spot_img
spot_img

ಶ್ರೀಪಾದರಾಜರ ಆರಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು

Must Read

ಬೆಂಗಳೂರು – ಹರಿದಾಸ ಸಾಹಿತ್ಯದ ಸವ್ಯಸಾಚಿ ಮುಳಬಾಗಿಲಿನ ತಪೋನಿದಿ ಶ್ರೀಪಾದರಾಜರ ಆರಾಧನೆಯನ್ನು ದಿನಾಂಕ 13.6.22 ಸೋಮವಾರ ನಾಡಿನಾದ್ಯಂತ ಸಂಭ್ರಮದ ಸಡಗರ ಹಾಗು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಈ ಬಾರಿ  ಬೆಂಗಳೂರಿನ ಸಿಟಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ  ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಛ ಬಾರತ ಆಂದೋಲನದ ಅಂಗವಾಗಿ ಹಾಗು ಪರಿಸರ ದಿನಾಚರಣೆಯ ಸಲುವಾಗಿ ಕೋಣನ ಕುಂಟೆ ಯ ರಾಯರ ಮಠದ ಸುತ್ತಮುತ್ತಲಿನ ರಸ್ತೆಯನ್ನು ಶುಚಿ ಮಾಡಿದರು ಹಾಗು ಶ್ರೀಮಠದ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಿದರು.

ಕೋಣನ ಕುಂಟೆ ರಾಯರ ಮಠದ ಕಾರ್ಯದರ್ಶಿಗಳಾದ ಶ್ರೀ ಯುತ ಪಿ . ಎನ್. ಫಣಿ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಶ್ರೀಮಠದ ಅಧ್ಯಕ್ಷರಾದ ಡಾ||ಅನಂತ ಪದ್ಮನಾಭ ರಾವ್ ಅವರು ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ವಿದ್ಯಾರ್ಥಿಗಳಿಗೆ ನೀಡಿ ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!