ಹಾಕಿಯಲ್ಲಿ ಜಯಗಳಿಸಿ ಜಿಲ್ಲಾಕ್ಕೆ ಹಾರಿದ ಅಡಿಹುಡಿ ಶಾಲೆಯ ವಿದ್ಯಾರ್ಥಿಗಳ
ಮೂಡಲಗಿ:-ಪಟ್ಟಣದ ಲಕ್ಷಣ ಅಡಿಹುಡಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಕ್ರಿ್ಡಾಳುಗಳು ಪುರುಷ ವಿಭಾಗದಲ್ಲಿ ಕ್ರಿಕೆಟ್ ಹಾಗೂ ಪುರುಷ ಮತ್ತು ಮಹಿಳಾ “ಹಾಕಿ”ತಂಡವು ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಭಾರಿ ಬಿಇಒ ರೇಣುಕಾ ಆನಿ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ಪ ಹಳಿಗೌಡರ, ದೈಹಿಕ ಶಿಕ್ಷಕರಾದ ಸಚೀನ ಕಾಂಬಳೆ,ರುಕ್ಮಿಣಿ ಶಿವಾಪೂರ,ಅಧ್ಯಕ್ಷೆ ಮಹಾದೇವಿ ಅಡಿಹುಡಿ, ಮುಖ್ಯೋಪಾಧ್ಯಾಯಿಣಿ ಶಿಲ್ಪಾ ಗಡಾದ,ಸಹ ಶಿಕ್ಷಕರು ವಕೀಲರಾದ ಲಕ್ಷ್ಮಣ ಅಡಿಹುಡಿ ಸೇರಿದಂತೆ ಇನ್ನು ಅನೇಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಶುಭ ಹಾರೈಸಿದರು.

