ಬೀದರ – ಕೆಮಿಕಲ್ ರಿಯಾಕ್ಷನ್ ಆಗಿರುವ ಕಾರಣ ಇಲ್ಲಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದು ಇನ್ನೂ ಮೂರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ
ಬೆಳಗಾವಿ ಮೂಲದ ಗುರುಪಾಟೀಲ್ ( 48 ) ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಅಸ್ವಸ್ಥಗೊಂಡ ಮೂವರನ್ನು ಕಲಬುರ್ಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಹುಮ್ನಾಬಾದ್ ಹೊರ ವಲಯದ ಸ್ಯೂಟಿಕ್ ಲ್ಯಾಬ್ ಕಾರ್ಖಾನೆಯಲ್ಲಿ ಔಷಧಿಗೆ ಬಳಸುವ ಪೌಡರ್ ತಯಾರಿಸುವಾಗ ಅವಘಡ ಸಂಭವಿಸಿದೆ.
ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ