spot_img
spot_img

ಕಾಮಗಾರಿ ನಡೆಸದೆ ಬಿಲ್ ಎತ್ತಿ ಹಾಕಿರುವ ಆರೋಪ; ತನಿಖೆ ನಡೆಸಲು ಆಗ್ರಹ

Must Read

ಸಿಂದಗಿ: ತಾಲೂಕಿನ ರಾಂಪೂರ ಪಿ.ಎ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಲ್ಮೇಶ ಜಾನಮಟ್ಟಿ, ಜೆಇ ಅಕ್ಷತಾ ಪವಾರ, ಈಗಿನ ಜೆಇ ಶಂಕರ ಪೂಜಾರಿ, ಅಧ್ಯಕ್ಷ ನಿಂಗಪ್ಪ ಬಿಸನಾಳ ಹಾಗೂ ತಾಪಂ ಇಓ ಮಿಲಾಪಿಯಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಯಾವುದೇ ಕಾಮಗಾರಿ ಮಾಡದೇ ಸುಮಾರು ರೂ. 1 ಕೋಟಿ ಬಿಲ್ಲು ಎತ್ತಿ ಹಾಕಿದ್ದಾರೆ ಎಂದು ಕರ್ನಾಟಕ ರಣಧೀರ ಪಡೆಯ ಉತ್ತರ ಉಲಯ ಅಧ್ಯಕ್ಷ ಸಂತೋಷ ಮಣಿಗೇರ ಆರೋಪಿಸಿದರು.

ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರಕಾರಗಳು ರೈತರೇ ಬೆನ್ನೆಲಬು ಅವರ ಕಷ್ಟಕ್ಕೆ ಅನುಕೂಲಕ್ಕಾಗಿ ಎರೆ ಹುಳು ತೊಟ್ಟಿ, ದನದ ಶೆಡ್, ಕುರಿ ಶೆಡ್, ಕೃಷಿ ಹೊಂಡ, ಬದು ನಿರ್ಮಾಣ ಹೀಗೆ ಅನೇಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಹಾಗೂ ಬಡ ಕೂಲಿಕಾರ್ಮಿಕರಿಗೆ ಜೀವನಕ್ಕಾಧಾರ ಮಹಾತ್ಮಾಗಾಂಧಿ ಯೋಜನೆಯಡಿ ಕಾಮಗಾರಿಗಳನ್ನು ರೂಪಿಸಿದೆ. ಕಾರ್ಮಿಕರಿಂದ ಕಾಮಗಾರಿಗಳನ್ನು ಮಾಡದೇ ಯಂತ್ರೋಪಕರಣಗಳ ಹೆಸರಿನಲ್ಲಿ ಬಿಲ್ಲುಗಳನ್ನು ಎತ್ತಿ  ಹಾಕಿದ್ದಾರೆ ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಗ್ರಾಪಂ ಉಪಾಧ್ಯಕ್ಷ ಕೆ.ಟಿ.ರಾಠೋಡ, ಸದಸ್ಯೆ ನೂರಜಾನ ನದಾಫ್ ಅವರು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದರು.

ಬೆನಕೊಟಗಿ ಕೃಷ್ಣಾ ವಸತಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ 2.26.240, ಗಣಿಹಾರ ವಸತಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ರೂ. 2,18.80, ರಾಂಪೂರ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಗೆ ರೂ 78001, ಮಹಿಬೂಬಸಾಬ ಮುಲ್ಲಾ ಇವರ ಹೊಲದ ಹತ್ತಿರದ ಹಳ್ಳದಲ್ಲಿ 6 ಕಾಮಗಾರಿಗಳಿಗೆ ತಲಾ 97441, ಕಸ ವಿಲೇವಾರಿಗೆ 12 ಲಕ್ಷ ಸೇರಿದಂತೆ ಅನೇಕ ಕಾಮಗಾರಿಗಳ ಹೆಸರಿನಲ್ಲಿ ಬಿಲ್ಲುಗಳನ್ನು ಎತ್ತಿ ಹಾಕಿದ್ದಾರೆ. ಅಲ್ಲದೆ ಬಸವ, ಅಂಬೇಡ್ಕರ ವಸತಿ ಯೋಜನೆಯಡಿ ಬಂದ 50 ಮನೆಗಳನ್ನು ವಾರ್ಡ ಸಭೆ, ಗ್ರಾಮ ಸಭೆ ನಡೆಸದೇ ತಮ್ಮ ಸಂಬಂಧಿಕರ ಹೆಸರಿನಲ್ಲಿ ಆಯ್ಕೆ ಮಾಡಿ ಎತ್ತಿ ಹಾಕಿದ್ದಾರೆ ಮತ್ತು 150 ಮನೆಗಳನ್ನು ಕೂಡಾ ಹಾಗೇ ಫಲನುಭವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಕಾರಣ ಮೇಲಾಧಿಕಾರಿ ಈ ಕ್ರಮಕ್ಕೆ ಕಡಿವಾಣ ಹಾಕಬೇಕು ದಸ್ತಗೀರ ನದಾಫ ಆಗ್ರಹಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!