ಸಿಂದಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಸರಕಾರಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಹೆಚ್ಚಿಸಿದರೆ ಹೆಚ್ಚುವರಿ ನೀರು ಸಂಗ್ರಹದೊಂದಿಗೆ ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ನ್ಯಾಯವಾದಿ ದಾನಪ್ಪಗೌಡ ಚನಗೊಂಡ ಹೇಳಿದರು.
ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಸಿಂದಗಿ ವಕೀಲರ ಸಂಘದ ವತಿಯಿಂದ ಆಲಮಟ್ಟಿ ಆಣೆಕಟ್ಟು ಮೇಲಕ್ಕೆತ್ತರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ರಾಜ್ಯಪಾಲರಿಗೆ ಗ್ರೇಡ್-೨ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರಕಾರ ಈ ಯೋಜನೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿದೆ. ಕೂಡಲೇ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಯೋಜನೆ ಪೂರ್ಣಗೊಳಿಸಬೇಕು. ಒಂದು ವೇಳೆ ಸರಕಾರವು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದರು.
ಈ ವೇಳೆ ವಕೀಲರಾದ ಎಸ್.ಎ.ಗಾಯಕವಾಡ, ಎಸ್.ಬಿ.ಖಾನಾಪುರ, ಎಸ್.ಎಂ.ಪಾಟೀಲ, ಎಮ್.ಎನ್.ನಾಯ್ಕೋಡಿ, ಪಿ.ಎಮ್.ಬಡಿಗೇರ, ಆರ್.ಎಂ.ಯಾಳಗಿ, ವಿ.ಎಂ.ಬಡಿಗೇರ, ಎಸ್.ಕೆ.ಪೂಜಾರಿ, ಬಿ.ಎಸ್.ಚಾವರ, ಬಿ.ಸಿ.ತಳವಾರ, ಶ್ವೇತಾ, ಎಂ.ಎಸ್.ಬಿರಾದಾರ, ವಿ.ಎಲ್.ಮೋಪಗಾರ, ಎಮ್.ಎಸ್.ಪಾಟೀಲ, ಸಿ.ಎ.ಚಿಕ್ಕೋಡಿ, ಕೆ.ಎಚ್.ಚವ್ಹಾಣ, ಎ.ಜಿ.ಮಸಾರಕಲ್ಲ, ಜಿ.ಜಿ. ಮಾರ್ಸನಳ್ಳಿ, ಎ.ಕೆ.ಕನ್ನೂರ, ಎಲ್.ಎನ್.ಮಣೂರ, ಪಿ.ಸಿ.ಬಿರಾದಾರ, ಎಂ.ಪಿ.ದೊಡಮನಿ, ಕೆ.ಎಸ್.ಬಿರಾದಾರ, ಸಿ.ಎಂ.ಸೂರ್ಯವಂಶಿ, ಎಸ್.ಎಂ.ಕಾಚೂರ ಸೇರಿದಂತೆ ಅನೇಕರಿದ್ದರು.