Homeಸುದ್ದಿಗಳುಗುರ್ಲಾಪೂರದಲ್ಲಿ ಸಾಧನೆ ಮಾಡಿರುವ ಹಿರಿಜೀವಿಗೆ ಸನ್ಮಾನ

ಗುರ್ಲಾಪೂರದಲ್ಲಿ ಸಾಧನೆ ಮಾಡಿರುವ ಹಿರಿಜೀವಿಗೆ ಸನ್ಮಾನ

ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಪಿಎಂ ಶ್ರೀ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ, ಗ್ರಾಮದ ಹಿರಿಯ ಜೀವ ಹಳೆಗನ್ನಡತಿ ವಿದ್ಯಾರ್ಥಿ ಎಂದೇ ಪ್ರಸಿದ್ಧ ಪಡೆದವರು 87 ವರ್ಷ ಕುಲಗೋಡದಲ್ಲಿ ಜನ್ಮ ಪಡೆದು ಕೇವಲ 2ನೆ ತರಗತಿ ಉತ್ತೀರ್ಣರಾಗಿ ಕನ್ನಡ ಸಾಹಿತ್ಯದ ಪದಗಳು ನಾಟಕಗಳನ್ನು ಮತ್ತು ಮನೆಯ ಕಸೂತಿಗಳನ್ನ ಮಾಡುವ ಕಲೆಯಲ್ಲಿ ಪರಿಣಿತರಾಗಿರುವ ಶ್ರೀಮತಿ ಚಿನ್ನವ್ವ ರಾಮಚಂದ್ರ ಕಂಬಾರ ಅವರನ್ನು ಸನ್ಮಾನಿಸಲಾಯಿತು.

ಗುರ್ಲಾಪುರ ಶಾಸಕರ ಶಾಲೆಗೆ ಅವರನ್ನು ಆಹ್ವಾನಿಸಿ ಮಕ್ಕಳಿಗೆ ಅವರ ಕಿರು ಪರಿಚಯ ಮಾಡಿಕೊಡಲಾಯಿತು ಇದರ ಜೊತೆಗೆ ಗ್ರಾಮದ ಇಂಥ ಎಲೆ ಮರಿ ಕಾಯಿಯಂತಿರುವ ಹಿರಿಯ ಅಜ್ಜಿಯನ್ನು ಆಹ್ವಾನಿಸಿರುವ ಶಾಲೆಯ ಮುಖ್ಯೋಪಾಧ್ಯಾಯ ರಾದ ಬಿ. ಬಿ. ಸಸಾಲಟ್ಟಿ, ಸಹ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಕೂಡಿ ಹಿರಿಜೀವಿಯಗೆ ಗೌರವದಿಂದ ಸನ್ಮಾನಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಚಿನ್ನವ್ವ ಅಜ್ಜಿಯ ಹಾಗೆ ಅನೇಕ ಸಾಧಕರು ಇದ್ದಾರೆ ಅಂಥವರನ್ನು ಗುರ್ತಿಸುವ ಕೆಲಸ ಆಗಬೇಕು.ಇಂಥ  ಹಿರಿಯರನ್ನು ಕರೆದು ಸನ್ಮಾನ ಮಾಡಿದ್ದು ನಮ್ಮ ಭಾಗ್ಯ ಎಂದು ಬಿ.ಬಿ ಸಸಾಲಟ್ಟಿ ಗುರುಗಳು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್.ಪಿ. ನೇಮಗೌಡರು ಇವರ ಅನುಪಸ್ಥಿತಿಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು. ಶಿಕ್ಷಕರಾದ ಎಲ್. ಆರ್. ಸಾಲಿಮಠ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.

ಎಸ್. ಬಿ. ದರೂರ ಸ್ವಾಗತಿಸಿದರು, ಬಿ. ವೈ. ಮೋಮಿನ್ ಗುರುಗಳು ಕಿರು ಪರಿಚಯವನ್ನು ಮಾಡಿಕೊಟ್ಟರು ಮತ್ತು ಕುಮಾರಿ ಕವಿತಾ ಕಟಗಿ ಗುರುಮಾತೆ ವಂದಿಸಿದರು. ಈ ಸಂದರ್ಭದಲ್ಲಿ ಗುರುಮಾತೆಯರು ಶ್ರೀಮತಿ ದೀಪಿಕಾ ನಡೋಣಿ, ಜ್ಯೋತಿ ಕಲ್ಯಾಣಿ, ವಿದ್ಯಾಶ್ರೀ ನೇಮಗೌಡ, ಸುನೀಲ ತುಪ್ಪದ , ಗಂಗಮ್ಮ ಕಂಬಾರ ಹಾಗೂ ಅಡುಗೆ ಸಿಬ್ಬಂದಿ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group