spot_img
spot_img

ತೋಟಗಾರಿಕೆ ಬೆಳೆಗಳ ಬಗ್ಗೆ ಒಂದು ದಿನದ ವಿಚಾರ ಸಂಕಿರಣ

Must Read

- Advertisement -

ಮೂಡಲಗಿ – ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ಅಂಗವಾದ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಅರಭಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: ೦೮.೦೮.೨೦೨೪ ರಂದು ದಿ|| ಡಾ. ಎಮ್. ಎಚ್. ಮರಿಗೌಡರವರ ಸ್ಮರಣಾರ್ಥ ತೋಟಗಾರಿಕೆ ದಿನಾಚರಣೆ ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಮಹಾಂತೇಶ ಮುರಗೋಡ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಳಗಾವಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಎಮ್. ಜಿ. ಕೆರುಟಗಿ, ಡೀನ್, ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯ ಮತ್ತು ಇತರರು ದಿ|| ಡಾ. ಎಮ್. ಎಚ್. ಮರಿಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಾಂತೇಶ ಮುರಗೋಡ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಳಗಾವಿ, ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ದಿ|| ಡಾ. ಎಮ್. ಎಚ್. ಮರಿಗೌಡರವರ ಬರೆದ ಪುಸ್ತಕ ಹಾಗೂ ಅವರು ಮಾಡಿದ ಕಾರ್ಯಗಳನ್ನು ಹಾಡಿಹೊಗಳಿದರು. ತೋಟಗಾರಿಕೆ ಎಂಬ ಪ್ರತ್ಯೇಕ ವಿಭಾಗವನ್ನು ಪರಿಚಯಿಸಿ ಸೀಡಲೆಸ್ ಥಾಮಸನ್, ಇನ್ನಿತರ ತಳಿಗಳನ್ನು ಜಾರಿಗೆ ತಂದಿರುವುದರ ಬಗ್ಗೆ ಮೆಲಕು ಹಾಕಿದರು. ಅಲ್ಲದೇ ತಾಳೆ, ಡ್ರ್ಯಾ ಗನ್ ಪ್ರೂಟ್, ಬಾಳೆ ಬಗ್ಗೆ ವಿವರಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ನರೇಗಾ, ಪ್ರಧಾನಮಂತ್ರಿ ಫಸಲ್ ಭೀಮಾ ಮತ್ತು ಇನ್ನಿತರ ಸಬ್ಸಿಡಿ ಯೋಜನೆಗಳನ್ನು ವಿವರಿಸಿದರು.

- Advertisement -

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎಮ್. ಜಿ. ಕೆರುಟಗಿ ರವರು ತೋಟಗಾರಿಕೆ ಪಿತಾಮಹ ದಿ|| ಡಾ. ಎಮ್. ಎಚ್. ಮರಿಗೌಡರವರ ಸಾಧನೆ, ತೋಟಗಾರಿಕೆ ಬೆಳೆಗಳ ಮಹತ್ವ ವಿವರಿಸಿದರು.

ಪ್ರಗತಿಪರ ರೈತರಾದ ಲಕ್ಷ್ಮಿಕಾಂತ  ಸೋಲಾಪುರೆ, ಸಾ. ದುರದುಂಡಿ ಇವರು ಸಾವಯವ ಕೃಷಿ ಮಾಡುವುದರಿಂದ ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬಹುದೆಂದು ಅಂತರಾಷ್ಟೀಯ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ರಪ್ತು ಮತ್ತು ಆಮದು ಯಾವ ರೀತಿ ಮಾಡಬಹುದೆಂದು ಹೇಳಿದರು.

ವಿದ್ಯಾರ್ಥಿನಿಯಾದ ಶೃತಿ ಇವರು ಲಾಲಬಾಗಿನ ಹಣ್ಣು ಮತ್ತು ತರಕಾರಿ ಒಣಗಿಸುವ ಘಟಕ ಸ್ಥಾಪನೆ, ಲಾಲಬಾಗಿನಲ್ಲಿ ನಡೆದ ಪ್ರಥಮ ತೋಟಗಾರಿಕೆ ತರಬೇತಿ ಕೇಂದ್ರ, ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆಯನ್ನು ಪ್ರತ್ಯೇಕಿಸಿದರ ಬಗ್ಗೆ ವಿವರಿಸಿದರು.

- Advertisement -

ಕಾರ್ಯಕ್ರಮಕ್ಕೆ ಆಗಮಸಿದ ಮುಖ್ಯ ಅತಿಥಿಗಳನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಅತಿಥಿಗಳು ರೈತರಿಗೆ ಸಾವಯವ ಕೃಷಿ ಪುಸ್ತಕ ವಿತರಣೆ ಮಾಡಿದರು. ಮಹಾವಿದ್ಯಾಲಯದ ತೋ.ವ.ಶಿ. ಘಟಕದ ಮುಂದಾಳು ಡಾ. ಎ.ಎಮ್. ನದಾಪ, ರಾಷ್ಟೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಎಸ್.ಜಿ. ಪ್ರವೀಣಕುಮಾರ, ಡಾ. ಪ್ರತೀಕ್ಷಾ, ಡಾ. ರಾಘವೇಂದ್ರ ಕೆ.ಎಸ್. ಇತರೆ ಶಿಕ್ಷಕ, ಶಿಕ್ಷೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆಯನ್ನು ಶ್ವೇತಾ ಹಾಗೂ ಸಂಗಡಿಗರು, ರೈತಗೀತೆಯನ್ನು ಸ್ಪೂರ್ತಿ ಹಾಗೂ ಸಂಗಡಿಗರು ಹಾಡಿದರು ಹಾಗೂ ಕು. ಸಂತೋಷ ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಹಾಗೂ ಕು. ಸೀಮಾ ಸರ್ವರಿಗೂ ವಂದನಾರ್ಪಣೆ ಮಾಡಿದರು

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group