ಗುರ್ಲಾಪೂರ – ಸಮಿಪದ ಇಟನಾಳದ ವಿದ್ಯಾ ಸರಸ್ವತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಹಾಗು ತಾಲುಕಾಮಟ್ಟದ ಅತ್ಯುತ್ತಮ ಶಿಕ್ಷಕರಾದ ಪ್ರತಾಪ ಜೋಡಟ್ಟಿ ಕಪ್ಪಲಗುದ್ದಿ ಶಾಲೆ, ಅಜೀತ ಐಹೂಳೆ ನಾಗನೂರ ಶಾಲೆಯ ಶಿಕ್ಷಕರನ್ನು ಶಾಲೆಯ ಅಧ್ಯಕ್ಷರಾದ ವಿಠ್ಠಲ ಸುರಾಣಿ ಇವರ ಅಧ್ಯಕ್ಷತೆಯಲ್ಲಿ ಸತ್ಕರಿಸಲಾಯಿತು.
ಸತ್ಕಾರ ಸಮಾರಂಭದ ಸಾನ್ನಿಧ್ಯವನ್ನು ಗ್ರಾಮದ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತಾ, ಶಿಕ್ಷಕ ಹಾಗು ಮಕ್ಕಳ ಬಾಂಧವ್ಯದ ಬಗ್ಗೆ ತಿಳಿಸಿ, ಇಂತಹ ಶಿಕ್ಷಕರು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಮಕ್ಕಳ ಒಂದು ಸುಂದರ ಜೀವನ ರೂಪಿಸುವಲ್ಲಿ ಗುರುಗಳ ಪಾತ್ರ ಅತಿ ಮಹತ್ವದಾಗಿದೆ. ಮಕ್ಕಳು ಗುರುಗಳಿಗೆ ವಿನಯ ಶೀಲರಾಗಿರಬೇಕು ಹಾಗೆ ಮಕ್ಕಳ ಸಾಧನೆ ಬಗ್ಗೆ ಪಾಲಕರ ಪಾತ್ರವು ಅತಿ ಮುಖ್ಯವಾಗಿರುತ್ತದೆ ಎಂದರು.
ಈ ಭಾಗದ ಈ ವಿದ್ಯಾ ಸರಸ್ವತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕೀರ್ತಿ ಪತಾಕೆ ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಹಾರಾಡಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳು ಸಹ ಶಿಕ್ಷಕರು ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ಉಪಸ್ಥತರಿದ್ದರು.