spot_img
spot_img

ಶಿವನೆಡೆಗೆ ನಡೆದು ಹೋದ ನಡೆದಾಡುವ ದೇವರು

Must Read

ನಮ್ಮನ್ನಗಲಿದ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ತಮ್ಮ ೮೨ ನೇ ವಯಸ್ಸಿನಲ್ಲಿ ವೈಕುಂಠ ಏಕಾದಶಿಯಂಥ ಪವಿತ್ರ ದಿನದಂದು ಶಿವನಲ್ಲಿ ಐಕ್ಯರಾಗಿದ್ದಾರೆ.

ವಿಜಯಪುರದ ಜ್ಞಾನಯೋಗಾಶ್ರಮದ ಸ್ವಾಮೀಜಿ, ಶತಮಾನದ ಸಂತ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ವಯೋಸಹಜ ಕಾಯಿಲೆಯಿಂದಾಗಿ ಈ ಸಂಜೆ ೬.೦೫ ಕ್ಕೆ ಲಿಂಗೈಕ್ಯರಾದರೆಂಬುದಾಗಿ ಅವರ ಸಮೀಪವರ್ತಿ ಸ್ವಾಮೀಜಿಗಳು ಪ್ರಕಟಿಸಿದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯವರ ಹತ್ತಿರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಎಮ್ ಬಿ ಪಾಟೀಲ ಮುಂತಾದವರು ಇದ್ದರು. ನಿನ್ನೆ ತಾನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಶ್ರೀಗಳ ಜೊತೆಯಿದ್ದು ಪ್ರಧಾನಿ ಮೋದಿಯವರ ಜೊತೆ ಕೂಡ ಮಾತನಾಡಿ ಶ್ರೀಗಳ ಆರೋಗ್ಯಕ್ಕೆ ಹಾರೈಸಿದ್ದರು.

ಅತ್ಯಂತ ಸರಳ ಜೀವಿ ಸಿದ್ದೇಶ್ವರ ಸ್ವಾಮೀಜಿ ತಮ್ಮ ಮರಣಾನಂತರ ಯಾವುದೇ ಗುಡಿ, ಗದ್ದುಗೆಗಳನ್ನು ಕಟ್ಟಬಾರದು ಎಂದು ಮಾತು ತೆಗೆದುಕೊಂಡಿದ್ದರಂತೆ. ಅಪಾರ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಸಿದ್ದೇಶ್ವರ ಶ್ರೀಗಳು ಸರಳಾತಿಸರಳ ಜೀವನ ಸಾಗಿಸಿದವರು. ಸರ್ಕಾರಗಳು ಜ್ಞಾನಯೋಗಾಶ್ರಮಕ್ಕೆ ಕೋಟಿ ಕೋಟಿ ಅನುದಾನ ನೀಡಲು ಸಿದ್ದವಿದ್ದರೂ ಎಲ್ಲವನ್ನೂ ಸರಳವಾಗಿ ತಿರಸ್ಕರಿಸಿ ಸ್ವಾವಲಂಬಿಯಾಗಿ ಬದುಕಿದರಲ್ಲದೆ ಅನಾರೋಗ್ಯದ ಸಮಯದಲ್ಲಿ ಕೂಡ ಯಾವುದೇ ಆಸ್ಪತ್ರೆಗೆ ಹೋಗದೆ,ಔಷಧ ಸೇವಿಸದೆ ಪ್ರಕೃತಿಯೇ ಅದನ್ನು ಪರಿಹರಿಸಬೇಕು ಎಂದು ಹಠ ಹಿಡಿದು ದೇಹತ್ಯಾಗ ಮಾಡಿದರು. ಪ್ರಧಾನಿಯವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹೇಳಿದರೂ, ಜಪ್ಪಯ್ಯ ಅಂದರೂ ಔಷಧ ಸೇವಿಸಲಿಲ್ಲ.

ತಂದೆ ಓಗೆಪ್ಪಗೌಡ ಸಿದಗೊಂಡ ಪಾಟೀಲ, ತಾಯಿ ಸಂಗಮ್ಮ ಎಂಬುವವರ ಮಗನಾಗಿ ೧೯೪೧ ರ ಅಕ್ಟೋಬರ್ ೨೪ ರಂದು ತಿಕೋಟದಲ್ಲಿ ಜನಿಸಿದ ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರ ದಲ್ಲಿ ಪಿಯುಸಿ ಶಿಕ್ಷಣ ಪಡೆದು, ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಐದು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದರು.

ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ಭಕ್ತ ಕೋಟಿಯಲ್ಲಿ ದುಃಖ ಮಡುಗಟ್ಟಿದ್ದು ಜ್ಞಾನಯೋಗಾಶ್ರಮದ ಹೊರಗಡೆ ಸಾವಿರಾರು ಭಕ್ತರು, ಹೆಣ್ಮಕ್ಕಳು, ಮಕ್ಕಳು ಕಣ್ಣೀರು ಹಾಕಿದರು. ನಾಳೆ ಸಂಜೆ ನಾಲ್ಕಕ್ಕೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದ್ದು ಅವರ ಅಂತಿಮ ದರ್ಶನಕ್ಕೆ ಸುಮಾರು ೨೦ ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು ಜನರು ಶಾಂತ ರೀತಿಯಿಂದ ವರ್ತಿಸಬೇಕು. ಶ್ರೀಗಳ ಸ್ವಭಾವದಂತೆಯೇ ಶಾಂತವಾಗಿರಬೇಕು ಎಂದು ಯತ್ನಾಳ ಅವರು ಭಕ್ತಕೋಟಿಯಲ್ಲಿ ಮನವಿ ಮಾಡಿಕೊಂಡರು.
ಜನರ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ರಾತ್ರಿ ೧೧ ಗಂಟೆಯಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಇದೆ ನಾಳೆ ಬೆಳಿಗ್ಗೆ ೬ ರಿಂದ ಸೈನಿಕ ಶಾಲೆಗೆ ಅವರ ಪಾರ್ಥಿವ ಶರೀರವನ್ನು ಕರೆದೊಯ್ಯಲಾಗುತ್ತದೆ ಅಲ್ಲಿ ಮಧ್ಯಾಹ್ನ ೩ ಗಂಟೆಯವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!