ಮದ್ಯವರ್ಜನ ಶಿಬಿರ ಒಂದು ಯಜ್ಞವಿದ್ದಂತೆ ನಿಷ್ಠೆಯಿಂದ ಭಾಗವಹಿಸಿದರೆ ಫಲ ಖಂಡಿತ – ಶ್ರೀಮತಿ ದಯಾಶೀಲ

Must Read

ಹಳ್ಳೂರ-  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ( ಧರ್ಮಸ್ಥಳ) ಮೂಡಲಗಿ ತಾಲೂಕಿನ ದಿಂದ 1941ನೇ A ಮತ್ತು B ಮದ್ಯವರ್ಜನ ಶಿಬಿರವನ್ನು ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಧಾರವಾಡದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

ಪರಮಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಒಳಿತಿಗಾಗಿ ಇಂತಹ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ದುಶ್ಚಟಕ್ಕೆ ಬಲಿಯಾದವರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಎಂಟು ದಿನಗಳಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಭಾಗವಹಿಸಿ ಯಜ್ಞ ಮಾಡಿದ್ದೀರಿ, ನಿಷ್ಠೆಯಿಂದ ಭಾಗವಹಿಸಿದವರಿಗೆ ಖಂಡಿತವಾಗಿ ಒಳ್ಳೆಯ ಫಲಗಳು ದೊರಕುತ್ತವೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಿರಿ ಎಂದು ಶುಭ ಹಾರೈಸಿದರು.

ದಿವ್ಯ ಸಾನ್ನಿಧ್ಯವನ್ನು ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಥಣಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ,ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಬರಮಣ್ಣ ಉಪ್ಪಾರ, ಶ್ರೀಶೈಲ ಧವಳೇಶ್ವರ, ಈರಪ್ಪ ಸಂಡೂರ ಹಾಗೂ ಶಿವಶಂಕರ್ ಖಾನಾಪುರ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ಭುಜಣ್ಣನವರ, ಉಪಾಧ್ಯಕ್ಷರಾಗಿ ಸಂಜು ಹೊಸಕೋಟೆ, ಭರಮಣ್ಣ ಗಂಗನ್ನವರ, ಮುರಿಗೆಪ್ಪ ಗಾಡವಿ, ಕೋಶಾಧಿಕಾರಿ ಭರಮಣ್ಣ ಆಶಿರೊಟ್ಟಿ, ಗ್ರಾಮದ ಗಣ್ಯರಾದ ವಿರೂಪಾಕ್ಷಪ್ಪ ಕೊಳವಿ, ಲಕ್ಷ್ಮಣ ನರಗುಂದ, ರಾಮಣ್ಣ ಗಂಗಣ್ಣವರ, ಮೂಡಲಗಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ರಾಜು ನಾಯಕ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಭಾಸ್ಕರ ಎನ್, ಮೇಲ್ವಿಚಾರಕರದ ಉಮೇಶ ಹಡಗಲಿ, ಶಿಬಿರಾಧಿಕಾರಿಗಳಾದ ನಾಗೇಂದ್ರ, ನಂದಕುಮಾರ ಹಾಗೂ ಜಯಾನಂದ, ನವ ಜೀವನ ಸಮಿತಿಯ ಸದಸ್ಯರು, ಸೇವಾ ಪ್ರತಿನಿಧಿಗಳು, ಸ್ಥಳೀಯ ಗ್ರಾಮಸ್ಥರು ಹಾಗೂ 121 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ನಿರೂಪಿಸಿದರು. ರುಕ್ಮಿಣಿ ಬಡ್ಡಿ ಸ್ವಾಗತಿಸಿ,ಮೇಲ್ವಿಚಾರಕರಾದ ಮಂಜುಳಾ ಹಿರೇಮಠ ವಂದಿಸಿದರು

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group