- Advertisement -
ಯಾದಗಿರಿ – ಯವಕನೋರ್ವ ತನ್ನ ಪೋಟೊ ಜೊತೆಗೆ ಹುಡಗಿ ಪೊಟೋ ಎಡಿಟ್ ಮಾಡಿ.ಸಾಮಾಜಿಕ ಜಾಲತಾಣದಲ್ಲಿ ಹರಿಬಿಟಿದ್ದಾನೆ ಎಂದು ಆರೋಪಿಸಿ. ಹುಡುಗಿ ಮನೆಯವರು ಯುವಕನನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಯಾದಗಿರ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ವಿರುಪಾಪುರ ದೊಡ್ಡಿಯಲ್ಲಿ ನಡೆದಿದೆ.
ಯುವಕ ನಾನು ಪೋಸ್ಟ್ ಮಾಡಿಲ್ಲ, ಕೈ ಮುಗಿತೀನಿ, ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡ್ರಿ ಎಂದು ಬೇಡಿಕೊಂಡರು ಕೇಳದ ಹುಡಗಿ ಮನೆಯವರು ಮನಬಂದಂತೆ ಥಳಿಸಿದ್ದಾರೆ.
ಯುವಕನಿಗೆ ದೊಣ್ಣೆಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡದಿದೆ.
- Advertisement -
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ