- Advertisement -
ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಮತ್ತು ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜರುಗಿದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಬೆಂಗಳೂರಿನ ಮಲ್ಲೇಶ್ವರಂ ಅಂಚೆ ಕಚೇರಿಯ, ಅಂಚೆ ಪೇದೆ ಪ್ರತಿಭಾವಂತ ಕವಿ, ಕನ್ನಡ ಕಟ್ಟಾಳು *ಮುತ್ತುರಾಜು ಚಿನ್ನಹಳ್ಳಿ*
ಅವರಿಗೆ ಬೆಂಗಳೂರಿನ ಕೇಂದ್ರ ಬಸವ ಸಮಿತಿಯಲ್ಲಿ ಅಧ್ಯಕ್ಷರಾದ ಡಾ. ಅರವಿಂದ ಬಸಪ್ಪ ಜತ್ತಿ ಅವರು ಅಭಿನಂದನಾ ಪತ್ರ , ವಚನ ಗ್ರಂಥ, ಕೇಸರಿ ಬಿಳಿ ಹಸಿರು ಬಣ್ಣದ ನೂಲಿನ ಹಾರ, ಕನ್ನಡದ ಶಲ್ಯ ನೀಡಿ ಗೌರವಿಸಿ, ಅಭಿನಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಕೇಂದ್ರ ಬಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ ದಿಬ್ಬೂರು, ಆಡಳಿತ ಮತ್ತು ಪ್ರಕಟಣೆ ವಿಭಾಗದ ನಿರ್ದೇಶಕರಾದ ನಂಜಪ್ಪ, ಮಾರಾಟ ವಿಭಾಗದ ಸಹಾಯಕರಾದ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.