spot_img
spot_img

ಸವಾಲುಗಳನ್ನು ಎದುರಿಸಲು ಸಾಹಸಗಳಿಗೆ ಕೈ ಹಾಕಬೇಕು – ತಹಶೀಲ್ದಾರ ಆರ್. ಎಚ್ ಬಾಗವಾನ್

Must Read

ಮೂಡಲಗಿ – ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ತರವಾಗಿದ್ದು ಅವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ತಾವು ಕಂಡ ಕನಸನ್ನು ನನಸಾಗಿಸಿಕೊಳ್ಳಿ. ಕಷ್ಟದ ಜೀವನದಿಂದ ಬದುಕನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ ಎಂದು ಆರ್.ಎಚ್. ಬಾಗವಾನ್ ತಹಶೀಲ್ದಾರರು ರಾಯಬಾಗ ಇವರು ಕರೆ ನೀಡಿದರು.

ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ 2021-22 ನೇ ಸಾಲಿನ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ “ ವಿದ್ಯಾರ್ಥಿಗಳು ದೇಶ ಕಟ್ಟುವ ಸಮರ್ಥ ನಾಯಕರಾಗಬೇಕು ಪಠ್ಯದ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ಕಲೆಯನ್ನು ತಿಳಿಸಿಕೊಟ್ಟ ಗುರುಗಳಿಗೆ ಸದಾ ಚಿರಋಣಿಯಾಗಿರಬೇಕು. ಸವಾಲುಗಳನ್ನು ಎದುರಿಸಲು ಸಾಹಸಗಳಿಗೆ ಕೈ ಹಾಕಬೇಕು. ಹಾಗೆಯೇ ಹಠ ಬಿಡದೇ ಸಾಧಿಸುವ ಛಲ ಹೊಂದಿರಬೇಕು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯನ್ನು ಒಂದು ತಪಸ್ಸೆಂದು ಪರಿಗಣಿಸಿ ಸತತ ಅಧ್ಯಯನ ಮಾಡಿದರೆ ಯಾವುದೇ ಹುದ್ದೆಯನ್ನು ಅಲಂಕರಿಸಬಹುದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ” ಎಂದು ತಿಳಿಸಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಯುವ ಮುಖಂಡರಾದ ಸರ್ವೋತ್ತಮಣ್ಣಾ ಜಾರಕಿಹೋಳಿ ಅವರು ಮಾತನಾಡುತ್ತ ಪದವಿ ಶಿಕ್ಷಣ ಪಡೆದುಕೊಂಡ ನೀವುಗಳು ಉನ್ನತ ಶಿಕ್ಷಣಕ್ಕೆ ತೆರಳಿ ಕಾಲೇಜಿನ ಕೀರ್ತಿ ತರುವಂತಾಗಲಿ ಒಳ್ಳೆಯ ನಾಗರೀಕ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರೀ ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ ಮಹಾವಿದ್ಯಾಲಯ ನಿಮ್ಮೆಲ್ಲರ ಸಹಕಾರದಿಂದ ಸಾಕಷ್ಟು ಬೆಳೆದಿದೆ ಮುಂದೆಯೂ ಬೆಳೆಯುತ್ತದೆ ಜೊತೆಗೆ ನಿಮ್ಮ ಶಿಕ್ಷಣ ಇಲ್ಲಿಗೆ ಮೊಟಕುಗೊಳಿಸದೆ ಮುಂದಿನ ಹಂತಕ್ಕೆ ತೆರಳಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಲಿ ನಮ್ಮ ಮಹಾವಿದ್ಯಾಲಯದ ಕೀರ್ತಿ ನಿಮ್ಮಿಂದ ಎಲ್ಲೆಡೆ ಹರಡಲಿ’ ಎಂದು ತಿಳಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಕೋಡಿಹಾಳ ಕನ್ನಡ ಸಹಾಯಕ ಪ್ರಾಧ್ಯಾಪಕರು ಅವರು ಬರೆದ ಭರವಸೆಯ ಕಂಗಳಲ್ಲಿ ಎಂಬ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು. ಕೃತಿ ಮತ್ತು ಕೃತಿಕಾರನ ಕುರಿತು ಶ್ರೀ ಚೇತನ್ ರಾಜ್ ಬಿ ಅವಲೋಕಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀಧರ ಬೋಧ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಹಾವಿದ್ಯಾಲಯದ ಹಂತ ಹಂತದ ಸಾಧನೆಗೆ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸುಗುಮಗೊಳಿಸಿಕೊಳ್ಳಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ 2020-21 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು , ಪ್ರತಿಭಾ ಪುರಸ್ಕಾರ ನೀಡಿದ ಶ್ರೀ ಅನಿಲ ಹುಚರಡ್ಡಿ, ಹಾಗೂ ಸಚಿನ್ ಪತ್ತಾರ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಕ್ರೀಡಾ ಸಂಯೋಜಕರಾದ ಡಾ.ರವಿ ಗಡದನ್ನವರ, ಪ್ರಾಸ್ತಾವಿಕವಾಗಿ ಮಾತನಾಡಿದರು., ಸಾಂಸ್ಕøತಿಕ ಸಂಯೋಜಕರಾದ ಶ್ರೀ ಬಿ.ಸಿ. ಹೆಬ್ಬಾಳ, ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಆಯ್.ಕ್ಯೂ.ಎ.ಸಿ. ಎನ್.ಎಸ್.ಎಸ್ ಸಂಯೋಜಕರಾದ ಶ್ರೀ ಸಂಜೀವಕುಮಾರ ಗಾಣಿಗೇರ, ರೆಡ್ ಕ್ರಾಸ್ ಸಂಯೋಜಕರಾದ ಶ್ರೀ ಹನುಮಂತ ಕಾಂಬಳೆ, ಶ್ರೀ ಶಿವಕುಮಾರ, ಶ್ರೀ ಶಿವಾನಂದ ಚಂಡಕೆ, ಶ್ರೀಮತಿ ಶಿವಲೀಲಾ ಎಚ್, ಶ್ರೀ ಎ.ಜಿ.ಗಿರೆನ್ನವರ, ಸಿ.ಡಿ.ಸಿ ಸದಸ್ಯರಾದ ಶ್ರೀ ಚಂದ್ರು ಗಾಣಿಗರವರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಎಲ್ಲಾ ಪ್ರಾಧ್ಯಾಪಕರುಗಳುÀ ಭಾಗವಹಿಸಿದ್ದರು. ಶ್ರೀ ಹನುಮಂತ ಕಾಂಬಳೆ ಸ್ವಾಗತಿಸಿದರು. ಶ್ರೀ ರಂಗನಾಥ ಜೆ. ವಂದಿಸಿದರು. ಕುಮಾರಿ ಅರ್ಪಿತಾ ಮಳವಾಡ ಹಾಗೂ ಸುಪ್ರೀತಾ ಪಾಲಬಾಂವಿ ನಿರೂಪಿಸಿದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!