ಬೆಳಗಾವಿ – ನಗರ ಬಸ್ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದ ಬಿಲ್ ಮಂಜೂರಾತಿ ನೀಡಲು ಲಂಚ ಪಡೆಯುತ್ತಿದ್ದ ಬೆಳಗಾವಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ತಾಂತ್ರಿಕ ವಿಭಾಗದ ಜನರಲ್ ಮ್ಯಾನೇಜರ್ ಸಿದ್ದನಾಯ್ಕ ದೊಡ್ಡಬಸಪ್ಪ ಅವರನ್ನು ಎಸಿಬಿ ಬಲೆಗೆ ಕೆಡವಿದೆ.
ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬೆಳಗಾವಿ ಮಹಾನಗರದ ಬಸ್ ನಿಲ್ದಾಣದ ಕಾಮಗಾರಿಗೆ ಬಿಲ್ ಮಂಜೂರು ಮಾಡಿಸಿಕೊಳ್ಳಲು ಅಪೂರ್ವ ಕನ್ಸಟ್ರಕ್ಷನ್ ಪ್ರೊಜೆಕ್ಟ್ ಮ್ಯಾನೇಜರ್ ಸಂಜೀವ್‍ಕುಮಾರ್ ನವಲಗುಂದ ಅವರ ಬಳಿ ಸ್ಮಾರ್ಟ ಸಿಟಿ ಅಧಿಕಾರಿ ರೂ. 60 ಸಾವಿರ ಲಂಚವನ್ನು ತಮ್ಮ ಮನೆಯಲ್ಲಿ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೇ ವೇಳೆ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ 23 .56 ಲಕ್ಷ ರೂ.ನಗದು ಕೂಡ ಪತ್ತೆಯಾಗಿದ್ದು, ತನಿಖೆ ಮುಂದುವರಿಸ ಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಈ ದಾಳಿಯಲ್ಲಿ ಎಸಿಬಿ ಎಸ್ಪಿ ಬಿ. ಎಸ್. ನ್ಯಾಮಗೌಡ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಇನ್ಸ್ ಪೆಕ್ಟರ್ ಬಿ.ಎಸ್. ಬೂದಿಗೊಪ್ಪ, ಸುನಿಲ ಕುಮಾರ ಹಾಗೂ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು.