spot_img
spot_img

ಜ್ಞಾನವಿಲ್ಲದೆ ಸಾಧನೆ ಮಾಡುವುದು ಸಾಧ್ಯವಿಲ್ಲ – ಅಂಗಡಗೇರಿ

Must Read

spot_img

ಸಿಂದಗಿ: ಜೀವನದಲ್ಲಿ ಜ್ಞಾನ ಗುರಿ ಬಲು ಮುಖ್ಯ ಜ್ಞಾನ ಗುರಿ ಇಲ್ಲದೇ ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಕಷ್ಟವಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆದು ಕೊಂಡು ಉನ್ನತ ಹುದ್ದೆಯಲ್ಲಿ ಸೇವೆ ಮಾಡಿ ತಂದೆ ತಾಯಿ ಹೆಸರು ತರಬೇಕು ಎಂದು ನಿವೃತ ಮುಖ್ಯಗುರು ಎಸ್.ಎಸ್.ಅಂಗಡಗೇರಿ ಹೇಳಿದರು.

ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜ್ಞಾನ ಹರಿವು ಕಾರ್ಯಕ್ರಮದಲ್ಲಿ ಅರಿವಿನೆಡೆಗೆ ಒಂದು ಹೆಜ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಗದರ್ಶಕರಾಗಿ  ಭಾಗವಹಿಸಿದ ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಜ್ಞಾನವು ಮನುಷ್ಯ ಜೀವಿಗೆ ಬದುಕಲು ಅತ್ಯಂತ ಅನಿವಾರ್ಯವಾದುದು. ತಿಳಿವಳಿಕೆ, ಕಲಿಕೆ ಇಲ್ಲದೇ ಮನುಷ್ಯ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ನಾವು  ಜೀವನದುದ್ದಕ್ಕೂ ಜ್ಞಾನವನ್ನು ಅವಲಂಬಿಸಿರುವದರಿಂದ ನಾವು ಸಮಾಜದಲ್ಲಿ ಸುಂದರವಾಗಿ ಬಾಳಲು ಸಹಕಾರಿಯಾಗಿದೆ. ದಿನ ನಿತ್ಯದ ಜೀವನಕ್ಕೆ ಉಪಯೋಗಕ್ಕೆ ಬರುವ ಕೆಲಸಗಳನ್ನು ತಂದೆ ತಾಯಿ ಸೇರಿಕೊಂಡು  ಹೇಗೆ ಮಾಡಬೇಕೆಂಬ ಸಾಮಥ್ರ್ಯವನ್ನು  ಜ್ಞಾನ  ಮೂಲಕ ಸಾಮಾಜಿಕ ಬದುಕಿನಲ್ಲಿ ಪಡೆದುಕೊಳ್ಳುತ್ತಾರೆ. ತಾವು ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯ ಬೆಳೆಸಿಕೊಂಡು ಜೀವನದಲ್ಲಿ ಉತ್ತಮ ಗುರಿ ಬಲು ಮುಖ್ಯವಾಗಿದೆ  ಸಮರ್ಥ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಂಜೀವಕುಮಾರ ಗೊರನಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯಗುರು ಶರಣುಬಸು  ಲಂಗೂಟಿ ಮಾತನಾಡಿ,  ಜ್ಞಾನ  ವೈಚಾರಿಕ, ಸೈದ್ಧಾಂತಿಕ ಜ್ಞಾನದ ಸ್ವರೂಪ ಹಾಗೂ ಮೌಲ್ಯಗಳ ತಳಹದಿಯ ಮೇಲೆ ಬಾಳಬೇಕು ಎಂದು ಸಲಹೆ ನೀಡಿದರು.

ದೈ ಶಿ.ಆರ್.ಆರ್.ನಿಂಬಾಳಕರ್. ಶಿಕ್ಷಕಿಯರಾದ ಜಿ.ಜಿ.ಬಾಳಿಗೇರಿ. ಎಸ್.ಎಸ್.ಗುಬ್ಬೇವಾಡ, ಎಸ್.ಎಸ್.ಓತಿಹಾಳ, ಡಿ.ಪಿ.ಹಂಚನಾಳಮಠ. ರಶೀದಾ. ವಿಜಯಲಕ್ಷ್ಮೀ ಹೆಚ್.ಕೆ. ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಶಾಲಾ ವಿದ್ಯಾರ್ಥಿನಿ ಮಿಸ್ಬಾ ಸಿಕ್ಕಲಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅಯಾನ ಮಾಶ್ಯಾಳ ಸ್ವಾಗತಿಸಿದರು.  ಶಿಕ್ಷಕಿ ವಿಜಯಲಕ್ಷ್ಮೀ ಹೆಚ್.ಕೆ ಸುಂದರವಾಗಿ ಪ್ರಾರ್ಥನೆ ಗೀತೆ ಹಾಡಿದರು. ಕುಮಾರಿ ಪ್ರಾರ್ಥನಾ ಗೊರನಳ್ಳಿ ನಿರೂಪಿಸಿದರು. ಕುಮಾರ ತ್ರಿಮೂರ್ತಿ ಮೇಲಿನಮನೆ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!