ವಾಯುಸೇನೆಯ ಅಧಿಕಾರಿಯಾದ ಮೂಡಲಗಿ ಯುವಕ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಮೂಡಲಗಿ: ಸೇನಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆಯಾದ ಎನ್.ಡಿ.ಎ ಪರೀಕ್ಷೆ ಪಾಸಾದ ಸ್ಥಳೀಯ ಲಕ್ಷ್ಮೀ ನಗರದ ಯುವಕ ಗಿರೀಶ ಸದಾಶಿವ ಬಿಳ್ಳೂರ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ (ಫೈಟರ್ ಪೈಲಟ್) ಉನ್ನತ ಹುದ್ದೆಯನ್ನು ಹೈದರಾಬಾದಿನ ದುಂಡಿಗಲ್ ತರಬೇತಿ ಕೇಂದ್ರದಲ್ಲಿ ಪಡೆದು ಬಿದರನ ವಾಯು ನೆಲೆಯಾದ ಹೌಕ್ಸ್ (ಹಕೀಂ ಪೇಠ) ನಲ್ಲಿ ಪ್ರಥಮ ಸೇವೆ ಮಾಡಲಿದ್ದಾರೆ.

ಶನಿವಾರ ಹೈದರಾಬಾದನಲ್ಲಿ ಜರುಗಿದ ವಾಯು ಸೇನೆಯ ಉನ್ನತಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ದೇಶದ ಸೇನೆಯಲ್ಲಿಯ ಉನ್ನತ ಹುದ್ದೆಗೇರಿದರು. ಸ್ಪಧಾತ್ಮಕ ಯುಗದಲ್ಲಿ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನ ಪಡೆದು ಇತರರಿಗೂ ಮಾದರಿಯ ಯುವಕರಾಗಿದ್ದಾರೆ. ಭವಿಷ್ಯತ್ತಿನಲ್ಲಿ ಸೇನೆಯ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇವರಿಗಿದೆ.

ಗಿರೀಶ ಬಿಳ್ಳೂರ

- Advertisement -

ಹಿನ್ನೆಲೆ: ತಂದೆ ಸದಾಶಿವ ಬಿಳ್ಳೂರ ಹುಣಶ್ಯಾಳ (ಪಿ.ವಾಯ್)ನ ಪಿಕೆಪಿಎಸ್‍ದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ತಾಯಿ ಶೋಭಾತಾಯಿ ಪಾಟೀಲ ಇವರು ಸಮೀಪದ ಹಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಪ್ರಧಾನ ಗುರುಮಾತೆಯಾಗಿದ್ದಾರೆ.

ಗಿರೀಶ ಅವರು 1 ರಿಂದ 5 ನೇ ತರಗತಿಯವರೆಗೆ ನಾಗನೂರಿನ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಪೂರ ಸೈನಿಕ ಶಾಲೆಗೆ ಆಯ್ಕೆಯಾಗಿ ಪಿಯುಸಿವರೆಗೆ ವ್ಯಾಸಂಗಮಾಡಿದ್ದಾರೆ. ಪಿಯುಸಿ ದ್ವಿತೀಯ ವರ್ಷದಲ್ಲಿದ್ದಾಗ ಭಾರತೀಯ ಸೇನೆ ನಡೆಸುವ ನ್ಯಾಷನಲ್ ಡಿಫೆನ್ಸ್ ಆಕ್ಯಾಡೆಮಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪುಣೆಯ ಖಡಕ್ ವಾಸಲಾದಲ್ಲಿ 3 ವರ್ಷ ಪ್ರಾಥಮಿಕ ಹಂತದ ಸೇನಾ ತರಬೇತಿ ಪಡೆದು, 1 ವರ್ಷದ ವೈಮಾನಿಕ ತರಬೇತಿ ಮುಗಿಸಿರುತ್ತಾರೆ. ಕಿರಿಯ ವಯಸ್ಸಿನಲ್ಲಿ ದೇಶ ಸೇವೆಯ ಜವಾಬ್ದಾರಿ ಹೊತ್ತು ಇತರ ಯುವಕರಿಗೂ ಮಾದರಿಯಾಗಿದ್ದಾರೆ.

ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಮ್ ಲೋಕನ್ನವರ, ಚೈತನ್ಯ ವಸತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!