spot_img
spot_img

ಎರಡು ಬೈಕ್ ಮದ್ಯೆ ಭೀಕರ ಅಪಘಾತ; ಇಬ್ಬರೂ ಬೈಕ್ ಸವಾರರ ಸಾವು

Must Read

ಬೀದರ – ಹುಲಸೂರ ತಾಲ್ಲೂಕಿನ ಶಾಹಜನಿ ಔರಾದ ಹತ್ತಿರ ಎರಡು ಮೋಟಾರ್ ಸೈಕಲ್ ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರೂ ಬೈಕ್ ಸವಾರರು ಸಾವಿಗೀಡಾಗಿದ್ದು ಇಬ್ಬರು ಜನರಿಗೆ ಗಾಯವಾಗಿದೆ.

ಲಾತೂರ್ ಬೀದರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಔರಾದ್ ಶಹಾಜಾನಿ ಗ್ರಾಮದ ಹತ್ತಿರದ ತೇರಣಾ ನದಿ ಸೇತುವೆಯ ಮೇಲೆ ಸಂಜೆ ಆರು ಗಂಟೆಗೆ ಮೋಟರ್ ಸೈಕಲ್ ನಂ. MH 24 R 4719 ಮತ್ತು MH 14 ET 6758 ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಇನ್ನಿಬ್ಬರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಫಘಾತ ಗ್ರಸ್ತರು ನಾಲ್ಕೂ ಜನ ಭಾಲ್ಕಿ ತಾಲ್ಲೂಕಿನವರು ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಔರಾದ್ ಪೊಲೀಸರು ಹಲಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಲಾತೂರ್ ನಿಂದ ಭಾಲ್ಕಿ ತಾಲ್ಲುಕಿನ ತಮ್ಮ ಗ್ರಾಮವಾದ ಕೇಸರ್ ಜವಳಗಾ ಗ್ರಾಮಕ್ಕೆ ಹೋಗುತ್ತಿದ್ದ ಅಶೋಕ ಗುಣವಂತರಾವ್ ಕೋಲೇಕರ್ (ಪಾಟೀಲ) ವಯಸ್ಸು 52 ವರ್ಷ, ಸೂರ್ಯಕಾಂತ ಹನ್ಮಂತ ಖಂಡೇಕರ, ವಯಸ್ಸು 65 ವರ್ಷ ಮೃತರಾಗಿದ್ದಾರೆ.

ಇನ್ನಿಬರು ಭಾಲ್ಕಿ ತಾಲ್ಲುಕಿನ ಸೊಮಾಪುರ ಗ್ರಾಮದವರಾದ ತಾನಾಜಿ ಬಿರಾದಾರ್ (29) ಮತ್ತು ಮುಖೇಶ ಬಿರಾದಾರ್ ಅವರು ತುಳಜಾಪುರ ದೇವಿ ದರ್ಶನಕ್ಕೆ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿರುವುದಾಗಿ ಮಹಾರಾಷ್ಟ್ರದ ಔರಾದ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗೋಪಾಲ್ ಶಿಂಧೆ ಈ ಮಾಹಿತಿ ನೀಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!