spot_img
spot_img

5 ಲಕ್ಷ ಹಣ ಬೇಡಿಕೆ ಇಟ್ಟ  ಆರೋಪ; ಆರು ಜನ ನಕಲಿ ಪತ್ರಕರ್ತರ ಬಂಧನ

Must Read

spot_img

ಮುದಗಲ್ಲ: ದಿನಾಂಕ 29-08-2022 ರಂದು ಸಂಜೆ 7-30 ಗಂಟೆ ಸುಮಾರಿಗೆ ಅಕ್ಕಿ ಅಂಗಡಿ ಮಾಲಿಕ ನಾದ ವೀರೇಶಗೌಡ ತಂದೆ ನಾಗನಗೌಡ ಮುದಗಲ್ ರವರಿಗೆ ಮೂಲತಃ ಬೆಂಗಳೂರಿನ ಐದು ಜನ ಹಾಗೂ ತಿಂಥಣಿಯ ಒಬ್ಬಳು ಸೇರಿ ಆರು ಜನರನ್ನು ಹಣ ವಸೂಲಿ ಆರೋಪದ ಮೇಲೆ ಬಂಧಿಸಲಾಗಿದೆ.

ಮಾಲಕನಾದ ರಾಜು, ಅರ್ಪಿತಾ ಗಂಡ ಶಂಕರ ಮೂರ್ತಿ ,ಪ್ರದೀಪ ತಂದೆ ಸುರೇಶ ಕುಮಾರ,ನಾಗರಾಜ ತಂದೆ ಚಂದ್ರಪ್ಪ ,ಮಹಾದೇವಿ ತಂದೆ ಹನುಮಂತ, ತಿಂಥಣಿ , ಮೇಘನಾ ಗಂಡ ಏನಯ್‌ಗೌಡ ,ಆರು ಜನ ಆರೋಪಿತರು ಕೂಡಿಕೊಂಡು ತಾವು  ಪತ್ರಿಕಾ ಮಾಧ್ಯಮದವರೆಂದು ಹೇಳಿಕೊಂಡು ವೀರೇಶ ಎಂಬ ಅಂಗಡಿ ಮಾಲಿಕನಿಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುತ್ತೀರಿ ಆದ್ದರಿಂದ ನಿಮ್ಮಮೇಲೆ ಟಿವಿ, ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತೇವೆ ಅಂತಾ ಹೇಳಿ  ಬೆದರಿಕೆ ಒಡ್ಡಿ, ನೀವು ನಮಗೆ ಐದು ಲಕ್ಷ ರೂಪಾಯಿಗಳನ್ನು ಕೊಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಟಿ.ವಿ, ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಆದರೆ ವೀರೇಶ ಅವರು ಹಣ ನೀಡದೆ, ಠಾಣೆಗೆ ಬಂದು ಆರು ಜನರ ಮೇಲೆ ದೂರು ನೀಡಿದ ಬಳಿಕ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ನಂತರ ನಕಲಿ ಪತ್ರಕರ್ತರ ಕುರಿತಂತೆ ವಾರ್ತಾ ಮತ್ತು ಪ್ರಸಾರ ಇಲಾಖೆ ಬೆಂಗಳೂರು ರವರ ಮೂಲಕ ವಿಚಾರಿಸಲಾಗಿದೆ ಆರು ಜನ ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಹಾಗೂ ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ನಕಲಿ ಗುರುತಿನ ಚೀಟಿ ಪಡೆದು ಕ್ಯಾಮರಾವನ್ನು ಬಳಸಿ ಸಾರ್ವಜನಿಕರಿಗೆ ಬೆದರಿಕೆಯೊಡ್ಡುವ ಮೂಲಕ ಹಣದ ಬೇಡಿಕೆ ಮಾಡುತ್ತಿರುವುದು ತಿಳಿದು ಬಂದಿದೆ.

ಇದಕ್ಕು ಮುಂಚೆಯೇ ಆರೋಪಿತರ ವಿರುದ್ಧ ಬೇರೆ ಬೇರೆ ಪೊಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು  ಕಂಡು ಬಂದಿದೆ ಎಂದು ತಿಳಿದು ಬಂದಿದೆ  ಮುದಗಲ್ಲ ಪೋಲಿಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!