spot_img
spot_img

ವಿನಾಯಕ ಸದ್ಭಕ್ತಿ ತಾಣ ಸ್ವಾನಂದಾಶ್ರಮದಲ್ಲಿ ಸದಿಲ್ಲದ ಅಕ್ಷರ ಕ್ರಾಂತಿ ವಿದ್ಯಾಚೇತನ

Must Read

ಬೆಂಗಳೂರು ಕನಕಪುರ ರಸ್ತೆಯ ಮೆಟ್ರೋ ನಂತರ ನೈಸ್ ರಸ್ತೆ ದಾಟಿ ಕೊಂಚದೂರ ಪಯಣಸಿದರೆ ಕುಂಬಳಗೋಡು ಕಡೆಗೆ ಸಾಗುವ ಅಗರ-ತಾತಗುಣಿ ರಸ್ತೆಯಲ್ಲಿ ಆಧ್ಯಾತ್ಮ ಆಸಕ್ತರನ್ನು ತನ್ನೆಡೆಗೆ ಸೆಳೆಯುತ್ತ ಸಾಮಾಜಿಕ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಪರೂಪದ ಸಂಘಟನೆ – ಗಣೇಶೋಪಾಸನೆಯ ಕೇಂದ್ರ ಸ್ವಾನಂದಾಶ್ರಮವಿದೆ.

ಈ ದೇವಾಲಯಕ್ಕೆ ದೈವೀಕ ಹಿನ್ನೆಲೆಯಿದೆ, ಇದರ ಮೂಲದಲ್ಲಿ ತಪಸ್ಸು ಇದೆ. ಸಕಲ ಆಶೋತ್ತರ ಸಿದ್ದಿಯ ನೀಡುವ ಸ್ವಾನಂದ ಬಾಲ ಗಣಪತಿ ನೆಲೆ ನಿಂತಿದ್ದಾನೆ. ಆಧುನಿಕತೆಯಲ್ಲೆ ಮಿಂಚಿದ್ದರು ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಡದ ವಿನಾಯಕೋಪಾಸನೆಯ ವೈವಿಧ್ಯಗಳು ಭಕ್ತರನ್ನು ನಿಬ್ಬೆರಗಾಗಿಸುತ್ತದೆ.

ಪುರೋಗಾಮಿ ಸಮಾಜಚಿಂತಕರು ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾ ಗಣಪತಿ ಪಂಚಾಯತನ ದೇಗುಲ ನಿರ್ಮಾಣಗೊಂಡಿದ್ದು ಮುದ್ಗಲ ಪುರಾಣೋಕ್ತ 32 ಗಣೇಶ ಸಹಿತ ಕೃತಯುಗಾದಿ ಗಣೇಶ ಮೂರ್ತಿ ಹಾಗೂ ಗಣೇಶ ಪುರಾಣದಲ್ಲಿನ ವರ್ಣಿತ ಗಣೇಶನ ಸ್ವ ನಿವಾಸವಾದ “ಸ್ವಾನಂದ ಭವನ”ದ ಪರಿಕಲ್ಪನೆಯ ವಿಶ್ವರೂಪಿ ವಿನಾಯಕ ಮಂಟಪ ಪ್ರೇಕ್ಷಣೀಯ.

ಮಾನವ ಸೇವೆಯನ್ನೇ ಮೂಲ ಮಂತ್ರವಾಗಿರಿಸಿಕೊಂಡಿರುವ ಆಶ್ರಮ, ಆಶ್ರಮದ ಸುತ್ತಲಿನ 12 ಗ್ರಾಮದ 24 ಸರ್ಕಾರಿ ಶಾಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವ ಒಂದು ವಿಶಿಷ್ಟ ಸೇವಾ ಕಾರ್ಯಕ್ರಮ – ವಿದ್ಯಾಚೇತನ ; ಅಲ್ಪಪ್ರಮಾಣದಲ್ಲಿ ಆರಂಭವಾದ ಈ ಯೋಜನೆಯು ಇದೀಗ 1667 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ , ಶೈಕ್ಷಣಿಕ ಸೌಲಭ್ಯವನ್ನು ನೀಡುವ ಗುರಿ ತಲುಪಿ ತನ್ಮೂಲಕ ಸಾಮಾಜಿಕ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಜೂನ್ 25 , ಶನಿವಾರ ಬೆಳಿಗ್ಗೆ 11ಕ್ಕೆ ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿದ್ಯಾಚೇತನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ .

ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ತೇಜಸ್ವಿ ಸೂರ್ಯ ವಿಶೇಷ ಆಹ್ವಾನಿತರಾಗಿ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಗಣೇಶ ಸೇವೆಯಿಂದ ದೈವ ಸಾಕ್ಷಾತ್ಕಾರ ಪಡೆದು ಉದಾತ್ತ ಹಾದಿಯಲ್ಲಿ ನೀವೂ ಜತೆಗೂಡಲು ಹೆಚ್ಚಿನ ಮಾಹಿತಿಗಾಗಿ

ಸಂಪರ್ಕಿಸಿ: 94495 38558

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!