spot_img
spot_img

ಶಿಥಿಲಗೊಂಡ ಶಾಲೆಗೆ ಮೇಲ್ಛಾವಣಿ ; ಗ್ರಾಮಸ್ಥರ ಖಂಡನೆ

Must Read

- Advertisement -

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸರ್ಕಾರಿ ಶಾಲೆಗೆ ಸರ್ಕಾರದಿಂದ ಶಾಲಾ ಅಭಿವೃದ್ದಿಗೆ ಲಕ್ಷಾಂತರ ರೂಪಾಯಿ ಅನುದಾನ ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು 100 ವರ್ಷದ, ಶಿಥಿಲಗೊಂಡಿರುವ ಗೋಡೆಯ ಮೇಲೆ ಮೇಲ್ಚಾವಣಿ(ಸ್ಲ್ಯಾಬ್) ಹಾಕಲು ಅನುಮತಿ ನೀಡಿಕಾರ್ಯ ಪ್ರಾರಂಭಿಸಿದ್ದು ಖೇದಕರ ಸಂಗತಿ ಇದನ್ನು ಗಣಿಹಾರ ಗ್ರಾಮದ ಯುವಕರು ಖಂಡಿಸುತಿದ್ದಾರೆ.

ಗಣಿಹಾರ ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ ನಂದಶೆಟ್ಟಿ, ಬಿಸ್ಮಿಲ್ಲಾ ಮುಲ್ಲಾ ಮಾತನಾಡಿ, ತಾಲೂಕಿನ ಗಣಿಹಾರ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದ ಹಿನ್ನೆಲೆ ಸರ್ಕಾರ ಕಟ್ಟಡ ನಿರ್ಮಾಣಕ್ಕೆ 6 ಲಕ್ಷ, ಕಟ್ಟಡ ದುರಸ್ತಿಗೆ 3 ಲಕ್ಷ, ಮೂಲ ಸೌಲಭ್ಯಕ್ಕೆ 50 ಸಾವಿರ, ಗ್ರಂಥಾಲಯಕ್ಕೆ 5 ಸಾವಿರ, ಕಂಪ್ಯೂಟರ್/ಡಿಜಿಟಲ್‍ಕೋಣೆ/ಸ್ಮಾರ್ಟಕ್ಲಾಸ್‍ಗೆ 1 ಲಕ್ಷ, ಕ್ರೀಡಾ ಸಾಮಗ್ರಿಕೋಣೆ ಮತ್ತು ಸಾಮಗ್ರಿಗೆ 30 ಸಾವಿರ, ಪ್ರಯೋಗಾಲಯಕ್ಕೆ 70 ಸಾವಿರ, ಗಣಿತ ಪ್ರಯೋಗಾಲಯಕ್ಕೆ 50 ಸಾವಿರ, ಶಾಲಾ ಅಂದ, ಚಂದ ಮತ್ತು ಸುಣ್ಣ ಬಣ್ಣಕ್ಕೆ 1.50 ಲಕ್ಷ, ರೀಡಿಂಗ್ ಕಾರ್ನರ್ (ಓದುವ ಮಾಲೆ) ಗೆ 20 ಸಾವಿರ, ಕಪಾಟುಗಳು/ಫರ್ನಿಚರ್ ಗಳಿಗೆ 55 ಸಾವಿರ, ಆಟದ ಮೈದಾನಕ್ಕೆ 20 ಸಾವಿರ, ರಂಗ ಮಂದಿರ ಸಭಾಂಗಣಕ್ಕೆ 2 ಲಕ್ಷ ಹೀಗೆ ಒಟ್ಟು 16 ಲಕ್ಷದ 50 ಸಾವಿರ ಶಾಲಾ ಅಭಿವೃದ್ಧಿಗೆ ಸರ್ಕಾರ ಹಣ ಮಂಜೂರು ಮಾಡಿದೆ ಇದು ಸ್ವಾಗತಾರ್ಹ ಆದರೆ ಈ ಶಾಲೆಯಲ್ಲಿ ಆವರಣದ ಮಧ್ಯ ಭಾಗದಲ್ಲಿ 100 ವರ್ಷದ ಹಳೆಯ ಗೋಡೆಗಳಿಂದ ನಿರ್ಮಾಣವಾದ ಒಂದು ದೊಡ್ಡ ಕೋಣೆ ಇದೆ ಅದರ ಎಲ್ಲಗೋಡೆ ಭಾಗಗಳು ಬಿರುಕಾಗಿವೆ ಮಳೆ ನೀರುಗೋಡೆಯ ಒಳ ಭಾಗಕ್ಕೆ ಹೋಗಿ ಅದರ ಸಾಮರ್ಥ ಕಳೆದುಕೊಂಡಿದೆ ಹೀಗಿರುವಾಗ ಕೆ.ಆರ್.ಐ.ಡಿ.ಎಲ್ ಕಛೇರಿಯ ಅಧಿಕಾರಿಗಳು ಶಾಲೆಗೆ ಬಂದಿರುವ ಅನುದಾನವನ್ನು ದುರ್ಬಳಕೆ ಮಾಡಿ ತರಾತುರಿಯಲ್ಲಿ ಹಳೆಯ ಗೋಡೆಗೆ ಮೇಲ್ಚಾವಣಿ ಹಾಕಲು ಅನುಮತಿ ನೀಡಿದ್ದಾರೆ ಇದರಿಂದ ಮುಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಪರಿಜ್ಞಾನವಿಲ್ಲ. ಇದನ್ನು ನಿಲ್ಲಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರೂ ಕ್ಯಾರೆ ಎನ್ನುತ್ತಿಲ್ಲ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಣ್ಣ ಬಿಸನಾಳ, ದಾದಾಪೀರ ಅಂಗಡಿ ಮಾತನಾಡಿ, ಶಾಲೆಗೆ ಎಸ್.ಡಿ.ಎಮ್.ಸಿ ಇರುವುದಿಲ್ಲ. ಎಸ್.ಡಿ.ಎಮ್.ಸಿ ಇಲ್ಲದೇ ಇರುವುದರಿಂದ ಶಾಲೆಗೆ ಗ್ರಾಮ ಪಂಚಾಯತಿಯೇ ಶಿಕ್ಷಣ ಸ್ಥಾಯಿ ಸಮಿತಿಯಾಗಿರುತ್ತದೆ. ಹೀಗಿದ್ದರು ಗ್ರಾಮ ಪಂಚಾಯತಿಯ ಗಮನಕ್ಕೆ ತರದೇ ಅಧಿಕಾರಿಗಳು ಬೇಜವಬ್ದಾರಿತನದಿಂದ ವರ್ತಿಸಿ ಏಕಪಕ್ಷೀಯವಾಗಿ ಕಾಮಗಾರಿ ಮಾಡುತ್ತಿದ್ದಾರೆ. ಸರಕಾರದ ನಿಯಮಗಳೆಲ್ಲವನ್ನು ಗಾಳಿಗೆ ತೂರಿ ಅಧಿಕಾರಿಗಳು ಉದ್ಧಟತನ ತೋರುತಿದ್ದಾರೆ.

- Advertisement -

ಇಂತಹ ಕಟ್ಟಡದಲ್ಲಿರುವ ಶಾಲೆಗೆ ನಮ್ಮ ಊರಿನ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ಇದನ್ನೂ ಈಗಲೇ ತಡೆಹಿಡಿಯಬೇಕು. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಂಡು ಈ ಶಾಲೆಯಲ್ಲಿ ಮುಂಬರುವ ದಿನಗಳಲ್ಲಿ ಯಾವುದಾದರು ಅನಾಹುತ ಜರುಗಿದರೆ ಅದಕ್ಕೆ ಅಧಿಕಾರಿಗಳೆ ಕಾರಣರಾಗುತ್ತಾರೆ. ಈಗ ನವೀಕರಣಗೊಳ್ಳುತ್ತಿರುವ ಶಾಲಾ ಕಟ್ಟಡವು ಶಾಲೆಯ ಆವರಣದ ಮಧ್ಯಭಾಗದಲ್ಲಿದೆ ಇದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಇಲ್ಲಿನ ಮಕ್ಕಳು ರಾಜ್ಯರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ರೀಡೆಯಲ್ಲಿ ಗುರುತಿಸಿಕೊಂಡವರು ಹೀಗಾಗಿ ಆ ಗೋಡೆಯನ್ನು ತೆರವುಗೊಳಿಸಿ ಶಾಲೆಯ ಕೊನೆಯ ಅಂಚಿನಿಂದ ಕಟ್ಟಡಕಟ್ಟಲು ಸಹಕರಿಸಬೇಕು ಎಂದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group