ಮಹತ್ವ ಸಾರಿ ಹೇಳಿದ್ದಾನೆ.

ಇತ್ತೀಚೆಗೆ ಯಂತ್ರಗಳ ಬೆನ್ನು ಹತ್ತಿ ಯಾಂತ್ರಿಕವಾಗಿ ಬದುಕುವುದನ್ನು ರೂಢಿಸಿಕೊಂಡು ಬದುಕು ಜಂಜಾಟಗಳಗೂಡು ಎಂದು ಹಳಿಯುತ್ತ ಭಾವನೆಗಳನ್ನು ಮರೆತು ಅಸಮಾಧಾನ ಅಶಾಂತಿಯನ್ನು ಮನದಲ್ಲಿ ಮನೆ ಮಾಡಿಕೊಳ್ಳುತ್ತಿದ್ದೇವೆ. ಇದು ಸ್ವ ನಿರ್ಮಿತ ದುರಂತ. ಭಾವನೆಗಳ ತುಡಿತ ಮಿಡಿತಗಳಿಗೆ ಕಿವಿಗೊಡದೇ ಹೋದರೆ ಗೆಲುವು ಸಾಧನೆಗಳೆಲ್ಲವೂ ದೊಡ್ಡ ಸೊನ್ನೆಗಳಾಗುತ್ತವೆ. ಬದುಕಿನ ಇಳಿ ಸಂಜೆಯ ಪಯಣದಲ್ಲಿ ಸಂತೋಷ ಸಂತೃಪ್ತಿ ಜೀವನದ ಸಾರ್ಥಕ ಭಾವ ಮೂಡಬೇಕೆಂದರೆ ಬದುಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಭಾವನೆಗಳ ತುಡಿತ ಇರಬೇಕು ಎನ್ನುವ ವಿವೇಕವಿರುವವನು ಮಾತ್ರ ನಿಜವಾದ ಜಾಣ. ಉಪ್ಪಿನಕಾಯಿ ಇಷ್ಟವೆಂದು ಅದನ್ನೇ ತಟ್ಟೆ ತುಂಬ ಹಾಕಿಕೊಂಡು ತಿನ್ನಲಾಗುವುದಿಲ್ಲ. ಅದು ಊಟದಲ್ಲಿ ಎಷ್ಟು ಪ್ರಮಾಣವಿರಬೇಕೋ ಅಷ್ಟೇ ಪ್ರಮಾಣದಲ್ಲಿದ್ದರೆ ಚೆನ್ನ. ಹಾಗೆಯೇ ಗ್ಯಾಡ್ಜೆಟ್ಟುಗಳು ದುಡ್ಡು ಗಳಿಕೆ ಮೋಜು ಮಸ್ತಿಯ ಭ್ರಾಂತಿಯಲ್ಲಿ ಬಾಳನ್ನು ಗೋಳಾಗಿಸಿಕೊಂಡು ಅಮೂಲ್ಯವಾದ ಬಾಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.

- Advertisement -

ಮೈಕೆಲ್ ಡಾಗ್ಲಸ್‍ನ ಹೆಸರು ಕೇಳದೇ ಇರುವವರು ತುಂಬಾ ಕಮ್ಮಿ ಆತ ಪ್ರಸಿದ್ಧ ನಟ ಮತ್ತು ನಿರ್ದೇಶಕ ಆತನ ಐದು ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಹಣ ಸಂಗ್ರಹಿಸಿ ಆತನಿಗೆ ಎಲ್ಲಿಲ್ಲದ ಜನ ಮನ್ನಣೆ ಮತ್ತು ಕೀರ್ತಿಯನ್ನು ತಂದು ಕೊಟ್ಟಿದ್ದನ್ನೆಲ್ಲ ಕಂಡ ಆತನ ತಂದೆ ಮತ್ತು ಖ್ಯಾತ ನಟ ಕಿರ್ಕ್ ಡಾಗ್ಲಸ್ ಒಂದೇ ಒಂದು ಸಾಲಿನ ಪತ್ರವನ್ನು ಮಗನಿಗೆ ಬರೆಯುತ್ತಾನೆ ಅದು ನಿಜಕ್ಕೂ ಚೆಂದದ್ದು ಮತ್ತು ಅರ್ಥವುಳ್ಳದ್ದು. ಮೈಕೆಲ್, ನಾನು ನಿನ್ನ ಯಶಸ್ಸನ್ನು ನಿಭಾಯಿಸಿದ್ದಕ್ಕಿಂತ ಚೆನ್ನಾಗಿ ನೀನು ನನ್ನ ಯಶಸ್ಸನ್ನು ನಿಭಾಯಿಸಿದ್ದನ್ನು ಕಂಡು ಹೆಮ್ಮೆಯೆನಿಸಿದೆ. ಹೀಗೆ ಜೀವನದಲ್ಲಿ ಯಶ ಗಳಿಸುವುದು ಎಷ್ಟು ಮುಖ್ಯವೊ ಅದನ್ನು ಸಾಧಿಸಿದಾಗ ಜಂಭದಿಂದ ಬೀಗದೇ ನಮ್ಮ ಬಗೆಗೆ ಇತರರು ಹೆಮ್ಮೆ ಪಡುವಂತೆ ನಿಭಾಯಿಸುವುದು ಮುಖ್ಯ.

ನಮಗಾಗಿ ನಾವು ಬದುಕುವುದು ಬದುಕಲ್ಲ ಇತರರಿಗೆ ಹಿತ ನೀಡುವುದು ಒಳ್ಳೆಯದನ್ನು ಬಯಸುತ್ತ ಪ್ರೀತಿ ಕಾಳಜಿ ತೋರುವುದು ನಿಜ ಬದುಕು.ಪರರಿಗೆ ದುರ್ಭರ ಕ್ಷಣದಲ್ಲಿ ನೆರವಿನ ಹಸ್ತ ಚಾಚಿದರೆ ನಮಗೇನು ಲಾಭ ನಮಗೆ ದುಃಖದ ಪರಿಸ್ಥಿತಿಯಲ್ಲಿ ಯಾರೂ ಬಳಿ ಬಂದು ಅನುಕಂಪ ತೋರುವವರಿಲ್ಲ ಎನ್ನುತ್ತಿರೇನು? ಒಳ್ಳೆತನಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಇದ್ದೇ ಇದೆ ಒಂದು ವೇಳೆ ಆ ನಂಬಿಕೆ ನೀವು ಕಳೆದುಕೊಂಡಿದ್ದರೂ ಅಂಥ ಕಷ್ಟದ ಸ್ಥಿತಿಯಲ್ಲಿರುವಾಗ ನೀವು ಅವರಿಗೆ ತೋರಿದ ಪ್ರೀತಿ ಕಾಳಜಿ ನಿಮ್ಮ ಜೀವನದ ಆ ಗಳಿಗೆಯನ್ನು ಸುಂದರಗೊಳಿಸಿತಲ್ಲವೇ? ಸಮಾಧಾನ ನೀಡಿತಲ್ಲವೇ? ಸಂತೃಪ್ತಿ ಭಾವ ಮೂಡಿಸಿತಲ್ಲವೇ? ಇಂಥ ದಿವ್ಯ ಆನಂದಕ್ಕೆ ಸಮವುಂಟೇ?

ಇಂಗ್ಲೀಷ್‍ನ ಸುಪ್ರಸಿದ್ಧ ಲೇಖಕ ಸಾಮರ್ ಸೆಟ್ ಬರೆದ ಜನಪ್ರಿಯ ಕಥೆ ನೀವು ಕೇಳಿರಬಹುದು. ಲಂಡನ್ನಿನ ಸೇಂಟ್ ಪೀಟರ್ಸ್ ಚರ್ಚ್‍ನಲ್ಲಿ ಒಬ್ಬ ಕೆಲಸಗಾರನಿದ್ದ ಚರ್ಚ್‍ನ ಕಸಗೂಡಿಸಿ ಅದರ ಪ್ರಾಂಗಣವನ್ನು ಅಂದ ಚೆಂದವಾಗಿಡುವುದು ಅವನ ಕೆಲಸವಾಗಿತ್ತು ಅದನ್ನು ಅತೀ ಶೃದ್ಧೆಯಿಂದಲೇ ಅವನು ಮಾಡುತ್ತಿದ್ದ. ಅದೇ ಚರ್ಚಿನಲ್ಲಿದ್ದ ತರಲೆ ಪಾದ್ರಿಯೊಬ್ಬ ದಿನವೂ ಆತನ ಕೆಲಸದಲ್ಲಿ ತಪ್ಪುಗಳನ್ನು ಹುಡುಕುತ್ತ ಕಿರುಕುಳ ನೀಡುತ್ತ ಕೊನೆಗೊಂದು ದಿನ ಆತನಿಗೆ ಅಕ್ಷರ ಓದಲು ಬರೆಯಲು ಬಾರದು ಎಂಬ ಸಲ್ಲದ ಕಾರಣ ನೀಡಿ ಕೆಲಸದಿಂದಲೇ ತೆಗೆದು ಹಾಕಿದ. ಅಕ್ಷರಶಃ ನಿರುದ್ಯೋಗಿಯಾದ ಆತ ಕಷ್ಟದ ಕಾಲಕ್ಕಿರಲಿ ಎಂದು ಕೂಡಿಟ್ಟ ಹಣದಿಂದ ಒಂದು ಚಹದ ಅಂಗಡಿಯನ್ನು ತೆರೆದ ಆತನ ಶ್ರದ್ಧೆ ಮತ್ತು ನಿರಂತರ ಶ್ರಮದಿಂದ ಆತನಿಗೆ ಲಾಭವು ದೊರೆಯುವದರೊಂದಿಗೆ ಚಹದ ಅಂಗಡಿಯೂ ಜನಪ್ರಿಯವಾಯಿತು. ಜನಪ್ರಿಯತೆಯನ್ನು ಮನ್ನಿಸಿ ಆತ ಲಂಡನ್ನಿನ ಹಲವೆಡೆ ಚಹದಂಗಡಿಗಳನ್ನು ತೆರೆಯಲು ಬ್ಯಾಂಕಿನಲ್ಲಿ ಸಾಲ ಪಡೆದ ಆತ ತೆರೆದ ಚಹದಂಗಡಿಗಳು ಲಾಭವನ್ನೇ ತರಹತ್ತಿದವು. ಆತ ಶ್ರೀಮಂತನಾವುದಲ್ಲದೇ ಹೆಸರನ್ನೂ ಗಳಿಸಿದ.

ಆತನಿಗೆ ಹಣ ನೀಡಿದ ಬ್ಯಾಂಕರ್ ಒಂದು ದಿನ, ಕೇವಲ ಚಹದಂಗಡಿಗಳನ್ನು ತೆರೆದು ಇಷ್ಟು ಹಣ ಹೆಸರು ಗಳಿಸಿದಿರಿ ನಿಮ್ಮ ಸಾಧನೇಯೇನೋ ಅತ್ಯದ್ಭುತ. ಆದರೆ ನಿಮಗೆ ಓದಲು ಬರೆಯಲು ಬಾರದು ಒಂದು ವೇಳೆ ಅಕ್ಷರ ಬಂದಿದ್ದರೆ ನೀವು ಎಲ್ಲಿರುತ್ತಿದ್ದಿರೋ ಏನೇನು ಸಾಧಿಸುತ್ತಿದ್ದಿರೋ? ಎಂದು ಆಶ್ಚರ್ಯ ವ್ಯಕ್ತ ಪಡಿಸಿದ. ಆಗ ಚಹದಂಗಡಿ ಮಾಲಿಕ ಕೊಟ್ಟ ದಿಟ್ಟ ಉತ್ತರ ಅಕ್ಷರ ಬಂದಿದ್ದರೆ ಸೇಂಟ್ ಪೀಟರ್ಸ್ ಚರ್ಚಿನಲ್ಲಿ ಕಸ ಗುಡಿಸುತ್ತಾ ಇರುತ್ತಿದ್ದೆ.

ಈ ದೃಷ್ಟಾಂತ ಅವಮಾನಗಳಿಗೆ ನಾವು ಹೇಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕೆಂಬುದನ್ನು ನಮಗೆಂಥ ಸ್ಥಿತಿ ಬಂದರೂ ಅಶಕ್ತ ಭಾವನೆಗಳಿಗೆ ಬಲಿಪಶುವಾಗದೇ ಜೀವನೋತ್ಸಾಹ ಹೆಚ್ಚಿಸಿಕೊಂಡು ಇತರರಿಗೆ ಮಾದರಿಯಾಗಿ ಬಾಳುವುದನ್ನು ಹೇಳುವುದು.ಭಾವವೆಂಬ ಹಕ್ಕಿ ಗರಿಗೆದರಿದರೆ ಗುಡಿಸಲು ಮಹಲಾಗುವುದು. ಭಾವ ಹೀನರಾದರೆ ಮಹಲೂ ಗುಡಿಸಲಾಗುವುದು.

ಬಹಳಷ್ಟು ಬಾರಿ ಟೀಕೆ ಕುಹಕದ ನುಡಿಗಳಿಗೆ ಬಳಲಿ ಬೆಂಡಾಗಿ ಹತಾಶರಾಗಿ ನಿರ್ಭಾವುಕರಾಗಿ ಬಿಡುತ್ತೇವೆ ಇಲ್ಲವೇ ಜೀವನದ ಮೇಲಿನ ಆಸೆಯನ್ನೇ ಕಳೆದುಕೊಂಡು ಬಿಡುತ್ತೇವೆ. ಜೀವನವೇ ಭಾವನೆಗಳ ಸಾಗರ. ಇಲ್ಲಿ ಅತಿಯಾದ ಭಾವುಕತೆಯಾಗಲಿ ಇಲ್ಲವೇ ನಿರ್ಭಾವುಕತೆಯೂ ಕೆಲಸಕ್ಕೆ ಬಾರದು. ಒಮ್ಮೊಮ್ಮೆ ಭಾವನೆಗಳಿಗೆ ಮನಸ್ಸು ಒದ್ದೆಯಾಗಬೇಕು. ಅಂತರಂಗದ ಅಂತಃಕರಣ ತಟ್ಟಿ ಒಂದಷ್ಟು ನೆಮ್ಮದಿ ಸಂತಸ ಅರಳಿಸಬೇಕು. ಹಾಗಾಗಬೇಕೆಂದರೆ ನಾವು ಮಾಡುವ ಕೆಲಸದಲ್ಲಿ ಭಾವನೆಗಳನ್ನು ಬೆರೆಸಬೇಕು. ಹಣ ಕೀರ್ತಿ ಯಶಸ್ಸಿನ ಹಿಂದೆ ಬೆನ್ನು ಹತ್ತಿ ಒಳ ಮನಸ್ಸಿನ ಸುಂದರ ಭಾವನೆಗಳನ್ನು ಹತ್ತಿಕ್ಕದೇ ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಸಮಾಜದ ಋಣ ತೀರಿಸಲು ಬಳಸಿಕೊಂಡು ಖುಷಿಯಾಗಿರಿ. ಭಾವ ತುಂಬಿದ ಸಮಾಜಮುಖಿ ಜೀವನ ಜೀವಿಸಿದರೆ ಅದು ನಮಗೆ ನಾವೇ ಕೊಟ್ಟುಕೊಂಡ ಉಡುಗೊರೆ ಅಷ್ಟೆ ಅಲ್ಲ ಸಮಾಜಕ್ಕೆ ನೀಡುತ್ತಿರುವ ಉಡುಗೊರೆಯೂ ಹೌದು.

ಜಯಶ್ರೀ.ಜೆ. ಅಬ್ಬಿಗೇರಿ 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!