spot_img
spot_img

ಶಿಕ್ಷಕರಿಂದ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ: ಎಚ್.ಆರ್.ಪೆಟ್ಲೂರ

Must Read

spot_img
- Advertisement -

ಸವದತ್ತಿ: ತಾಲೂಕಿನ ಸರಕಾರಿ ಮಾದರಿ ಕನ್ನಡ ಶಾಲೆ ಹೂಲಿಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್.ಆರ್. ಪೆಟ್ಲೂರ್ ಇವರನ್ನು ಸನ್ಮಾನ ಮಾಡಲಾಯಿತು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಎಸ್. ವಿ.ಬೆಳವಡಿ ಅವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯಾದ ಎಫ್.ಜಿ.ನವಲಗುಂದ ಅವರನ್ನು ಹೂಲಿ ಕ್ಲಸ್ಟರನ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್. ಆರ್. ಪೆಟ್ಲೂರ್ “ಸವದತ್ತಿ ತಾಲೂಕಿನ ಶಿಕ್ಷಕರ ಋಣ ತೀರಿಸಲಾಗದು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾನು ಬದ್ದ. ಸಂಘದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳು ಪ್ರತಿಯೊಬ್ಬ ಶಿಕ್ಷಕರಿಗೆ ತಿಳಿಯಬೇಕು. ಶಿಕ್ಷಕರಾದ ನಾವು ರಾಧಾಕೃಷ್ಣನ್ ರವರ ಆದರ್ಶ ವ್ಯಕ್ತಿತ್ವದ ಬಗ್ಗೆ ಓದಬೇಕು” ಎಂದರು.

- Advertisement -

“ಶಿಕ್ಷಕ ವೃತ್ತಿ ಗೌರವಯುತವಾದದ್ದು, ಶಿಕ್ಷಕರು ಸಮಾಜದಲ್ಲಿ ಆದರ್ಶ ಮಾದರಿಗಳಾಗಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ನಾವು ನಡೆದುಕೊಂಡ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ” ಎಂದು ಶಿಕ್ಷಕ ವೃತ್ತಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ನಂತರ ‘ತಾಲೂಕಿನ ಗುರುಭವನ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಲು ಶ್ರಮಿಸಲಾಗುವುದು’ ಎಂದು ತಿಳಿಸಿದರು.

ನಂತರ ಮಾತನಾಡಿದ ಎಸ್. ವಿ. ಬೆಳವಡಿ “ನನ್ನ ಅವಧಿಯಲ್ಲಿ ಗುರುಭವನ ಕಾಮಗಾರಿ ಆರಂಭವಾಯಿತು.ನಂತರ ಕೋರ್ಟ್ ನಲ್ಲಿ ವ್ಯಾಜ್ಯ ಆರಂಭವಾಗಿ ನಮಗೆ ನ್ಯಾಯ ದೊರೆಯಿತು.ಈಗ ನೂತನ ಅಧ್ಯಕ್ಷ ರ ಮೂಲಕ ಕಾಮಗಾರಿ ಮರು ಚಾಲನೆ ಪಡೆದಿದೆ.ನಾನು ನಿವೃತ್ತ ನಾದರೂ ಕೂಡ ಈ ಕಾರ್ಯ ದಲ್ಲಿ ನನ್ನನ್ನು ತೊಡಗಿಸಿಕೊಳ್ಳುವ ಮೂಲಕ ಮುಂಬರುವ ಸಪ್ಟೆಂಬರ್ ಹೊತ್ತಿಗೆ ಪೂರ್ಣ ಗೊಳಿಸಲು ಶಕ್ತಿ ಮೀರಿ ಶ್ರಮಿಸುವೆನು” ಎಂದು ತಿಳಿಸಿದರು.

- Advertisement -

ಎಫ್. ಜಿ.ನವಲಗುಂದ ಮಾತನಾಡಿ, ” ಶಿಕ್ಷಕರ ಕುಂದು ಕೊರತೆ ಗಳನ್ನು ಆಲಿಸಿ ಶೀಘ್ರವಾಗಿ ಪರಿಹರಿಸಲು ಸಂಘಟನೆ ಸದಾ ಸಿದ್ಧ ” ಎಂದರು ಶಿಕ್ಷಣ ಸಂಯೋಜಕರಾದ ಜಿ.ಎಮ್. ಕರಾಳೆ ಮಾತನಾಡಿ “ಶಿಕ್ಷಕರು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿದರೆ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ” ಎಂದು ಹೇಳಿದರು.

ಕಾರ್ಯ ಕ್ರಮದ ಪ್ರಾರಂಭದಲ್ಲಿ ಸಿ.ಆರ್.ಪಿ ಗಳಾದ ತಿಮ್ಮಯ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಶಿಕ್ಷಕ ಡಿ.ಎ.ಧರೇಕರ,ಗುರುಮಾತೆ ಪಿ.ಎಚ್. ಕುಲಕರ್ಣಿ, ಮುಖ್ಯೋಪಾಧ್ಯಾಯರಾದ ಎಸ್.ಬಿ.ವಿಜಾಪೂರ ರವರು ಅಭಿನಂದನ ಪರ ನುಡಿಗಳನ್ನು ಸಲ್ಲಿಸಿದರು. ಹಾಗೂ ಶ್ರೀಮತಿ ನಾಗರತ್ನಾ ಕುಸುಗಲ್ಲ ಸಂಘಟನಾ ಕಾರ್ಯದರ್ಶಿಯವರು ಸ್ವಾಗತಿಸಿದರು. ಎ.ಟಿ.ಜವಳಿ ಕಾರ್ಯಕ್ರಮ ನಿರೂಪಿಸಿದರು.ಜೆ.ಬಿ.ತಳವಾರ ವಂದಿಸಿದರು. ಹೂಲಿ ಕ್ಲಸ್ಟರ್ ನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group