spot_img
spot_img

ಕೆಎಂಎಫ್‍ದಿಂದ 460 ಹುದ್ದೆಗಳ ಭರ್ತಿಗೆ ಕ್ರಮ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Must Read

ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ ಕೆಎಮ್ಎಫ್

ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಈ ಮೂಲಕ ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸೋಮವಾರದಂದು ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಿಲೀಕರಣ ಘಟಕ(ಬಿ.ಎಮ್.ಸಿ)ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನಕ್ಕಿಂತ ರೈತರ ದೊಡ್ಡ ಸಂಸ್ಥೆಯಾಗಿರುವ ಕೆ.ಎಂ.ಎಫ್ ಚುಕ್ಕಾಣಿ ಹಿಡಿದಿರುವುದು ಮನಸ್ಸಿಗೆ ತೃಪ್ತಿಯನ್ನುಂಟು ಮಾಡಿದೆ. ಈ ಅವಕಾಶವನ್ನು ಮಾಡಿಕೊಟ್ಟ ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು.

ಮೂಡಲಗಿ: ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ಘಟಕ(ಬಿ.ಎಮ್.ಸಿ)ವನ್ನು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಕೆ.ಎಂ.ಎಫ್ ದಿಂದ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಮಾರ್ಚ ತಿಂಗಳೊಳಗೆ 460 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ, ಈ ಮೂಲಕ ಉತ್ತರ ಕರ್ನಾಕಟದ ಪ್ರತಿಭಾನ್ವಿತ ಯುವಕರು ಈ ಸುವರ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಇದರಿಂದ ಉದ್ಯೋಗದಿಂದ ವಂಚಿತರಾದ ಯುವಕರಿಗೆ ಉದ್ಯೋಗಾವಕಾಶಗಳು ಕಲ್ಪಿಸಿಕೊಡಲು ನಮ್ಮ ಕೆ.ಎಂ.ಎಫ್ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಕೆ.ಎಂ.ಎಫ್ ಈಗಾಗಲೇ ರೈತ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ. ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ರೈತರ ಜಾನುವಾರುಗಳಿಗೆ ವಿಮೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗಾಗಿಯೇ ಸಾಕಷ್ಟು ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತ ಸಮುದಾಯಕ್ಕೆ ಮನವಿ ಮಾಡಿದರು.

ಮೂಡಲಗಿ: ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ಘಟಕ(ಬಿ.ಎಮ್.ಸಿ)ವನ್ನು ಉದ್ಘಾಟಿಸಿ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು.

ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ನಾವೆಲ್ಲ ಬದ್ಧರಿದ್ದೇವೆ. ಈ ದಿಸೆಯಲ್ಲಿ ರೈತರು ಕೇವಲ ಕಬ್ಬು ಬೆಳೆಯನ್ನು ಅವಲಂಬಿಸದೇ ಹೈನುಗಾರಿಕೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಹೈನೋಧ್ಯಮ ಬೆಳೆದರೆ ಇಡೀ ರೈತನ ಬದುಕು ಹಸನಾಗುತ್ತದೆ. ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಮ್ಮ ಕೆ.ಎಂ.ಎಫ್ ಬದ್ಧವಿದೆ. ನಮಗೆ ಸರಕಾರವು ಕೂಡಾ ಬೆನ್ನಿಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ಸದಾನಂದ ಮಹಾಸ್ವಾಮಿಗಳು ವಹಿಸಿದ್ದರು.

ಅಧ್ಯಕ್ಷತೆಯನ್ನು ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸನಗೌಡ ಪಾಟೀಲ ವಹಿಸಿದ್ದರು.

ಸಮಾರಂಭದಲ್ಲಿ ಮಾಜಿ ಸಚಿವ ಆರ್.ಎಂ.ಪಾಟೀಲ, ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ಗುಡೆನ್ನವರ, ಉಪಾಧ್ಯಕ್ಷ ದೇವೆಂದ್ರ ಕರಬನ್ನವರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಖಾನಪ್ಪಗೋಳ, ಭಗಿರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸವರಾಜ ಕರಿಹೊಳಿ, ಅಮೋಘಸಿದ್ಧೇಶ್ವರ ಸೌರ್ಹಾದ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಯಾದಗೂಡ, ಹಾಲು ಉತ್ಪಾದಕರ ಆಡಳಿತ ಮಂಡಳಿಯ ನಿರ್ದೇಶಕರಾದ ರಾಮಣ್ಣ ಪದ್ದಿ, ಮಹಾವೀರ ಮೆಳವಂಕಿ, ಶಂಕರಗೌಡ ಹೊಸಮನಿ, ಸಿದ್ದಪ್ಪ ಗೋಟೂರ, ಶಿವಾನಂದ ದಡ್ಡಿ, ಸುನೀಲ ಗಡದಿ, ಸದಾಶಿವ ನಾವಿ, ಸತ್ತೇಪ್ಪ ನಾಯಿಕ, ಸುಶೀಲವ್ವಾ ಇಟ್ನಾಳ, ಬಾಳವ್ವ ಬಬಲಿ, ಗೋಕಾಕ ಉಪಕೇಂದ್ರದ ವಿಸ್ತರ್ಣಾಧಿಕಾರಿ ಎಸ್.ಬಿ.ಕರಬನ್ನವರ, ಮೂಡಲಗಿ ಉಪಕೇಂದ್ರದ ವಿಸ್ತರ್ಣಾಧಿಕಾರಿ ರವಿ ತಳವಾರ, ಮುಖ್ಯ ಕಾರ್ಯನಿರ್ವಾಹಕ ಸಂಜು ಕರಬನ್ನವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ರೇಮ ಕವಿಯ ಮನೆ ಪುನಶ್ಚೆತನಕ್ಕೆ ಮನವಿ

ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬಾಲ್ಯದ ಮನೆ ಶಿಥಿಲಾವಸ್ಥೆಯಲ್ಲಿದ್ದು, ಮನೆಯನ್ನು ಶೀಘ್ರವಾಗಿ ದುರಸ್ಥಿಗೊಳಿಸಿ ಕೆ.ಎಸ್.ನ.ಸ್ಮಾರಕ ಮಾಡಲು ಮನವಿ. ಕೆ.ಎಸ್.ನರಸಿಂಹಸ್ವಾಮಿ ಅವರು ಕನ್ನಡ ಕಾವ್ಯ ಲೋಕದ ಹಿರಿಯ ಕವಿ. ತಮ್ಮ...
- Advertisement -

More Articles Like This

- Advertisement -
close
error: Content is protected !!