Homeಲೇಖನಗೌಡ್ರಗದ್ಲ ನಟ ಬಿಟ್ಟಗೌಡನಹಳ್ಳಿ ರಮೇಶ್ ಗೌಡಪ್ಪ

ಗೌಡ್ರಗದ್ಲ ನಟ ಬಿಟ್ಟಗೌಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ ತಿಂಗಳ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ ನಿರ್ದೇಶನದಲ್ಲಿ ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಜಿಲ್ಲೆಯ ಅನುಭವಿ ಕಲಾವಿದರು ಸೇರಿ ರಾಜಾ ಸತ್ಯವ್ರತ ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ.

ಈ ತಂಡ ಕಳೆದ ಒಂದು ತಿಂಗಳಿಂದ ನಮ್ಮ ಮನೆ ಮುಂಭಾಗ ಇರುವ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಂಗ ತಾಲೀಮು ನಡೆಸುತ್ತಿತ್ತು. ಕಲಾವಿದರ ಹಾಡುಗಾರಿಕೆ ಹಾರ್ಮೋನಿಯಂ ಮಾಸ್ತರ ಸಂಗೀತ ಸಾಂಗತ್ಯದಲ್ಲಿ ಮನೆಯವರೆಗೂ ಕೇಳಿಬರುತ್ತಿತ್ತು.

ನನಗೆ ಅಲ್ಲಿಗೆ ಹೋಗಿ ನೋಡುವ ಕುತೂಹಲ, ಹಾಡು ಕೇಳುವ ಬಯಕೆ ಉಂಟಾಗುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಮಗನ ಮದುವೆ ಬಿಸಿಯಲ್ಲಿ ಮುಳುಗಿಹೋಗಿ ಅತ್ತ ಕಡೆ ಧಾವಿಸಲಿಲ್ಲ. ಮದುವೆ ಕಾರ್ಯ ಮುಗಿದು ಬೆಂಗಳೂರಿನಲ್ಲಿ ಇರುವಾಗ್ಗೆ ನಾಟಕದ ಪಾಂಪ್ಲೆಟ್ ಗ್ರೂಪ್ ನಲ್ಲಿ ನೋಡಿದೆ. ಗೌಡರು ಹಾಕಿದ್ದರು. ಫೋನ್ ನಲ್ಲಿ ಸಂಪರ್ಕಿಸಿದೆ.

ಗೌಡ್ರೇ, ತಾವು ಹಾಸನ ಜಿಲ್ಲಾ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲರಾಗಿದ್ದೀರಿ.
ಇನ್ನೂ ನಿಮ್ಮೂರಿನ ನಿಮ್ಮ ಮನೆ ಮುಂದೆಯೇ ಶನಿಪ್ರಭಾವ ನಾಟಕ ಮಾಡಿಸುತ್ತಿದ್ದೀರಿ. ನೀವು ಈ ಹಿಂದೆ ಹಾಸನದ ಕಲಾಭವನದಲ್ಲಿ ರತ್ನ ಮಾಂಗಲ್ಯ ಸಾಮಾಜಿಕ ನಾಟಕದಲ್ಲಿ ಅಭಿನಯಿಸಿದ್ದನ್ನು ಗಮನಿಸಿರುವೆ.
ಈಗ ನೀವು ರಾಜ ಸತ್ಯವ್ರತನ ಪ್ರಮುಖ ಪಾತ್ರವನ್ನೇ ನಿಭಾಯಿಸುತ್ತಿದ್ದೀರಿ. ನೀವು ಈವರೆಗೆ ಎಷ್ಟು ನಾಟಕಗಳಲ್ಲಿ ಯಾವ್ಯಾವ ಪಾತ್ರ ನಿಭಾಯಿಸಿದ್ದೀರಿ ಎಂದು ಕೇಳಿದೆ.

ಸಾರ್   ನೀವು ನನಗೆ ಕಲಾಭವನದ ಕಡೆ ಸಿಗಲಿಲ್ಲ. ನಾಟಕ ನೋಡಲು ಬನ್ನಿ. ಎಂದರು. ಮುಂದುವರೆದು ನಾನು ಈವರೆಗೆ ನಲ್ವತ್ತು ನಾಟಕಗಳಲ್ಲಿ ನಟಿಸಿರುವುದಾಗಿ ಹೇಳಿ ದಶರಥನ ಪಾತ್ರವನ್ನು ಐದು ಬಾರಿ, ಕರ್ಣನ ಪಾತ್ರ ಹದಿಮೂರು ಬಾರಿ, ರಾಮ 5 ಸಲ, ಕೃಷ್ಣ-3 ಮತ್ತು ನಾರದನಾಗಿ ಒಮ್ಮೆ ತಂಬೂರಿ ಹಿಡಿದು ರಂಗದ ಮೇಲೆ ಬಂದಿರುವೆ ಎಂದರು. ರತ್ನ ಮಾಂಗಲ್ಯ ಸಾಮಾಜಿಕ ನಾಟಕದಲ್ಲಿ ನಾಲ್ಕು ಪ್ರಯೋಗ ಮತ್ತು ಗೌಡ್ರು ಗದ್ಲದಲ್ಲಿ ಒಮ್ಮೆ ಗುಡುಗಿದ್ದೇನೆ. ಇಷ್ಟೇ ಎಂದರು.

ಸದ್ಯಕ್ಕೆ ಇಷ್ಟು ಸಾಕು. ಮಂದೆಯೂ ನಿಮ್ಮ ಕಲಾಸೇವೆ ಹೀಗೆ ಸಾಗಲಿ ಜನರಿಗೆ ಮನರಂಜನೆ ದೊರೆಯಲಿ ಎಂದೆ.

ಗೊರೂರು ಅನಂತರಾಜು,
ಹಾಸನ
9449462879

RELATED ARTICLES

Most Popular

error: Content is protected !!
Join WhatsApp Group