spot_img
spot_img

ಗಣೇಶ ಚತುರ್ಥಿಯ ಸುವರ್ಣ ಮಹೋತ್ಸವದ ನಿಮಿತ್ತ ಹೊಸೂರಿನಲ್ಲಿ ಸೆಪ್ಟೆಂಬರ 5 ರಂದು ಕವಿಗೋಷ್ಠಿ

Must Read

spot_img

ಬೈಲಹೊಂಗಲ: ಸಮೀಪದ ಹೊಸೂರು ಗ್ರಾಮದಲ್ಲಿ ಗಣೇಶ ಚತುರ್ಥಿ ಸುವರ್ಣ ಮಹೋತ್ಸವದ ನಿಮಿತ್ತ ಸೆಪ್ಟೆಂಬರ 5 ರಂದು ಸೋಮವಾರ ಸಾಯಂಕಾಲ 6 ಗಂಟೆಗೆ ಗ್ರಾಮದ ಶ್ರೀ ಆಂಜನೇಯ ಹಾಗೂ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಕವಿಗೋಷ್ಠಿ ನಡೆಯಲಿದೆ.

ಹೊಸೂರಿನ ಶ್ರೀಗುರು ಮಡಿವಾಳೇಶ್ವರ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ.ಸ್ವ ಗಂಗಾಧರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಳಾ ಮೆಟಗುಡ್ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಆಗಮಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಆಶಯ ನುಡಿಗಳನ್ನಾಡುವರು. ಖ್ಯಾತ ಹೃದಯರೋಗ ತಜ್ಞರಾದ ಡಾ. ರವೀಂದ್ರ ಜಕನೂರ ಅವರನ್ನು ಸನ್ಮಾನಿಸಲಾಗುವುದು.

ಕವಿಗಳಾದ ಡಾ. ಫಕ್ಕೀರನಾಯ್ಕ ಗಡ್ಡಿಗೌಡರ, ಡಾ. ಮಲ್ಲಿಕಾರ್ಜುನ ಛಬ್ಬಿ, ಉಮೇಶ ಪಾಟೀಲ(ಯಡಾಲ), ಮಲ್ಲಿಕಾರ್ಜುನ ಕೋಳಿ, ಕಿರಣ ಗಣಾಚಾರಿ, ಜ್ಯೋತಿ ಕೋಟಗಿ, ಅವಿನಾಶ ಸೆರೆಮನಿ, ಶಿವಾನಂದ ಪಟ್ಟಿಹಾಳ, ಚಂದ್ರಶೇಖರ ಪೂಜಾರ, ಸನಗೌಡ ಸಂಗನಗೌಡರ, ಸಿದ್ದು ನೇಸರಗಿ, ಗೋದಾವರಿ ಪಾಟೀಲ, ಮಂಜುಳಾ ಶೆಟ್ಟರ, ಶಿವಾನಂದ ಉಳ್ಳಿಗೇರಿ, ಮಲ್ಲಿಕಾರ್ಜುನ ಕುರಿ, ಗಜಾನಂದ ಸೂರ್ಯವಂಶಿ, ಬಸವರಾಜ ಬಾಳೇಕುಂದರಗಿ, ಸೋಮನಿಂಗ ತುಪ್ಪದ, ಆನಂದ ಮಾಲಗಿತ್ತಿಮಠ, ಸಂದೀಪ ಪಾಟೀಲ, ಪುಂಡಲೀಕ ನಿಕ್ಕಮ್ಮನವರ, ರಮೇಶ ಇಂಗಳಗಿ, ಅಮಜವ್ವ ಭೋವಿ, ಎನ್.ಬಿ. ತೋರಣಗಟ್ಟಿ, ಗಂಗಪ್ಪ ಹುಡೇದ ಕವನ ವಾಚನ ಮಾಡಲಿದ್ದಾರೆ.

ಕವಿಗಳು, ಸಾಹಿತ್ಯಾಸಕ್ತರು, ಕನ್ನಡ ಮನಸ್ಸುಗಳು ಕವಿಗೋಷ್ಠಿಗೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೊಸೂರು ಗ್ರಾಮದ ಮಾರುತಿ ಗಜಾನನ ಉತ್ಸವ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!