spot_img
spot_img

ಕ್ರೂರಿ ಆಗಿದ್ದ ಮಾನವನ, ಅಹಂಕಾರದ ಕೇಡು ಪರಿಧಿ ಕಳಚಿತು ದೈವ

Must Read

- Advertisement -

ಭೂಮಿ ಹುಟ್ಟಿನಿಂದಲೂ ಇಲ್ಲಿವರೆಗೂ ಕೂಡ ಆಧುನಿಕ ತಂತ್ರಜ್ಞಾನದ ಮೂಲಕ ಮಾನವ ಎಲ್ಲವನ್ನು ತನಗೆ ಅವಶ್ಯಕತೆಯಾದ ವಸ್ತುಗಳನ್ನು ಅಥವಾ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ಎಲ್ಲವನ್ನು ಕಂಡು ಹಿಡಿದ ಮಾನವ ಆಗ ತಾನೇ ಕಾಣದ ದೈವಕ್ಕಿಂತ ದೊಡ್ಡವನು , ಎಲ್ಲಾ ನಾನೇ ,ಜಗವು ನನ್ನಿಂದಲೇ ಎನ್ನುವ ಅಹಂಕಾರಕ್ಕೆ ಬಿದ್ದಿದ್ದ ಮಾನವ ಇಂದು ಆ ದೈವವೇ ಶ್ರೇಷ್ಠ ,ಆ ದೈವವೇ ಎಲ್ಲಾ ಎನ್ನುವ ಪರಿಸ್ಥಿತಿಯಲ್ಲಿ ಇರುವರು , ಆಧುನಿಕ ತಂತ್ರಜ್ಞಾನದಲ್ಲಿ ದೈವ ಇಲ್ಲದೆ ಇರಬಹುದು ಆದರೆ ಕಾಣದ ಶಕ್ತಿ ಪ್ರಜ್ವಲಿಸುತ್ತಿದೆ ಇನ್ನು ಕೂಡ.ಗಾಳಿ , ಮಳೆ, ಬೆಳಕು, ಕತ್ತಲು ಎಲ್ಲಾ ವಿಸ್ಮಯ ದೈವದಿಂದ . ಮಾನವನು ಎಷ್ಟೇ ಎತ್ತರಕ್ಕೆ ಬೆಳೆದು ನಿಂತರು ಒಮ್ಮೆ ತನ್ನ ಆತ್ಮವನ್ನು ಕಳೆದುಕೊಳ್ಳಲೇ ಬೇಕು ಆಗ ಎಲ್ಲಾ ಶೂನ್ಯದ ವಿಸ್ಮಯದ ಅಂಧಕಾರದ ಕೇಡು ಗೊತ್ತಾಗುತ್ತದೆ.ಮಾನವ ಚಂದ್ರ ಗ್ರಹದಲ್ಲಿ ಹೋದ,ಮಂಗಳದ ಮೇಲೆ ಕೂಡ ಹೆಜ್ಜೆ ಇಟ್ಟು ಬಂದ ಆದರೆ ತನ್ನ ಸಾವನ್ನು ಗೆಲ್ಲಲಿಲ್ಲ ಸಾವಿನಲ್ಲಿ ಎಷ್ಟೇ ಐಶ್ವರ್ಯ ಭೋಗದ ಸಂಪತ್ತು ಇದ್ದರೂ ಅದು ಮೋಹದ ಬಲೆ ಅಷ್ಟೇ, ಆತ್ಮವು ದೇಹದಿಂದ ಹೊರ ಬಂದಾಗ ಎಲ್ಲಾ ಕೂಡ ಶೂನ್ಯ .ಆಗ ನೀನು ಭೂಮಿಗೆ ಸಂಬಂಧಿಸಿದ ಜೀವವು ಕೂಡ ಅಲ್ಲ ಎಂದು ಸತ್ಯಾಂಶ ಗೊತ್ತಾಗುತ್ತದೆ.

ಬದುಕು ಕಟ್ಟಲು ಎಷ್ಟೆಲ್ಲ ಹೋರಾಟ ಮಾಡಬೇಕು ಆದರೆ ಉಸಿರು ಕಳಚಿ ಬಿದ್ದಾಗ ವಿಶ್ರಾಂತಿಯ ಸೇವಾನಿರತ ಅನಿಸುತ್ತದೆ.ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಮುಂತಾದ ಧರ್ಮಗಳು ಇವೆ , ಅವರವರ ಧರ್ಮದ ಪ್ರಕಾರದ ವಿಧಿ ವಿಧಾನಗಳ ಶೈಲಿಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ದೇಹವನ್ನು ಪೂಜೆ ಪುನಸ್ಕಾರಗಳ ಮೂಲಕ ಮರಳಿ ಭೂಮಿಗೆ ಅರ್ಪಿಸುವರು ಆದರೆ ಕೊರೋನಾ ರೋಗ ಬಂದ ನಂತರ ಎಲ್ಲವೂ ಕೂಡ ಬದಲಾಗಿದೆ”ಮನುಷ್ಯ , ಮನುಷ್ಯನನ್ನೇ ಮುಟ್ಟಲು ಅಸೂಯೆ ಪಡುವ ಕಾಲ ಬಂದಿದೆ” ಕೊರೋನಾ ರೋಗಿಯನ್ನು ತನ್ನ ಕರುಳು ಬಳ್ಳಿಗಳೇ‌ ಮುಟ್ಟುತ್ತಿಲ್ಲ ಕಾರಣ ತಮ್ಮ ಜೀವದ ಭಯ .ಇಂದೇ ತಿಳಿಯಬೇಕು ಮಾನವರು ಭೂಮಿಯ ಮೇಲೆ ಯಾವುದೇ ನನ್ನ ವಸ್ತು ಇಲ್ಲ , ಭೂಮಿಯಿಂದ ಬಂದವನು ಮರಳಿ ಭೂಮಿಗೆ ತೆರಳಬೇಕು ಎನ್ನುವ ಮಾತು ಪ್ರಶ್ನೆ ಆಗಬಾರದು ಅರ್ಥೈಸಿ ಬದುಕಬೇಕು .ಅಂಬಾನಿ ಎಷ್ಟೇ ಹಣವಂತನಾದರು ಸೇರುವುದು ಮಣ್ಣಿಗೇ ವಿನಃ ಸಾವಿರಾರು ವರ್ಷಗಳ ಕಾಲ ಇಲ್ಲೇ ಉಳಿಯುವುದಿಲ್ಲ.ಜಾತಿ ಮತ ಪಂಥ ಧರ್ಮಗಳ ಭೇದ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಈ ಭೂಮಿ ತಾಯಿ ಜಾಗವನ್ನು ಕೊಟ್ಟಿದ್ದಾಳೆ ನಾವು ಒಂದೇ ಎನ್ನುವ ಭಾವನೆಯನ್ನು ಒಂದೇ ತಿಳಿಯಬೇಕು . ನಾನು ಬ್ರಾಹ್ಮಣ, ನಾನು ಜಂಗಮ,ನಾನು ಲಿಂಗಾಯತ , ನಾನು ಕುರುಬ, ನಾನು ವಾಲ್ಮೀಕಿ ,ನಾನು ಅಗಸ, ನಾನು ಇನ್ನಾವೋ ಜಾತಿಯ ವ್ಯಕ್ತಿ ಎಂದು ಎಲ್ಲದಕ್ಕೂ ನಾನೇ ಶ್ರೇಷ್ಠ ಎನ್ನುವುದು ಬಿಡಬೇಕು, ಅವನು ಮುಸ್ಲಿಂ ಕ್ರೈಸ್ತ ಬೌದ್ಧ ಯಾವುದೇ ಧರ್ಮದವ ಆಗಲಿ ಅವನು ಮೊದಲು ಭೂಮಿಯ ಮಗನು .

ಭಾರತ ದೇಶದಲ್ಲಿ ಸೋಂಕಿನ ಹೆಚ್ಚಳವನ್ನು ನೋಡಿ ಎಲ್ಲರೂ ಭಯಭೀತರಾಗಿ ಇರುವರು , ಸೋಂಕು ಉಲ್ಬಣಗೊಂಡು ಎಷ್ಟೋ ಜನ ಸಾಯುತ್ತಿರುವರು ಆದರೆ ಆಸ್ಪತ್ರೆಯಲ್ಲಿ ನಿಲ್ಲಲು ಕಾಲಿ ಇಲ್ಲದ ಜಾಗವನ್ನು ನೋಡುತ್ತಿದ್ದೇವೋ ಹಾಗೆ ಮಸಣದಲ್ಲಿ ಕೂಡ ಹೆಣವನ್ನು ಉಳಲು ಎಷ್ಟು ಸಮಯ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

- Advertisement -

ಬದುಕು ಸುಲುಭವಾಗಿ ಸಾಗಿಸುವ ಮಾನವ ಇಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಹೋರಾಟ ಮಾಡುತ್ತಿರುವನು ಈಗ ಎಲ್ಲಿ ಹೇಳಿ ಜಾತಿ ಮತ ಪಂಥ ಧರ್ಮಗಳ ಸಾರ ,ಕೂಗಿ ಕಾವಿಗಳನ್ನು ಜಾತಿಗೊಂದು ಕಲ್ಲು ಛಾಯೆ ಕಟ್ಟಿದವರು ಇಂದು ಮರಣ ಹೊಂದಿದ ಜನರನ್ನು ಯಾರು ಮುಟ್ಟುತ್ತಿರುವರು ಎಂದು ಕೂಗಿ.

ಜಾತಿ ಮತ ಪಂಥ ಧರ್ಮಗಳ ಒಂದು ಒಗ್ಗೂಡಿಕೆ ಹಣ , ದ್ವೇಷದ ಹಿನ್ನೆಲೆಗೆ ಮಾತ್ರ, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವರೇ ಪಂಗಡ ಮಾಡಿ ಕಿತ್ತಾಟ ಶುರು ಮಾಡಿದರು, ಬಸವಣ್ಣನವರು ಎಲ್ಲಾ ಮಾನವರು ಒಂದೇ ಎಂದರೆ ಈಗ ಒಂದು ಲೋಟ ನೀರು ಕೊಡಲು ಯಾವ ಜಾತಿ ನಿಂದು ಎಂದು ಕೇಳುತ್ತಿರುವರು.

ತನ್ನ ಮನೆಯವರೇ ಕೊರೋನಾ ಬಂದು ಮರಣ ಹೊಂದಿದ ವ್ಯಕ್ತಿಯನ್ನು ತಾವೇ ಮುಟ್ಟಲು ಅಸೂಯೆ ಪಡುವ ಕಾಲ ಬಂದಿದೆ ,ಯಾರು ಕೂಡ ಹೆಗಲು ಕೊಡೂದಕ್ಕೆ ಬರುತ್ತಿಲ್ಲ , ಪೂಜೆ ಪುನಸ್ಕಾರ ಇಲ್ಲ, ವಿಧಿ ವಿಧಾನಗಳು ಮರೆತು ಹೋಗಿದೆ.

- Advertisement -

ಇಲ್ಲಿ ಈಗ ತಿಳಿಯುತ್ತಿದೆ ಸ್ವಾರ್ಥದ ಪ್ರಪಂಚ ಎಂದು ದಯಮಾಡಿ ನನ್ನಿಂದ ಎಲ್ಲಾ ಎಂದು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಕಲಿತು ಬದುಕೋಣ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋಣ,ಪರಿಸರವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸಿ ಉಳಿಸೋಣ.


ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group