ಮೂಡಲಗಿ: ಸಸಿಯನ್ನು ಮಗುವಿನಂತೆ ಪಾಲನೆ ಮಾಡಬೇಕು. ಗಿಡಗಳನ್ನು ನೆಡುವುದು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸುರೇಖಾ ಸೋನವಾಲ್ಕರ ಹೇಳಿದರು.
ಪುಟಪರ್ತಿಯ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯವರು ದೇಶಾದ್ಯಂತ ವಟವೃಕ್ಷ ಸಸಿ ನೆಡುವ ಆಂದೋಲನ ಹಮ್ಮಿಕೊಂಡಿರುವರು, ಅದರ ಪ್ರಯುಕ್ತ ಲಕ್ಷ್ಮೀನಗರದಲ್ಲಿರುವ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ಸಾಯಿ ಮಂದಿರದ ಪಕ್ಕದಲ್ಲಿರುವ ಶ್ರೀ ಸಾಯಿ ಉದ್ಯಾನವನದಲ್ಲಿ ಪುಟಪರ್ತಿಯಿಂದ ತಂದ ವಟವೃಕ್ಷ ಸಸಿಗೆ ಪೂಜೆ ಸಲ್ಲಿಸಿ, ನೀರೆರೆದು ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಸದಸ್ಯ ಸಂತೋಷ ಸೋನವಾಲ್ಕರ, ಕೆ.ಆರ್.ಕೊತ್ತಲ, ಹನುಮಂತ ಸೊರಗಾಂವಿ, ಸಿ.ಎಮ್.ಹಂಜಿ, ಬಾಳಯ್ಯ ಹಿರೇಮಠ, ಭೀಮಶಿ ನಾಯ್ಕ, ರಮೇಶ ಮೀಶಿ, ಶಿವಬಸು ಈರಪ್ಪನವರ, ಡಾ.ಮಿಲಾನಟ್ಟಿ, ಲಕ್ಷ್ಮಣ ಕಂಕಣವಾಡಿ ಮತ್ತಿತರರು ಉಪಸ್ಥಿತರಿದ್ದರು.