ಉಪಚುನಾವಣೆಯ ನಂತರ ಸಿದ್ದು ಕಾಡಿಗೆ ಹೋಗುತ್ತಾರೆ, ಬಂಡೆ ಚೂರಾಗುತ್ತದೆ – ಕಟೀಲ್ ಭವಿಷ್ಯ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಿಂದಗಿ– ದಿ.ಎಂ.ಸಿ.ಮನಗೂಳಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರದ ಸಾಧನೆಯ ಮೇಲೆ ಕಮಲ ಅರಳುತ್ತೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರು ಹೋಳಾಗಿ ಒಡೆದು ಹೋಗುತ್ತದೆ ರಾಜ್ಯದಲ್ಲಿ ಹಿಂದುತ್ವದ ಆಧಾರದ ಮೇಲೆ ಕಮಲ 150 ಸ್ಥಾನಗಳಿಂದ ನಿಚ್ಚಳ ಬಹುಮತ ಸಾಧಿಸುತ್ತದೆ ಎಂದು ರಾಜ್ಯಾದ್ಯಕ್ಷ ನಳಿನಕುಮಾರ ಕಟೀಲ ಭವಿಷ್ಯ ನುಡಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಈ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಡಿಗೆ ಹೋಗುತ್ತಾರೆ. ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಎಂಬ ಬಂಡೆ ಚೂರು ಚೂರಾಗುತ್ತದೆ ಇದು ಧರ್ಮಯುದ್ಧ ಈ ಯುದ್ಧದಲ್ಲಿ ಹಿಂದೂತ್ವದ ಗೆಲವು ಹಿಂದೂತ್ವ ಆಧಾರದ ಗೆಲುವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ , ಜೆಡಿಎಸ್ ಅನೈತಿಕ ಸಂಬಂಧದಲ್ಲಿ ಬರೀ 14 ತಿಂಗಳ ಅಧಿಕಾರವನ್ನು ತಾಜ್ ಹೊಟೇಲಿನಲ್ಲಿ ಮಾಡಿದ್ದಾರೆ ಒಬ್ಬ ಶಾಸಕರ ಕಷ್ಟಕ್ಕೆ ಸ್ಪಂದಿಸಿಲ್ಲ ಆ ಕಾರಣಕ್ಕೆ ಪಕ್ಷವನ್ನು ತೊರೆದು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಮ್ಮಿಶ್ರ ಸರಕಾರಕ್ಕೆ ಮದುವೆಯಾಗುವುದನ್ನು ತಪ್ಪಿಸಿ ಬಿಜೆಪಿಗೆ ಯಡಿಯೂರಪ್ಪನವರ ಅಧಿಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಸುಮಾರು 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು ಅವರ ಮನೆಗೆ ಒಂದು ಬಿಡಿಗಾಸು ಪರಿಹಾರ ಒದಗಿಸಿಕೊಟ್ಟಿಲ್ಲ. ಬರೀ ಕಣ್ಣೀರು ಹಾಕುವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯನ್ನು ಕಂಡಿದ್ದೇವೆ, ಕಣ್ಣೀರು ತರಿಸುವ ಸಿದ್ದರಾಮಯ್ಯ ಮುಖ್ಯಮಂತ್ರಿಯನ್ನು ನೋಡಿದ್ದೇವೆ ಆದರೆ ಕಣ್ಣೀರು ಒರೆಸುವ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಾಜ್ಯದ ರೈತರಿಗೆ ಅನೇಕ ಯೋಜನೆಗಳನ್ನು ನೀಡುವ ಮೂಲಕ ಕಣ್ಣೀರು ಒರೆಸಿದ್ದಾರೆ ಎಂದರು.

ಮೈಸೂರಿನಲ್ಲಿ ಗೋಹಂತಕರ ಪರವಾಗಿ ನಿಂತು 10 ಲಕ್ಷ ಪರಿಹಾರ ನೀಡಿದ್ದಾರೆ ವಿನಃ ಗೋ ರಕ್ಷಕರ ರಕ್ಷಣೆಗೆ ನಿಲ್ಲಲಿಲ್ಲ. ಇದು ಹಿಂದು ಪರ ಕಾಳಜಿ ಎಷ್ಟಿದೆ ಎನ್ನುವುದು ತೋರಿಸಿಕೊಡುತ್ತದೆ. ಸುಮಾರು 65 ವರ್ಷದ ಆಡಳಿತದಲ್ಲಿ ಒಂದು ಬಾರಿಯೂ ಭಾರತ ಮಾತಾಕೀ ಜೈ ಎನ್ನುವ ಘೋಷಣೆ ಕಂಡಿಲ್ಲ. ಆದರೆ ಕಾಂಗ್ರೆಸ್‍ನವರ ಬಾಯಲ್ಲಿ ಜೈ ಭಾರತ ಮಾತಾಕೀ ಜೈ ಎಂದು ಹೇಳಿಸಿದವರು ಮೋದಿಜಿಯವರು ಅದು ಗಟ್ಟಿತನದ ಹಿಂದುತ್ವ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಇನ್ನು ಮುಂದೆ ಯಾವುದೇ ಗುಡಿ ಗುಂಡಾರಗಳನ್ನು, ದೇವಸ್ಥಾನ , ಮಂದಿರಗಳನ್ನು ಧ್ವಂಸ ಮಾಡುವ ಕ್ರಿಯೆಗೆ ತಿದ್ದುಪಡಿ ಕಾನೂನು ಪಾಸ್ ಮಾಡಿದ್ದಾರೆ. ಕಲ್ಯಾಣ ಕರ್ನಾಟಕವನ್ನಾಗಿ ಮಾಡಿ ಸ್ವಾಭಿಮಾನ ಮೆರೆದಿದ್ದಾರೆ. ಮೀನುಗಾರರಿಗೆ ಇನ್ನೂರು ಕೋಟಿ ಮೀಸಲಿಟ್ಟು ಆಶ್ರಯದಾತರಾಗಿದ್ದಾರೆ. ಈ ಉಪ ಚುನಾವಣೆಯಲ್ಲಿ ಗೆಲ್ಲಿಸಿದ್ದಾದರೆ ಕೋಟಿ ಕೋಟಿ ಅನುದಾನ ಈ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲಿದ್ದಾರೆ. ಕೊರವಾರ ಬ್ಯಾಂಚ್ ಕಾಲುವೆಗೆ ಟೆಂಡರ ಕರೆದು ರೈತರ ಬಾಳಿಗೆ ಬೆಳಕು ನೀಡಲಾಗಿದೆ. ಬಹುದಿನಗಳಿಂದ ಉಳಿದಿರುವ ಕಬ್ಬಲಿಗ, ತಳವಾರ ಎಸ್‍ಟಿ ಮಿಸಲಾತಿ ಕೊಟ್ಟೇ ಕೊಡುತ್ತೇವೆ ಎನ್ನುವ ಭರವಸೆ ನೀಡಿದರು.

- Advertisement -

ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕುಡಚಿ ಶಾಸಕ ಪಿ.ರಾಜು, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಸಾವಯವ ಕೃಷಿ ಬೆಳೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ, ಮಾಜಿ ಶಾಸಕ ರಮೇಶ ಭೂಸನೂರ, ಶಂಕರಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ, ಸಿಎಸ್.ನಾಗೂರ, ಸಿದ್ದಣ್ಣ ಬಿರಾದಾರ ಅಡಕಿ, ಬಿ.ಎಸ್.ಪೂಜಾರಿ, ಶಿಲ್ಪಾ ಕುದರಗೊಂಡ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ಎಸ್.ಕೆ ಬೆಳ್ಳುಬ್ಬಿ, ಚಿದಾನಂದ ಚಲವಾದಿ, ಬಿ.ಎಚ್.ಬಿರಾದಾರ, ಸೆರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾದ್ಯಕ್ಷ ಸಿದ್ದರಾಮ ಪಾಟೀಲ, ಶರಣಪ್ಪ ಕಣಮೇಶ್ವರ, ಬಸವರಾಜ ತಾವರಖೇಡ, ಸೇರಿದಂತೆ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಯಾದರು.

ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ನಿರೂಪಿಸಿದರು, ಮಲ್ಲಿಕಾರ್ಜುನ ಜೋಗುರ ಸ್ವಾಗತಿಸಿದರು. ಮಂಡಲ ಅದ್ಯಕ್ಷ ಈರಣ್ಣಾ ರಾವೂರ ವಂದಿಸಿದರು.


ಸಿಂದಗಿ ಉಪ ಚುನಾವಣೆ ನಿಮಿತ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನಕುಮಾರ  ಕಟೀಲ್ ಅವರ ಕಾರ್ಯಕ್ರಮದಲ್ಲಿ  ರಾಜ್ಯ ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಅವರ ಫೋಟೋ ಇಲ್ಲದೆ ಹಾಲುಮತದ ಸಮಾಜಕ್ಕೆ ಕಡೆಗಣಿಸಿದ್ದಾರೆ ಎಲ್ಲಿದೆ ಸಮಾನತೆ ಎನ್ನುವ ಸಂದೇಶವನ್ನು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ. ಹಿಂದೂತ್ವದ ಆಧಾರ ಮೇಲೆ ಚುನಾವಣೆ ಎದುರಿಸಿ ಎನ್ನುವ ಹೇಳಿಕೆ ನೀಡಿ ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!