spot_img
spot_img

ಎರಡು ದ್ವಿಚಕ್ರ ವಾಹನಗಳ ಮಧ್ಯೆ ಭೀಕರ ರಸ್ತೆ ಅಫಘಾತ

Must Read

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಶಾಸಕ ಶರಣು ಸಲಗರ

ಬೀದರ: ಬಸವಕಲ್ಯಾಣ ಪಟ್ಟಣದ ಸಸ್ತಾಪುರ ಬ್ರಿಜ್ ಹತ್ತಿರ ಎರಡು ಬೈಕ್ ಗಳ ಮದ್ಯೆ ಭೀಕರ ಅಫಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಹಾಜರಿದ್ದ ಶಾಸಕ ಶರಣು ಸಲಗರ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ  ತೆಗೆದು ಕೊಂಡು ಹೋಗಿ ಉಪಚಾರ ಮಾಡಿ ಮಾನವಿಯತೆ ಮೆರೆದಿದ್ದಾರೆ

ಬಸವಕಲ್ಯಾಣ ತಾಲ್ಲುಕಿನ ಕಾಂಬಳೆವಾಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಸಮಯದ  ಸುಮಾರು ಹತ್ತುಗಂಟೆಯ ಆಸುಪಾಸಿನಲ್ಲಿ ರಸ್ತೆ ಮುಖಾಂತರ ಬರುತ್ತಿರುವಾಗ  ಎದುರು ಬದುರಾದ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಆಗಿದ್ದು ರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದ್ಯಶ್ಯ ನೋಡಿ ಶಾಸಕ ಶರಣು ಸಲಗರ ರವರು ತಮ್ಮ ವಾಹನಗಳು ನಿಲ್ಲಿಸಿ ಅಲ್ಲಿ ಬಿದ್ದ ವಾಹನ ಸವಾರರಿಗೆ ಪ್ರಥಮೋಪಚಾರ ನೀಡಿ ಅಂಬುಲೆನ್ಸ ಗೆ ಕಾಲ್ ಮಾಡಿದರು. ಅಂಬುಲೆನ್ಸ ಬರಲು ವಿಳಂಬ ಆಗುತಿರುವುದನ್ನು ಗಮನಿಸಿ ಖುದ್ದು ತಾವೇ ಅಫಘಾತ ಗ್ರಸ್ತರನ್ನು ತಮ್ಮ ಎರಡು ವಾಹನಗಳಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕರೆದುಕೊಂಡ ಬಂದು ಉಪಚಾರ ಕೊಡಿಸಿದರು.

ರಸ್ತೆಯಲ್ಲಿ ಬರುವಾಗಲೆ ವೈದ್ಯರು ಹಾಗು ಪೋಲಿಸ ರಿಗೆ ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿದ್ದು ಕೆಲವೇ ನಿಮಿಷಗಳಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿಸಿ ಮಾನವಿಯತೆ ಮೆರೆದರು. ಅಫಘಾತಕ್ಕೀಡಾದ ವಾಹನ ಸವಾರರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಒಬ್ಬರು ಮಾತ್ರ ಸಿರಿಯಸ್ ಆಗಿರುವುದಾಗಿ ತಿಳಿದು ಬಂದಿದೆ. ವಾಹನ ಸವಾರರು ಸಸ್ತಾಪುರ ಹಾಗು ಅತ್ಲಾಪುರ ದವರೆಂದು ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!