ಯರಗಟ್ಟಿಯಲ್ಲಿ ಸತ್ತಿಗೇರಿ, ಶಿವಾಪೂರ, ಯರಗಟ್ಟಿ, ತಲ್ಲೂರು, ಯರಝರ್ವಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ,ಮಾನಸಿಕ,ಸೆಲೆಬ್ರಲ್ ಪಾಲ್ಸಿ ಸೇರಿದಂತೆ ಹಲವು ವೈಕಲ್ಯಗಳನ್ನುಳ್ಳ ಮಕ್ಕಳಿಗೆ ಯರಗಟ್ಟಿಯ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಮಾದರಿ ಕನ್ನಡ ಶಾಲೆಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ/ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಉಚಿತವಾಗಿ ಶಾಲಾ ವಿಕಲಚೇತನ ಮಕ್ಕಳ ತಪಾಸಣೆ ಹಾಗೂ ಜಾಗೃತಿ ಶಿಬಿರವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿಯವರ ಮಾರ್ಗದರ್ಶದಂತೆ ಯರಗಟ್ಟಿ ವಲಯದ ಉಸ್ತುವಾರಿ ವಹಿಸಿರುವ ವಿಕಲಚೇತನ ಮಕ್ಕಳ ಶಿಕ್ಷಣದ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳರ ನೇತೃತ್ವದಲ್ಲಿ ಸಂಘಟಿಸಲಾಗಿತ್ತು.
ಈ ಕಾರ್ಯಕ್ಕೆ ಮುಖ್ಯೋಪಾಧ್ಯಾಯರಾದ ಎ.ಎ,ಮಕ್ತುಂನವರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿಗಳಾದ ಎಸ್.ಬಿ.ಮಿಕಲಿಯವರ ಸಹಕಾರ ದೊರಕುವ ಮೂಲಕ ಶಾಲೆಯ ಸಭಾ ಮಂದಿರದಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ. ಯರಗಟ್ಟಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಬಿ.ಬಿ.ಗೊರೋಸಿ, ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಶಾಲಾಭಿವೃದ್ಧಿ ಸಮಿತಿ,ಸ.ಹಿ.ಪ್ರಾ.ಮಾ.ಶಾಲೆ ಯರಗಟ್ಟಿಯ ಅಧ್ಯಕ್ಷರಾದ ಶ್ರೀಮತಿ ಎಸ್.ಎಂ.ಪಟ್ಟಣಶೆಟ್ಟಿ, ಸ.ಮಾ.ಕ.ಶಾಲೆ ಯರಗಟ್ಟಿಯ ಮುಖ್ಯೋಪಾಧ್ಯಾಯರಾದ ಎ.ಎ.ಮಕ್ತುಂನವರ, ಬೆಳಗಾವಿಯಿಂದ ಆಗಮಿಸಿದ್ದ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಪ್ರಾಣೇಶ ನರಸಿಂಹರಾವ್,ಫಿಜಿಯೋಥೆರಪಿಸ್ಟ ಡಾ.ಪ್ರೇಮಾ ಮಲ್ಲೂರ,ಭಾರತೀಯ ರೆಡ್ ಕ್ರಾಸ್ ಶಾಖೆಯ ಪ್ರವೀಣ ಹಿರೇಮಠ, ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಾದ ಡಾ.ಬಿ.ಕೆ.ಪಡೆಪ್ಪನವರ, ಎಸ್.ಸಿ.ಪಾಶ್ಚಾಪುರ, ಯರಝರ್ವಿ ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ ಮುಳ್ಳೂರ, ಶಿವಾಪೂರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ.ಮಲಕನ್ನವರ ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ,ಯರಗಟ್ಟಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದ ಮೇಲಿಚಾರಕಿ ಆಶಾ ಎಸ್ ಪರೀಟ್,ವ್ಹಿ.ಆರ್.ಡಬ್ಲುಗಳಾದ ಎ.ಜಿ.ದೇವರಮನಿ, ಬಿ.ಎಸ್.ಹಳೇಮನಿ, ಸಿದ್ದಾರೂಢ ಹೂಗಾರ, ಬಿ.ಐ.ಇ.ಆರ್.ಟಿ. ಗಳಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ,ದುರಗಪ್ಪ ಭಜಂತ್ರಿ,ಗಣಕ ಯಂತ್ರ ನಿರ್ವಾಹಕ ಮಲ್ಲಿಕಾರ್ಜುನ ಹೂಲಿ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದ ಮೇಲಿಚಾರಕಿ ಆಶಾ ಎಸ್ ಪರೀಟ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ನಂತರ ವೈ.ಬಿ.ಕಡಕೋಳ ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲ ಗಣ್ಯಮಾನ್ಯರನ್ನು ಲೂಸಿ ಸಾಲ್ಡಾನಾರವರ ಅಡುಗೆ ವೈವಿಧ್ಯ ಕೃತಿಯನ್ನು ನೀಡುವ ಮೂಲಕ ಸ್ವಾಗತಿಸಿದರು.
ನಂತರ ಸಸಿಗೆ ನೀರುಣಿಸುವ ಮೂಲಕ ಎಸ್. ಡಿ. ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಎಸ್.ಎಂ.ಪಟ್ಟಣಶೆಟ್ಟಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್,ಬ್ಯಾಳಿ ಜಂಟಿಯಾಗಿ ಕಾರ್ಯ ಕ್ರಮ ಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಪುನರ್ವಸತಿ ಕೇಂದ್ರದ ಪ್ರಾಣೇಶ ನರಸಿಂಹರಾವ್ ಅವರು “ಸರ್ಕಾರದ ಆದೇಶದಂತೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳ ಅನುಷ್ಠಾನದ ಮೂಲಕ ಸವದತ್ತಿಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಾವಿಂದು ವಿಕಲಚೇತನ ಮಕ್ಕಳಿಗೆ ಉಚಿತ ತಪಾಸಣೆ ಕಾರ್ಯ ಕೈಗೊಂಡಿದ್ದೇವೆ.ನಮ್ಮ ಉದ್ದೇಶ ಕೇವಲ ತಪಾಸಣೆಯಷ್ಟೇ ಅಲ್ಲ ಪಾಲಕರಿಗೆ ತಿಳಿವಳಿಕೆ ನೀಡುವುದಾಗಿದೆ.” ಎಂದು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದವರು ಹಮ್ಮಿಕೊಳ್ಳುವ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಜೊತೆಗೆ ಪಾಲಕರೊಂದಿಗೆ ಸಂವಾದ ನಡೆಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ ಹಿರೇಮಠ ಮಾತನಾಡುತ್ತ, “ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಭಾರತದಲ್ಲಿ ನೆಲೆಗೊಂಡಿರುವ ಮಾನವ ಜೀವನ ಮತ್ತು ಆರೋಗ್ಯವನ್ನು ರಕ್ಷಿಸಲು ಸ್ವಯಂ ಪೇರಿತ ಸಂಸ್ಥೆಯಾಗಿದೆ ಎಂದು ರೆಡ್ ಕ್ರಾಸ್ ಮಹತ್ವವನ್ನು ತಿಳಿಸಿದರು
ನಂತರ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿಯವರು ಮಾತನಾಡುತ್ತ, ಸರ್ವರಿಗೂ ಶಿಕ್ಷಣ ಎಂಬುದು ಸಂವಿಧಾನಬದ್ಧ ಹಕ್ಕು ಅದರಲ್ಲಿ ಸಮನ್ವಯ ಶಿಕ್ಷಣ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡುವುದಾಗಿದೆ. ಈ ದಿಸೆಯಲ್ಲಿ ವಿಕಲಚೇತನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಅವರ ಜೊತೆಗೆ ಪಂಚಾಯತಿ ಮಟ್ಟದಲ್ಲಿ ವ್ಹಿ.ಆರ್.ಡಬ್ಲುರವರು ಕೂಡ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಯು.ಡಿ.ಐ.ಡಿ. ಕಾರ್ಡ ಸಲುವಾಗಿ ಎಲ್ಲರೂ ಕೈ ಜೋಡಿಸುವ ಮೂಲಕ ಮಕ್ಕಳಿಗೆ ಅವುಗಳನ್ನು ದೊರಕಿಸುವ ಜೊತೆಗೆ ಇಂದು ನಮ್ಮ ತಾಲೂಕಿನಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದವರ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರ ಜರುಗುತ್ತಿರುವುದು.ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಿರಿ. ನಮಗೆ ಅನುಕಂಪ ಬೇಡ ಅವಕಾಶ ನೀಡಿ ಎಂಬ ಉಕ್ತಿಯಂತೆ ವಿಕಲಚೇತನ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳನ್ನು ನಾವೆಲ್ಲರೂ ಸೇರಿ ಕೊಡಿಸುವ ಪ್ರಯತ್ನ ಕೈಗೊಳ್ಳೋಣ. ಇದೀಗ ರೆಡ್ ಕ್ರಾಸ್ ಸಂಸ್ಥೆಯವರು ಕೂಡ ತಮ್ಮ ಮಹತ್ವ ತಿಳಿಸಿದರು. ನಮ್ಮ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ಈ ಸಂಸ್ಥೆಗೆ ಸಂಬಂಧಿಸಿದ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಎಸ್.ಎಂ.ಪಟ್ಟಣಶೆಟ್ಟಿ ಮಾತನಾಡುತ್ತ , ಶ್ರೀಯುತ ಬಿ.ಎನ್.ಬ್ಯಾಳಿಯವರು ತಮ್ಮ ಸ್ವಪ್ರತಿಭೆಯ ಮೂಲಕ ವಿಕಲತೆಯನ್ನು ಮೆಟ್ಟಿನಿಂತು ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಇಲಾಖೆಯ ಸೇವೆಯನ್ನು ಮುಂಚೂಣಿಯಲ್ಲಿ ತಂದುಕೊಂಡು ಮಾಡುತ್ತಿರುವುದು ನಮಗೆಲ್ಲ ಜ್ವಲಂತ ನಿದರ್ಶನ. ನಮ್ಮ ಶಾಲೆಯಲ್ಲಿ ಇಂತಹ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಿರಿ ಸದಾ ನಾವು ತಮ್ಮ ಸೇವೆಗೆ ಸಿದ್ದರಿದ್ದೇವೆ. ಎಲ್ಲ ಪಾಲಕರೂ ಕೂಡ ತಮ್ಮ ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ ಮಾಡಿಸುವಲ್ಲಿ ಶಿಕ್ಷಕರಿಗೆ ಹಾಗೂ ವ್ಹಿ.ಆರ್.ಡಬ್ಲು.ರವರಿಗೆ ಸಹಕರಿಸುವ ಮೂಲಕ ಮಕ್ಕಳಿಗೆ ಸಿಗಬಹುದಾದ ಸೌಲಭ್ಯಗಳನ್ನು ದೊರಕಿಸಿಕೊಳ್ಳಿರಿ ಎಂದು ಕರೆ ನೀಡಿದರು.
ಸರಕಾರಿ ಮಾದರಿ ಶಾಲೆಯ ಎಲ್ಲ ಶಿಕ್ಷಕ/ಶಿಕ್ಷಕಿಯರ ವತಿಯಿಂದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ಹಿರಿಯರೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಪ್ರಾಣೇಶ ಅವರನ್ನು ವಿಕಲಚೇತನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ವತಿಯಿಂದ ಗೌರವಿಸಲಾಯಿತು.
ಯರಗಟ್ಟಿ ವಲಯದ ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ವ್ಹಿ.ಆರ್.ಡಬ್ಲುಗಳು. ಸಂಪನ್ಮೂಲ ವ್ಯಕ್ತಿಗಳು ಪಾಲಕರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳ ತಪಾಸಣೆ ಜರುಗಿತು. ಜೊತೆಗೆ ಪ್ರಾಣೇಶ ಹಾಗೂ ಡಾ.ಪ್ರೇಮಾ ಮಲ್ಲೂರ ಸೂಕ್ತ ಸಲಹೆಗಳನ್ನು ಪಾಲಕರಿಗೆ ನೀಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಎಸ್.ಬಿ. ಪಾಣಿಶೆಟ್ಟಿ ನಿರೂಪಿಸಿದರು. ಕೊನೆಗೆ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ ವಂದಿಸಿದರು.