ಮೂಡಲಗಿ: ಬಿ.ಎಸ್.ಎನ್.ಎಲ್ ಟೆಲಿಫೋನ್ ಸಲಹೆಗಾರ ಸಮಿತಿಗೆ ನೂತನವಾಗಿ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಬಿಜೆಪಿ ಕಾರ್ಯಕರ್ತರಾದ ಈರಪ್ಪ ಢವಳೇಶ್ವರ, ಶ್ರೀಶೃಲ ಪೂಜೇರಿ, ಬಸನಗೌಡ ಕೊಳದೂರ, ರೇನಪ್ಪ ಸೋಮನಗೌಡ, ಮಲ್ಲೇಶ ಸುಳೇಭಾವಿ ಅವರನ್ನು ಸಂಸದ ಈರಣ್ಣ ಕಡಾಡಿ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಮಕಗೊಂಡ ನೂತನ ಸದಸ್ಯರನ್ನು ಭಾರತ ದೂರ ಸಂಪರ್ಕ ಸಂಚಾರ ನಿಗಮದ ವಿಭಾಗ ಅಧಿಕಾರಿ ಎಸ್.ಕೆ.ಘೋಷ ಈ ಕುರಿತು ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲಾ ದೂರಸಂಪರ್ಕ ನಿಗಮಕ್ಕೆ ಸಲಹೆಗಾರ ಸಮಿತಿಯ ಸದಸ್ಯರಾಗಿ 2024ರ ಜ. 13ರವರೆಗೆ ಇವರ ಅಧಿಕಾರ ಅವಧಿ ಇರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿ ನೇಮಕಗೊಂಡ ಸದಸ್ಯರೆಲ್ಲ ಕುಂದು ಕೊರತೆಯಾಗದಂತೆ ಗ್ರಾಹಕರ ಹಿತ ಕಾಪಾಡಬೇಕು ಎಂದರು.
ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಾದ ತಮ್ಮಣ ದೇವರ, ಸುರೇಶ ಮಠಪತಿ, ಅಶೋಕ ಶಿವಾಪೂರ, ಶ್ರೀಕಾಂತ ಕೌಜಲಗಿ, ಅಡಿವೆಪ್ಪ ಕುರಬೇಟ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಬಸವರಾಜ ಹಿಡಕಲ್, ನಿಂಗಪ್ಪ ದುಂಡನ್ನವರ, ಭೀಮಶಿ ಬಂಗಾರಿ, ಈಶ್ವರ ಗಾಡವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.