ಬೀದರ – ಈಶಾನ್ಯ ಭಾಗದ ಬೀದರನಿಂದ ವಕ್ಫ್ ವಿರುದ್ಧದ ಹೋರಾಟ ಆರಂಭವಾಗಿದೆ. ಇದು ಯಾರನ್ನೋ ಖುಷಿಪಡಿಸಲು ಅಲ್ಲ ರೈತರ ಹಿತ ಕಾಪಾಡಲು ಹೋರಾಟ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಹೇಳಿದರು.
ಇಲ್ಲಿನ ಗಣೇಶ ಮೈದಾನದಿಂದ ವಕ್ಫ್ ಬೋರ್ಡ್ ವಿರುದ್ಧ ಜನಜಾಗೃತಿ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ನೆಹರೂ ಮೇಲೆ ನೇರ ದಾಳಿ ಮಾಡಿದರು.
ಅಯೋಗ್ಯ ನೆಹರೂ ಪ್ರಧಾನಿಯಾಗಿದ್ದರಿಂದ ಈ ಎಲ್ಲಾ ಕಾನೂನು ತಿದ್ದುಪಡಿ ಆದವು. ಅವರು ಬರೀ ಮುಸ್ಲಿಮರ ಪರವಾಗಿಯೇ ಕೆಲಸ ಮಾಡಿದರು ಹೀಗೇ ಬಿಟ್ಟರೆ ಇವರು ದೇಶವನ್ನೇ ನುಂಗುತ್ತಾರೆ ಈಗಲೇ ನಾವು ಎಚ್ಚರಗೊಳ್ಳಬೇಕು ಎಂದರು.
ಮುಸ್ಲಿಮ್ ಐಎಎಸ್ ಅಧಿಕಾರಿಗಳು ಬಹಳ ಅಪಾಯಕಾರಿ. ಚಾಣಾಕ್ಷತನದಿಂದ ರೈತರ ಜಮೀನುಗಳನ್ನು ವಕ್ಫ್ ಬೋರ್ಡಿಗೆ ಸೇರಿಸಿದ್ದಾರೆ ಆದರೆ ನಮ್ಮ ಹಿಂದೂ ಡಿಸಿಗಳು ಹೆದರುತ್ತಾರೆ. ನಾಲ್ಕೈದು ತಲೆಮಾರಿನಿಂದ ಇದ್ದ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಮಾಡಿದ್ದಾರೆ ಇದು ರದ್ದಾಗೋದು ಅಷ್ಟು ಸುಲಭವಲ್ಲ. ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕು ಎಂದರು.
ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಸಾಯಿಸಿದವರು ರಜಾಕರು ಆದರೆ ವಿಚಿತ್ರವೆಂದರೆ ಅವರು ಮುಸ್ಲಿಮರಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳುತ್ತಾರೆ ಹಾಗಾದರೆ ಅವರೇನು ಲಿಂಗಾಯತರಾ ಎಂದು ಪಾಟೀಲ ಲೇವಡಿ ಮಾಡಿದರು.
ನಾವು ನಮ್ಮ ಅಪ್ಪನಿಗೆ ಮಾತ್ರ ಅಪ್ಪಾ ಎನ್ನುತ್ತೇವೆ ಯಾರ್ಯಾರೋ ನಾಲಾಯಕರಿಗೆ ಅಪ್ಪ ಅನ್ನೋದಿಲ್ಲ ಎಂದೂ ಗುಡುಗಿದರು.
ವಕ್ಫ್ ಕಾನೂನು ಮುಟ್ಟಿದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಮೌಲ್ವಿಗಳು ಹೇಳುತ್ತಾರೆ.ಎಷ್ಟು ಧೈರ್ಯ ಇರಬೇಕು ಇವರಿಗೆ ಈ ಧೈರ್ಯ ಇವರಿಗೆ ಹೇಗೆ ಬಂತು ಅಯೋಗ್ಯ ನೆಹರೂ ಪ್ರಧಾನಿಯಾಗಿ ಈ ವಕ್ಫ್ ಬೋರ್ಡ್ ತಿದ್ದುಪಡಿ ಬಂದಿದೆ ಅದಕ್ಕೇ ಅವರಿಗೆ ಈ ಧೈರ್ಯ ಎಂದು ಬಸವರಾಜ ಪಾಟೀಲ ಯತ್ನಾಳ ನುಡಿದರು.
ವರದಿ : ನಂದಕುಮಾರ ಕರಂಜೆ, ಬೀದರ