spot_img
spot_img

ಕನ್ನಡ ಸಾಹಿತ್ಯ  ಪರಿಷತ್ತಿನ ಸಾರ್ವಭೌಮತೆಗೆ ಧಕ್ಕೆ ತರುವ ಕಾರ್ಯ ಕೈಬಿಡಿ- ಮುಖ್ಯಮಂತ್ರಿಗಳಿಗೆ ಸಾಹಿತಿ ಭೇರ್ಯ ರಾಮಕುಮಾರ್ ಪತ್ರ

Must Read

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ.ಅದು ಯಾವುದೇ ಸರ್ಕಾರದ ಇಲಾಖೆಯ ಅಧೀನಕ್ಕೆ ಒಳಪಡಬಾರದು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು  ಚುನಾವಣೆಯಲ್ಲಿ ಬಹುಮತದ ಮೂಲಕ ಆಯ್ಕೆ ಆದವರು. ಅಂತಹವರಿಗೆ ಯಾವುದೋ ಆಧಿಕಾರಿಯ ಮುಂದೆ ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಬರಬಾರದು ಎಂದು ಸಾಹಿತಿ,ಪತ್ರಕರ್ತ ಹಾಗೂ ಕ.ಸಾ.ಪ ಅಜೀವ ಸದಸ್ಯರಾದ ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ. ಬರೆದಿರುವ ಅವರು ರಾಜ್ಯದಲ್ಲಿ ಕನ್ನಡ ನಾಡು-ನುಡಿಯ ಅಭ್ಯುದಯದ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ತಂದರು. ಕ.ಸಾ.ಪ ಕ್ಕೆ ತನ್ನದೇ ಆದ ಸಂವಿಧಾನವಿದೆ. ತನ್ನದೇ ಆದ ಆಡಳಿತ ವ್ಯವಸ್ಥೆ ಇದೆ.

ಸರ್ಕಾರದ ಅನುದಾನದಿಂದ  ಕ.ಸಾ.ಪ. ತನ್ನ ಚಟುವಟಿಕೆ ನಡೆಸುವುದು  ಹಾಗೂ ಸದಸ್ಯರ ಸದಸ್ಯತ್ವ ಹಣದಿಂದ ಹಾಗೂ  ದಾನಿಗಳ ಉದಾರ ದಾನದಿಂದಲೂ  ಕಾರ್ಯನಿರ್ವಹಿಸುತ್ತಿದೆ. ಕ.ಸಾ.ಪ ಅಧ್ಯಕ್ಷರು ರಾಜ್ಯ ಮಟ್ಟದ ಚುನಾವಣೆಯಲ್ಲಿ ಸದಸ್ಯರಿಂದ ಆಯ್ಕೆಯಾದವರು. ಈ ಎಲ್ಲ ಅಂಶಗಳನ್ನೂ ಸರ್ಕಾರ ಪರಿಗಣಿಸುವ ಅಗತ್ಯವಿದೆ. ಕ.ಸಾ.ಪ ಕ್ಕೆ  ಸ್ವಾಯತ್ತತೆ ನೀಡುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಜಿಲ್ಲಾ ಅಧ್ಯಕ್ಷರುಗಳೂ ಸಹ ಚುನಾವಣೆಯಲ್ಲಿ ಸದಸ್ಯರ ವಿಶ್ವಾಸ ಗಳಿಸಿ ಆಯ್ಕೆಗೊಂಡವರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ , ತಾಲ್ಲೂಕು ಮಟ್ಟದಲ್ಲಿ, ಇದೀಗ ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಕನ್ನಡ ನಾಡು-ನುಡಿ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಹೊಣೆ  ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಿದೆ. ಇಂತಹ ಸಂಸ್ಥೆಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಇನ್ನೂ ಹೆಚ್ಚಿನ ಅನುದಾನ ನೀಡಿ ನಾಡು-ನುಡಿಯ ಅಭ್ಯುದಯಕ್ಕೆ ರಾಜ್ಯ ಸರಕಾರ ಕಾರಣವಾಗಬೇಕು. ಇಂತಹ ನಾಡು-ನುಡಿ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಕನ್ನಡಿಗರ ಸಂಸ್ಥೆಗೆ ಅನುದಾನ ನೀಡುವ ಸಂದರ್ಭದಲ್ಲಿಯಾಗಲಿ ಅಥವಾ ಕನ್ನಡ ನಾಡು -ನುಡಿ ಅಭ್ಯುದಯದ ವಿಷಯದಲ್ಲಿಯಾಗಲಿ ಯಾವುದೇ ಸರ್ಕಾರಿ ಇಲಾಖೆಯ  ಆಶ್ರಯಕ್ಕೆ ನೀಡುವುದು ಐತಿಹಾಸಿಕ ಸಂಸ್ಥೆಯ ಪ್ರತಿಷ್ಟೆಗೆ ಧಕ್ಕೆ ತಂದಂತೆ  ಎಂದು ಭೇರ್ಯ ರಾಮಕುಮಾರ್  ಆಗ್ರಹಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತ್ತೆಗೆ ಹಾಗೂ  ಇತಿಹಾಸಕ್ಕೆ ಧಕ್ಕೆ ತರುವ ಸರ್ಕಾರದ ಯಾವುದೇ ಕ್ರಮಕೈಗೊಳ್ಳಬಾರದೆಂದು ಸಾಹಿತಿಗಳು, ಕನ್ನಡಪರ ಚಿಂತಕರು, ಕ.ಸಾ.ಪ ಅಜೀವ ಸದಸ್ಯರು  ಒತ್ತಾಯಿಸಬೇಕೆಂದವರು ಕೋರಿದ್ದಾರೆ.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!