spot_img
spot_img

ಮುನವಳ್ಳಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Must Read

ಮುನವಳ್ಳಿ : ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಮುನವಳ್ಳಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನೆಯನ್ನು ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನೆರವೇರಿಸಿದರು.

ನಂತರ ಮಾತನಾಡಿದ ಅವರು “ಕನ್ನಡದ ನೆಲ, ಜಲ, ಭಾಷೆ ರಕ್ಷಣೆಗೆ ಎಲ್ಲರೂ ಪಕ್ಷಬೇಧ, ಜಾತಿ ಭೇದ ಮರೆತು ಒಂದಾದರೆ ಮಾತ್ರ ಕನ್ನಡ ಕಟ್ಟುವ ಕೆಲಸವಾಗುತ್ತದೆ. ತಾಯ್ನಾಡು ಹಾಗೂ ಮಾತೃಭಾಷೆ ಉಳಿಸುವ ಕೆಲಸವಾಗಬೇಕು. ಮುನವಳ್ಳಿ. ಸವದತ್ತಿ.ಯರಗಟ್ಟಿ ಈ ಎಲ್ಲ ಕ.ಸಾ.ಪ.ಘಟಕಗಳು ಕನ್ನಡದ ಯಾವುದೇ ಕೆಲಸ ಕೈಗೊಂಡರೂ ನನ್ನ ಸಹಕಾರ ಸದಾ ಇದ್ದೇ ಇರುತ್ತದೆ” ಎಂದರು.

ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮಾತನಾಡುತ್ತ “ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಗಳು ಹೊಕ್ಕು, ಕನ್ನಡವನ್ನು ನುಂಗಿ ಹಾಕುತ್ತಿವೆ. ಇದರಿಂದ ನಮ್ಮ ಕನ್ನಡ ಸಂಸ್ಕೃತಿ ಬಿಟ್ಟು ಬೇರೆ ಭಾಷೆಗಳ ಸಂಸ್ಕೃತಿಗೆ ನಾವು ಒಗ್ಗಿಕೊಳ್ಳುತ್ತಿದ್ದೇವೆ. ಇಂದು ನಾವೆಲ್ಲರೂ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡುತ್ತೇವೆ ಎನ್ನುವ ಪ್ರತಿಜ್ಞೆ ಮಾಡುವ ನಿರ್ಧಾರ ಕೈಕೊಳ್ಳಬೇಕು. ಮೊದಲು ಮಾತೃಭಾಷೆ.ನಂತರ ಉಳಿದದ್ದು.ನಮ್ಮ ಭಾಷೆಯ ಅಭಿಮಾನ ಸದಾ ನಮಗಿರಲಿ” ಎಂದರು.

ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡುತ್ತ “ಎಲ್ಲ ಭಾಷೆಯ ಪತ್ರಿಕೆಗಳು ಸಿಗುವ ರಾಜ್ಯವೆಂದರೆ ಕರ್ನಾಟಕ ರಾಜ್ಯ ಮಾತ್ರ ಏಕೆಂದರೆ, ತಮಿಳಿನಲ್ಲಿ ತಮಿಳು ಪತ್ರಿಕೆ, ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ, ಆಂಧ್ರದಲ್ಲಿ ತೆಲುಗು ಪತ್ರಿಕೆ ಮಾತ್ರ ಸಿಗುತ್ತವೆ ಆದರೆ ನಮ್ಮ ಕರ್ನಾಟಕದಲ್ಲಿ ಎಲ್ಲ ಭಾಷೆ ಪತ್ರಿಕೆಗಳು ದೊರೆಯುತ್ತವೆ.ನಮ್ಮ ಭಾಷೆಯ ಜೊತೆಗೆ ಇತರ ಭಾಷೆಗಳು ಇರಲಿ.ಮಾತೃಭಾಷೆಗೆ ಮೊದಲ ಆದ್ಯತೆ ನಮ್ಮದಾಗಿರಲಿ” ಎಂದರು.

ಉಮೇಶ ಬಾಳಿ ಮಾತನಾಡಿ “ ಈ ಹಿಂದೆ ಹೋಬಳಿ ಘಟಕಗಳಿರಲಿಲ್ಲ. ಇಂದು ಕನ್ನಡದ ಕೆಲಸ ಹೋಬಳಿ ಮಟ್ಟಕ್ಕೆ ಬಂದಿದೆ.ನಮ್ಮ ಊರು ನಮ್ಮ ಸಂಸ್ಕೃತಿಯ ಜೊತೆಗೆ ಕನ್ನಡದ ಕೆಲಸವನ್ನು ವಿಭಿನ್ನವಾಗಿ ಮಾಡಲು ಇದೊಂದು ಅವಕಾಶ.ತನ್ಮೂಲಕ ಎಲ್ಲರೂ ಕನ್ನಡದ ಕಾರ್ಯಕ್ಕೆ ಕೈಜೋಡಿಸುವ ಜೊತೆಗೆ ಮುಂಬರುವ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುನವಳ್ಳಿಯಲ್ಲಿ ಜರುಗಿಸುವ ನಿಟ್ಟಿನಲ್ಲಿ ಕಂಕಣ ಬದ್ದರಾಗೋಣ”ಎಂದರು.

ಪಂಚನಗೌಡ ದ್ಯಾಮನಗೌಡರ ಮಾತನಾಡಿ “ ನಮ್ಮೂರಿನ ಹೆಮ್ಮೆಯ ಸಾಹಿತಿ ಬಸು ಬೇವಿನಗಿಡದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದದ್ದು ನಮ್ಮ ಹೆಮ್ಮೆ. ನಾವು ನಮ್ಮ ಮಾತೃಭಾಷೆ ಮರೆಯಬಾರದು. ಯಾರಿಗಾದರೂ ಅನ್ಯ ಭಾಷೆಯಲ್ಲಿ ಕನಸುಗಳು ಬಿದ್ದಿವೆಯೇ.? “ಎಂದು ಪ್ರಶ್ನಸಿ ನಮ್ಮ ಮಾತೃಭಾಷೆಯಲ್ಲಿಯೇ ನಮ್ಮ ಬದುಕು ನಿತ್ಯದ ಚಟುವಟಿಕೆಗಳು ಜರಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ಮೊದಲು ನಂತರ ಅನ್ಯ ಭಾಷೆಗೆ ಅವಕಾಶ”ಎಂದು ತಿಳಿಸಿದರು.

ಆಶಯ ನುಡಿಗಳನ್ನಾಡಿದ ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಮೋಹನ ಸರ್ವಿ “ಕನ್ನಡದ ಕೆಲಸಕ್ಕೆ ನನ್ನಂತಹ ಕಿರಿಯನಿಗೆ ಹಿರಿಯರು ಬೆಂಗಾವಲಾಗಿ ಜವಾಬ್ದಾರಿ ನೀಡಿರುವಿರಿ. ಒಂದು ಯುವ ಪಡೆ ಕನ್ನಡದ ಕೆಲಸಕ್ಕೆ ಇಂದು ನಾಂದಿ ಹಾಡಲು ಕಾರಣರಾಗಿರುವ ಎಲ್ಲ ಹಿರಿಯರಿಗೆ ನನ್ನ ವಂದನೆಗಳು.

ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮುನವಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆ ಸ್ಥಾಪಿಸಲು ಕ್ರಮ ಕೈಗೊಳ್ಳುವ ಜೊತಗೆ “ಪುಸ್ತಕ ಮೇಳ” ಎಂಬ ಪುಸ್ತಕ ಸಂಸ್ಕೃತಿ ಉಳಿಸುವ ಅಭಿಯಾನವನ್ನು ಮುನವಳ್ಳಿಯಲ್ಲಿ ಮಾಡುವ ಕನಸಿಗೆ ತಾವು ಕೈಜೋಡಿಸಿ”ಎಂದು ವಿನಂತಿಸಿದರು.

ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ “ಮುನವಳ್ಳಿ, ಸವದತ್ತಿ, ಯರಗಟ್ಟಿ ಎಲ್ಲ ಘಟಕಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಾಲೂಕು ವಿಭಜನೆ ಆಗಿರಬಹುದು. ಆದರೆ ಭಾವನಾತ್ಮಕವಾಗಿ ಕನ್ನಡದ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಮುನವಳ್ಳಿಯ ಹಿರಿಯ ಸಾಹಿತಿ ದಿವಂಗತ ಬೇವಿನಗಿಡದ ಗುರುಗಳ ಹಾಗೂ ಬೆಳಗಾವಿಯಲ್ಲಿ ವಾಸವಿರುವ ಪಾಂಡುರಂಗ ಯಲಿಗಾರ. ಬಸು ಬೇವಿನಗಿಡದ ಹೀಗೆ ಎಲ್ಲ ಸಾಹಿತಿಗಳ ಸಾಹಿತ್ಯದ ಅವಲೋಕನವನ್ನು ಮುನವಳ್ಳಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯಕ್ಕೆ ಹೊಸ ಮೆರಗನ್ನು ನೀಡಲಾಗುವುದು.” ಎಂದರು.

ಬಸವರಾಜ ನಾವಲಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವೈ.ಎಂ.ಯಾಕೊಳ್ಳಿ, ಟಿ.ಎಂ.ಕಾಮಣ್ಣವರ, ಮುಖಂಡರಾದ ರಮೇಶ ಗೋಮಾಡಿ, ಉಮೇಶ ಬಾಳಿ, ಪಂಚನಗೌಡ ದ್ಯಾಮನಗೌಡರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹಿಟ್ಟಣಗಿ, ಅನ್ನಪೂರ್ಣ ಲಂಬೂನವರ, ಮುನವಳ್ಳಿ ಹೋಬಳಿ ಘಟಕದ ನೂತನ ಅಧ್ಯಕ್ಷ ಮೋಹನ ಸರ್ವಿ ಆಗಮಿಸಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸು ಬೇವಿನಗಿಡದ, ಡಾ. ಎ.ಎಸ್.ಅಮೋಘಿಮಠ, ಡಾ. ಎಚ್.ಎಸ್.ಗೋಟಿ, ಬಿ.ಬಿ.ಹುಲಿಗೊಪ್ಪ, ಸುಧೀರ ವಾಘೇರಿ, ಅಶ್ವಿನಿ ಪಾತಾಳಿ, ಸಹನಾ ರಾಯರ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು.ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಕಾರ್ಯಕ್ರಮಕ್ಕೆ ತನು ಮನ ಧನ ಮೂಲಕ ಸೇವೆಗೈದ ಮಹನೀಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ಕೋಶಾಧ್ಯಕ್ಷರಾದ ಸುರೇಶ ಜಾವೂರ, ಮಂಜುನಾಥ ಭಂಡಾರಿ, ಗುರುನಾಥ ಪತ್ತಾರ, ಸುಧೀರ ವಾಘೇರಿ, ಪ್ರಶಾಂತ ತುಳಜಣ್ಣವರ, ವೀರಣ್ಣ ಕೊಳಕಿ, ಗಂಗಾಧರ ಗೊರಾಬಾಳ, ಟಿ.ಎನ್.ಮುರಂಕರ, ಬಿ.ಎಚ್.ಖೊಂದುನಾಯ್ಕ, ಬಾಳು ಹೊಸಮನಿ,ಶ್ರೀಕಾಂತ ಮಿರಜಕರ ಅರ್ಟಗಲ್ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಎಸ್.ಚಿಪ್ಪಲಕಟ್ಟಿ, ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ ಹೊನ್ನಳ್ಳಿ, ರಾಧಾ ಕುಲಕರ್ಣಿ, ಅನುರಾಧಾ ಬೆಟಗೇರಿ, ಶಾರದಾ ದ್ಯಾಮನಗೌಡರ, ಸುಮಾ ಯಲಿಗಾರ, ಮುಕ್ತಾ ಪಶುಪತಿಮಠ, ವಾಯ್.ಎಫ್.ಶಾನಭೋಗ, ವಿರಾಜ ಕೊಳಕಿ, ಎಂ.ಬಿ.ಅಷ್ಟಗಿಮಠ, ಅರುಣಗೌಡ ಪಾಟೀಲ, ಪ್ರಾಚಾರ್ಯ ಎಂ.ಎಚ್.ಪಾಟೀಲ, ಶ್ರೀಶೈಲ ಗೋಪಶೆಟ್ಟಿ, ಶಂಕರ ರಾಠೋಡ, ರಾಜೇಶ್ವರಿ ಬಾಳಿ, ಎಂ.ಜಿ.ಹೊಸಮಠ, ಅನಿತಾ ಯಲಿಗಾರ, ಸವದತ್ತಿ ತಾಲೂಕು ಘಟಕದ ಕಾರ್ಯದರ್ಶಿ ವೈ.ಬಿ.ಕಡಕೋಳ ರಮೇಶ ಮುರಂಕರ, ಸ್ನೇಹಜೀವಿ ಬಳಗದ ಎ.ಎ.ಅಣ್ಣಿಗೇರಿ, ನಾಗರಾಜ ಕಿತ್ತೂರ,ಆರ್ ವಾಯ್ ಅಡಿಬಟ್ಟಿ, ಎ.ಎಂ.ಹಿರೇಮಠ. ಸುರೇಶ ಬೇವಿನಗಿಡದ, ಎಮ್.ಬಿ.ಮಲಗೌಡ್ರ, ರವಿ ಸಣಕಲ್, ಮಹಾಂತೇಶ ಜೇವೂರ, ದೇವರಾಜ ಕ್ಯಾತನ್ನವರ, ಶಿವು ಕಾಟಿ, ರುದ್ರಪ್ಪ ನೀಲುಗಲ್, ಉಮೇಶ ಅಗಸಿಮನಿ, ಜಿ.ಪಿ.ಅವತಾರಿ, ಟಿ.ಕೆ.ಮಳಗಲಿ,ಸಂತೋಷ ಕಳ್ಳಿಮಠ,ಅಣ್ಣಪ್ಪ ನರಗುಂದ,ಭಾರತಿ ಹೋಟಿ, ಗಂಗಪ್ಪ ಅಲಮನ್ನವರ, ರಾಜು ಹಟ್ಟಿ, ಮಹಾಂತೇಶ ಅಣ್ಣಿಗೇರಿ, ರಾಘವೇಂದ್ರ ಸರ್ವಿ, ಅರ್ಟಗಲ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮಮತಾ ಬಣಕಾರ, ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಅನಸೂಯಾ ಮದನಭಾವಿ, ಸುಜಾತಾ ಕಾಟಿ, ಬಿ.ಎಸ್. ಪೂಜಾರ,ಎನ್.ಪಿ ಎಸ್. ನೌಕರರ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಮುದ್ದನಗೌಡರ, ಕ.ರಾ.ಸ.ನೌ.ಸಂಘದ ಉಪಾಧ್ಯಕ್ಷ ರಾಮಣ್ಣ ಗುಡಗಾರ, ಮಂಜುನಾಥ ಕಲಾಲ್, ಮಂಜುನಾಥ ನರೇಂದ್ರ, ಸಂಗಮೇಶ ಯರಗಟ್ಟಿ,ಉಮೇಶ ಹುಚರಡ್ಡಿ,ಚೇತನ ದೇಸಾಯಿ, ಸವ್ಯಸಾಚಿ ಬಳಗದ ವಕೀಲರಾದ ಶಿವಾಜಿ ಮಾನೆ, ಕಲ್ಲಪ್ಪ ನಲವಡೆ, ಗಣೇಶ ಕಳಸನ್ನವರ, ಮರದಬುಡಕಿನ, ಬಸವರಾಜ ವಿರುಪಯ್ಯನವರಮಠ ಸೇರಿದಂತೆ ಇತರರು ಇದ್ದರು.ಬಾಳು ಹೊಸಮನಿ ಸ್ವಾಗತಿಸಿದರು. ಅನಿತಾ ಯಲಿಗಾರ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ನಿರೂಪಿಸಿದರು. ಭವಾನಿ ಖೊಂದುನಾಯ್ಕ ಸಾಧಕರ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಗೊರಾಬಾಳ ನಿರೂಪಿಸಿ ವಂದಿಸಿದರು.


ವೈ. ಬಿ. ಕಡಕೋಳ
ಸಂಪನ್ಮೂಲ ವ್ಯಕ್ತಿ ಗಳು
ಮುನವಳ್ಳಿ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!