spot_img
spot_img

ಬಹುಮುಖ ಪ್ರತಿಭೆ.ಬಿ.ಆರ್.ಜಕಾತಿ

Must Read

- Advertisement -

ಸಪ್ಟೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಧಾರವಾಡದ ಚಿತ್ರಕಲಾ ಶಿಕ್ಷಕ ಬಿ. ಆರ್. ಜಕಾತಿಯವರ ಸಾವಿನ ಮನೆಯಲ್ಲಿ ರಕ್ತದಾನ ಹೆಸರಿನ ಕಿರುಚಿತ್ರ ಬಿಡುಗಡೆ ಆಯಿತು. ಈ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿ ಯಾದವರು  ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ರಾಮಪ್ಪ ಮನಹಳ್ಳಿ. ಖ್ಯಾತ ಗಾಯಕ ವಿಶ್ವ ಪ್ರಸಾದ ಗಾಣಗಿ. ಎಲ್.ಐ.ಲಕ್ಕಮ್ಮನವರ ಹಾಗೂ ನಾನು. ಜೊತೆಗೆ ಇನ್ನಿತರ ಪ್ರಮುಖ ಅತಿಥಿಗಳು.

ನನಗೆ ಇತ್ತೀಚಿನ ವರ್ಷಗಳಲ್ಲಿ ಬಾಬಾಜಾನ್ ಮುಲ್ಲಾ ಹಾಗೂ ನಂದಕುಮಾರ್ ದ್ಯಾಂಪುರ ಅವರ ಪರಿಚಯ ಶಿಕ್ಷಕ ವೃತ್ತಿಯ ಜೊತೆಗೆ ಕಲಾವಿದ ಶಿಕ್ಷಕರನ್ನು ಹೆಚ್ಚು ಪರಿಚಯಿಸಿದ್ದು ನನ್ನ ಭಾಗ್ಯ ವೆಂದು ಹೇಳುವೆ. ಆ ದೃಷ್ಟಿಯಲ್ಲಿ ಪರಿಚಿತವಾಗಿ ತಮ್ಮ ಕಿರು ಚಿತ್ರದ ಬಿಡುಗಡೆ ಯ ಅತಿಥಿಯಾಗಲು ಜಕಾತಿ ಗುರುಗಳು ನನಗೆ ಆಮಂತ್ರಣ ನೀಡಿದ್ದರು. ಚಲನಚಿತ್ರ ಅನಾವರಣಗೊಂಡಿತು. ನಾನು ಅದರ ಲಿಂಕ್ ಬಳಸಿ ವೀಕ್ಷಿಸಿದೆ.

ವ್ಯಕ್ತಿಯ ಬಡತನ ಆತನ ಮನಸ್ಸಿನ ಮೇಲೆ ಬೀರುವ ಪರಿಣಾಮ. ತಳಮಳ ದುಃಖ ಮಾನಸಿಕ ತುಮುಲ ಸಾವಿನ ಮನೆಯಲ್ಲಿ ರಕ್ತದಾನ ಕಟ್ಟಿ ಕೊಟ್ಟಿದೆ. ಕೊನೆಯ ದೃಶ್ಯವಂತೂ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತು. ಸಮಯ 7 ಗಂಟೆ. ನನಗೆ ಧಾರವಾಡದಿಂದ ನಮ್ಮೂರಿನ ಬಸ್ 8.30.ಜಕಾತಿ ಗುರುಗಳಿಗೆ ನನ್ನ ಪರಿಸ್ಥಿತಿ ತಿಳಿಸಿದಾಗ ತಮ್ಮ ಕಾರಿನಲ್ಲಿ ನನ್ನನ್ನು ಧಾರವಾಡದ ವರೆಗೆ ಕರೆದುಕೊಂಡು ಬಂದು ನನ್ನ ಬಸ್ ಹಿಡಿಯಲು ಸಹಕರಿಸಿದರು.

- Advertisement -

ಬಹಳ ಶಾಂತ ಸೌಮ್ಯ ಸ್ವಭಾವದ ಜಕಾತಿ ಯವರ ಪರಿಚಯ ಕೇವಲ ಒಂದು ವರ್ಷದ ಹಿಂದಿನದು. ಬದುಕಿನ ನೋವು ನಲಿವುಗಳ ನಡುವೆ ತಮ್ಮಲ್ಲಿ ನ ಸೃಜನಶೀಲ ಬರವಣಿಗೆಯ ಮೂಲಕ ಕಿರುಚಿತ್ರ ತಯಾರಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿಕೊಂಡವರೆಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ

ಬಾಲ್ಯ ಹಾಗೂ ವಿದ್ಯಾಭ್ಯಾಸ:

ಬಸವಲಿಂಗ ರುದ್ರಪ್ಪ ಜಕಾತಿ  ಹುಟ್ಟಿದ್ದು  ಬೈಲಹೊಂಗಲ ತಾಲೂಕಿನ ಕೆಂಗಾನೂರಿನಲ್ಲಿ. ತಂದೆ ರುದ್ರಪ್ಪ ತಾಯಿ ಗಂಗಮ್ಮ. ಈ ದಂಪತಿಗಳ 5 ಜನ ಮಕ್ಕಳಲ್ಲಿ ಬಸವಲಿಂಗ 4 ನೆಯವರು. ಓರ್ವ ಅಣ್ಣ ಇಬ್ಬರು ಅಕ್ಕಂದಿರು.ಓರ್ವ ತಮ್ಮ. ಬೈಲಹೊಂಗಲ ತಾಲೂಕಿನ ಕೆಂಗಾನೂರು ಇವರ ಮೂಲಸ್ಥಳ. ಇಂತಹ ಕುಟುಂಬದಲ್ಲಿ ಜನಿಸಿದ ಬಸವಲಿಂಗನ ಪ್ರಾಥಮಿಕ ಶಿಕ್ಷಣ ಕೆಂಗಾನೂರಿನಲ್ಲಿ ಜರುಗಿತು. 5 ರಿಂದ 9 ನೇ ತರಗತಿ ಬೈಲಹೊಂಗಲ ದಲ್ಲಿ ಜರುಗಿತು.

- Advertisement -

ಎಸ್. ಎಸ್. ಎಲ್. ಸಿ ಬೆಳವಡಿಯಲ್ಲಿ ಮುಗಿಸಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಮುಂದಿನ ವ್ಯಾಸಂಗಕ್ಕೆ ಧಾರವಾಡಕ್ಕೆ ಬಂದು ಇಲ್ಲಿ  ಡಿ. ಎಂ. ಸಿ ಶಿಕ್ಷಣಕ್ಕೆ ಸೇರಿದರು. ಎರಡು ವರ್ಷಗಳ ವ್ಯಾಸಂಗ ಪೂರೈಸಿದರು. ಎರಡನೇ ವರುಷದ ಫಲಿತಾಂಶ  ಇವರ ಮನಸಿಗೆ ತೃಪ್ತಿ ತಾರದಿದ್ದಾಗ  ಬೆಳಗಾವಿ ಗೆ ಬಂದು ಅಲ್ಲಿ ಮತ್ತೆ ಎರಡನೇ ವರ್ಷಕ್ಕೆ ದಾಖಲಾತಿ ಹೊಂದಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ನಂತರ ನೌಕರಿ ಮಾಡುತ್ತಾ ಧಾರವಾಡದ ಡಿಪ್ಲೊಮಾ ಫೈನ್ ಆರ್ಟ ಮುಗಿಸಿದರು. ಇದು ಜಿಲ್ಲೆಗೆ ಎರಡನೇ ಸ್ಥಾನ ಪಡೆಯುವಂತಾಯಿತು.

ಉದ್ಯೋಗ ಅರಸುತ್ತಾ ಬದುಕು:

ಶಿಕ್ಷಣವೇನೋ  ಆಯಿತು. ಬದುಕಿನ ನೆಲೆಯಲ್ಲಿ ಉದ್ಯೋಗ ಬೇಕಲ್ಲ. ಆಗ ಕಿತ್ತೂರು ಹತ್ತಿರದ ಕೆಂಗಾನೂರಿನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದರು. ಆದರೆ ಆ ಹುದ್ದೆ ಅನುದಾನಕ್ಕೆ ಒಳಪಡುವ ಸಮಯ ದೂರ ಎಂದು ತಿಳಿದುಕೊಂಡು ಧಾರವಾಡಕ್ಕೆ ಆಗಮಿಸಿದರು.

ಧಾರವಾಡಲ್ಲಿ ಶ್ರೀನಗರ ದಲ್ಲಿ ಶ್ರೀ ಚನ್ನಬಸವೇಶ್ವರ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸತೊಡಗಿದರು  ಮೊದಲಿನಿಂದಲೂ ಕತೆ ಕವನ ಬರೆಯುವ ಹವ್ಯಾಸ ಹೊಂದಿದ್ದ ಇವರು ಬರೆದ ‘ಮನಸಿಗೊದಗದ ಸಮಯ’ ಕಥೆ ಕನ್ನಡಮ್ಮ ದಲ್ಲಿ ಪ್ರಕಟವಾಗಿತ್ತು. ನಂತರ ಮತ್ತೊಂದು ಕತೆ ‘ಬೇಸ್ತು’ ಪಾಟೀಲ ಪುಟ್ಟಪ್ಪನವರ ಪ್ರಪಂಚ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ‘ಸಾವಿನಲ್ಲಿ ಒಂದಾದೆವು’ ಕತೆ ಕನ್ನಡಮ್ಮದಲ್ಲಿ ಪ್ರಕಟವಾಗಿದೆ. ಇನ್ನೂ ಹಲವು ಕತೆಗಳು ಇವರ ನೋಟ್ ಪುಸ್ತಕ ದಲ್ಲಿ ಬರೆದಿಟ್ಟಿರುವರು. ಹೀಗೆ ಸಾಹಿತ್ಯ ಹಾಗೂ ನೌಕರಿ ಬದುಕು ಸಾಗಿರುವ ಸಂದರ್ಭದಲ್ಲಿ ಪರಿಚಯವಾದವರು ಬಾಬಾಜಾನ್ ಮುಲ್ಲಾ.

ಕಿರುಚಿತ್ರ ಗಳ ಕಲಾವಿದ:

ಇಂತಹ ಸಂದರ್ಭದಲ್ಲಿ ಬಾಬಾಜಾನ್ ಮುಲ್ಲಾ ತಮ್ಮ ಕಿರುಚಿತ್ರ ‘ಬಾಗಿನ’ ದಲ್ಲಿ ಅಭಿನಯಿಸಲು ಎಂ. ಎಲ್. ಎ ಪಾತ್ರ ಕ್ಕೆ ಕಲಾವಿದರ ಅನ್ವೇಷಣೆ ಯಲ್ಲಿ ತೊಡಗಿದಾಗ ಅವರ ಕಣ್ಣಿಗೆ ಜಕಾತಿ ಅವರನ್ನು ಆ ಪಾತ್ರಕ್ಕೆ ಕೇಳಿದಾಗ ಅಭಿನಯದ ಆಲೋಚನೆ ಇರದ ಇವರು ಕಲಾವಿದರಾಗುವ ಅವಕಾಶ ದೊರೆತು ಆ ಪಾತ್ರ ತುಂಬಾ ಚೆನ್ನಾಗಿ ಮೂಡಿಬರಲು ಎಲ್ಲರೂ ಜಕಾತಿ ಗುರುಗಳ ಪಾತ್ರ ಸೂಪರ್ ಎಂದಾಗ ಇವರೊಳಗಿನ ಕಲಾವಿದ ಎಲ್ಲರ ಗಮನ ಸೆಳೆದಿದ್ದ.

ನಂತರ ಬಾಬಾಜಾನ್ ಮುಲ್ಲಾ ಅವರ ನಿರ್ದೇಶನದಲ್ಲಿ ‘ದೀಪಾ’ ಎನ್ನುವ ಕಿರುಚಿತ್ರ ದಲ್ಲಿ ಅಭಿನಯಿಸುವ ಅವಕಾಶ ದೊರೆತು ಅದರಲ್ಲಿ ಡಾಕ್ಟರ್ ಪಾತ್ರ ಮಾಡಿದರು. ಆ ಕಿರುಚಿತ್ರ ರಾಜ್ಯ ಪ್ರಶಸ್ತಿ ಪಡೆಯಿತು. ಆಗ ಇವರಿಗೆ ತಾವೇ ಬರೆದ ಕಥೆಗಳನ್ನು ಕಿರುಚಿತ್ರ ಮಾಡಬಹುದು ಎನಿಸಿ ತಾವೇ ಕಿರುಚಿತ್ರ ನಿರ್ಮಾಣ ಕ್ಕೆ ಮುಂದಾದರು.

ಆಗ ಮೂಡಿ ಬಂದಿದ್ದು ಚಿಗುರಿದ ಕನಸು. ಕಿರುಚಿತ್ರ. ಬಹಳ ಪ್ರಶಂಸೆಗೆ ಈ ಕಿರುಚಿತ್ರ ಪಾತ್ರ ವಾಯಿತು. ಹೀಗೆ ಮುಂದೆ ಪಿಂಚಣಿ ಪಾಡು ಮೂಡಿ ಬಂದಿತು. ಕಳೆದ ಹಲವು ತಿಂಗಳ ಹಿಂದೆ ಸಾವಿನ ಮನೆಯಲ್ಲಿ ರಕ್ತದಾನ. ಬಿಡುಗಡೆಗೊಂಡು ಬಹಳಷ್ಟು ಜನರಿಂದ ಪ್ರಶಂಸೆಗೆ ಒಳಗಾಯಿತು. ಇವರ ಕಿರುಚಿತ್ರ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹಲವು ಮಹನೀಯರಲ್ಲಿ ಒಂದೆರಡನ್ನು ಇಲ್ಲಿ ನೀಡುವೆ.

‘ಸಾವಿನ ಮನೆಯಲ್ಲಿ ರಕ್ತದಾನ” ತಮ್ಮ ಕಿರುಚಿತ್ರ ವನ್ನು ಈ ದಿನ ಮತ್ತೊಮ್ಮೆ ವೀಕ್ಷಿಸಿದೆ, ತಮ್ಮ ಅಭಿನಯ ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ, ಜನಮಾನಸದಲ್ಲಿ ರಕ್ತದಾನದ ಕುರಿತು ಸಾಮಾಜಿಕ ಜಾಗೃತಿಯನ್ನು ಮೂಡಿಸಲು ತಮ್ಮ ಚಿತ್ರ ತಂಡ ಕೈಗೊಂಡ  ಕೈಂಕರ್ಯ ಮೆಚ್ಚುವಂತದ್ದು. ತಮಗೂ ಹಾಗೂ ಚಿತ್ರತಂಡದ ಎಲ್ಲಾ ಕಲಾವಿದರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಮಾಲತೇಶ ಗು. ನಿಂಬಕ್ಕನವರ.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ

ಚಿಗುರಿದ ಕನಸು”:

ಚಿಗುರಿದ ಕನಸು ಅತ್ಯಂತ ಉಪಯುಕ್ತವಾದ ಸಾಮಾಜಿಕ ಕಿರು ಚಿತ್ರ.

ಅದರಲ್ಲೂ ವಿಷೇಶವಾಗಿ ಹೆಣ್ಣು ಮಗುವಿನ ಭವಿಷ್ಯದ ಚಿತ್ರ ನೋಡಿ ತುಂಬಾ ಸಂತೋಷವಾಯಿತು.

ಭವ್ಯ ಪರಂಪರೆ ಹೊಂದಿರುವ ಭಾರತ ಇನ್ನು ಅನೇಕ ದರಿದ್ರ ಸಾಮಾಜಿಕ ಕಟ್ಟು ಪಾಡುಗಳಿಂದ ನಲಗುತ್ತಿದೆ. ಈ ದೇಶದ ಸಾಮಾಜಿಕ ಸುಧಾರಣೆಗೆ ಬುದ್ಧ,ಬಸವಣ್ಣ ಜೋತಿಬಾ ಫುಲೆ, ಶಾಹು ಮಹಾರಾಜ, ಡಾ.ಬಿ.ಆರ್. ಅಂಬೇಡ್ಕರ್ ಮತ್ತಿತರ ಮಹನಿಯರು ತಮ್ಮ ಜೀವನವನ್ನೆ ಮುಡಿಪಾಗಿಟ್ಟು ಸಾಮಾಜಿಕ ಕ್ರಾಂತಿಯನ್ನೆ ಉಂಟು ಮಾಡಿದರು. ಆದರು ಈ ದೇಶ ಇನ್ನೂ ಇಂತಹ ರೋಗಗ್ರಸ್ತ ವ್ಯವಸ್ಥೆಯಿಂದ ಹೊರ ಬಂದಿಲ್ಲದಿರುವುದು ನೋವಿನ ಸಂಗತಿ. ಇಂತಹ ವ್ಯವಸ್ಥೆಯ ವಿರುದ್ದ ಸಾಮಾಜಿಕ ಬದ್ಧತೆಯನ್ನ ಪ್ರದರ್ಶನ ಮಾಡಿದ ಚಿಗುರಿದ ಕನಸು ಚಿತ್ರ ತಂಡಕ್ಕೆ ಅನಂತ ಅನಂತ ಧನ್ಯವಾದಗಳು.

ಅದರಲ್ಲೂ ವಿಶೇಷವಾಗಿ ಬಿ.ಆರ್. ಜಕಾತಿ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು.

ನಿಮ್ಮ ಈ ಸಾಮಾಜಿಕ ಕಳಕಳಿಗೆ ಕೃತಜ್ಞತೆಗಳು ಶುಭವಾಗಲಿ.

-ಸಿದ್ದಾಥ೯.ಶಿವಶರಣ
ರಾಜ್ಯಶಾಸ್ತ್ರ ಉಪನ್ಯಾಸಕರು,
ಧಾರವಾಡ

ಹೀಗೆ ಇದರೊಳಗಿನ ಕಲಾವಿದ ಕತೆಗಾರ ನಿರ್ದೇಶಕ ಹೊರಬರಲು ಕಾರಣ ಬಾಬಾಜಾನ್ ಮುಲ್ಲಾ ಅವರು ಎಂದರೆ ಅತಿಶಯೋಕ್ತಿ ಆಗಲಾರದು.ಸದ್ಯ ಅನಾಥರು ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದು ಇದೇ 26 ರಂದು ಬಿಡುಗಡೆ ಇದೆ

ಹೀಗೆ ಚಿತ್ರ ಕಲಾ ಶಿಕ್ಷಕರಾಗಿ ಕಲಾವಿದರಾಗಿ ನಿರ್ದೇಶಕ ರಾಗಿ ಬಹುಮುಖ ಪ್ರತಿಭೆ ಹೊಂದಿರುವ ವ್ಯಕ್ತಿ ಬಿ. ಆರ್. ಜಕಾತಿ ಗುರುಗಳು.

ಇವರೇ ಕಥೆ ಬರೆದು ನಿರ್ದೇಶಿಸಿದ ಕಿರು ಚಲನಚಿತ್ರಗಳು:

  1. ಚಿಗುರಿದ ಕನಸು
  2. ಪಿಂಚಣಿ ಪಾಡು
  3. ಸಾವಿನ ಮನೆಯಲ್ಲಿ ರಕ್ತದಾನ
  4. ಅನಾಥರು

ನಟಿಸಿದ ಕಿರು ಚಲನಚಿತ್ರಗಳು:

  1. ಬಾಗಿನ
  2. ದೀಪಾ
  3. ಬದುಕು ಬಂಡಿ
  4. ಸ್ವಚ್ಛ ನಗರಕ್ಕಾಗಿ ನಮ್ಮ ಕೊಡುಗೆ

ಪಡೆದ ಪ್ರಶಸ್ತಿ ಪತ್ರಗಳು:

  1. ದೀಪಾ ಕಿರುಚಿತ್ರ ನಟನೆಗೆ ರಾಜ್ಯ ಪ್ರಶಸ್ತಿ
    ಹಾಗೂ ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಅಪರ ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಶಸ್ತಿ ಪತ್ರ ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿ ಪತ್ರಗಳು ದೊರೆತಿವೆ.

ಕೌಟುಂಬಿಕ ಜೀವನ:

ಇವರ ಪತ್ನಿ ಗೀತಾ ಅಂಗನವಾಡಿ ಕಾರ್ಯಕರ್ತೆ.ನಾವಿಬ್ಬರು ನಮಗಿಬ್ಬರು ಎಂಬಂತೆ ಚಿಕ್ಕ ಚೊಕ್ಕ ಸಂಸಾರ ಇವರದು. ಮಗ ವಿನೋದ ಡಿಪ್ಲೊಮಾ ಸಿವಿಲ್ ಶಿಕ್ಷಣ ಮುಗಿಸಿರುವನು ಮಗಳು ವಿದ್ಯಾ ಶ್ರೀ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವಳು. ತಮ್ಮ ಚಿತ್ರ ಕಲಾ ಶಿಕ್ಷಕ ವೃತ್ತಿ ಬದುಕಿನಲ್ಲಿ ಸರಳ ಸೌಮ್ಯ ಸ್ವಭಾವದ ಜಕಾತಿ ಅವರ ಬಹುಮುಖ ಪ್ರತಿಭೆ ಗೆ ಇನ್ನೂ ಹೆಚ್ಚು ಪ್ರಶಸ್ತಿ ಸಿಗಲಿ ಎಂದು ಆಶಿಸುವೆನು.


ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿ ಗಳು
ಮಾರುತಿ ಬಡಾವಣೆ ಸಿಂದೋಗಿ  ಕ್ರಾಸ್ ಮುನವಳ್ಳಿ
ತಾಲೂಕು ಸವದತ್ತಿ
ಜಿಲ್ಲೆ ಬೆಳಗಾವಿ 9449518400   8971117442

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group