- Advertisement -
ಬೀದರ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬ ಮಹಿಳೆಯನ್ನು ಕತ್ತರಿಯಿಂದ ಇರಿದು ಕೊಲೆಗೈಯಲು ಯತ್ನ ಮಾಡಿದ ಘಟನೆ ಬೀದರ್ ನಗರದ ಮಾತೆ ಮಾನಿಕೇಶ್ವರಿ ಕಾಲೇಜು ಬಳಿ ನಡೆದಿದೆ.
ನಿಮಿಷಾ ಎಂಬ ಮಹಿಳೆಗೆ ಪವನ್ ಎಂಬ ಯುವಕ ಕತ್ತರಿಯಿಂದ ಬೆನ್ನು ಹಾಗೂ ಹೊಟ್ಟೆಗೆ ಇರಿದು ಕೊಲೆಗೆ ಯತ್ನ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿರುವ ಮಹಿಳೆ ಬೀದರ್ ನಗರದ ಮಾತೆ ಮಾನಿಕೇಶ್ವರಿ ಕಾಲೇಜು ಬಳಿ ಇರುವ ಮಹಿಳೆಯ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.
ಇಬ್ಬರಲ್ಲಿ ಹಳೆಯ ವೈಷಮ್ಯದ ಹಿನ್ನೆಲೆ ಕೊಲೆ ಯತ್ನ ಮಾಡಿರುವ ಆರೋಪ ಕೇಳಿ ಬಂದಿದ್ದು ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
- Advertisement -
ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡು ಗಾಂಧಿಗಂಜ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ