spot_img
spot_img

ಭೀಕರ ರಸ್ತೆ ಅಪಘಾತ ; ಚಾಲಕರಿಬ್ಬರ ಸಾವು

Must Read

ಬೀದರ – ಲಾರಿ ಮತ್ತು ಕಂಟೇನರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತ‌‌ದಲ್ಲಿ ಎರಡೂ ವಾಹನಗಳ ಚಾಲಕರು ಮೃತಪಟ್ಟ ಘಟನೆ ಸಂಭವಿಸಿದೆ.

ಲಾರಿ ಚಾಲಕ ವಿಜಯಕುಮಾರ್ ( 40 ) ಹಾಗೂ ಕಂಟೇನರ್  ಚಾಲಕ ರಾಮಕಿಶನ್ ( 32 ) ಸಾವನ್ನಪ್ಪಿದ ದುರ್ವೈವಿಗಳು.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಂಗವಿ ಕ್ರಾಸ್ ಬಳಿ ಈ  ಘಟನೆ ನಡೆದಿದ್ದು ಮತ್ತಿಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

ಗುಜರಾತಿನಿಂದ ಟೈಲ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ  ಚಾಲಕ‌ನ ನಿರ್ಲಕ್ಷ್ಯದಿಂದಾಗಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಭಾಲ್ಕಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ,ಪರಿಶೀಲನೆ ನಡೆಸಿದ್ದಾರೆ.

ಅಪಘಾತದಲ್ಲಿ ಲಾರಿ ಹಾಗೂ ಕಂಟೇನರ್ ವಾಹನಗಳು ನಜ್ಜುಗುಜ್ಜಾಗಿರುವ ಸ್ಥಿತಿ ನೋಡಿದರೆ ಘಟನೆಯ ಗಂಭೀರತೆಯ ಅರಿವಾಗುತ್ತದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!