ದಕ್ಷಿಣ ಭಾರತದ ಅತಿದೊಡ್ಡ ರ್ಯಾಲಿ
ಬೀದರ – ಬೀದರನಲ್ಲಿ ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಅಗ್ನಿಪಥ ಅಗ್ನಿ ವೀರರಿಗಾಗಿ ನಡೆದ ಸೇನಾ ನೇಮಕಾತಿ ದಕ್ಷಿಣ ಭಾರತದ ಅತಿ ದೊಡ್ಡ ರ್ಯಾಲಿ ಎಂದು ಹೇಳಬಹುದು.
ಬೀದರ್ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಡಿಸೆಂಬರ್ 5 ರಿಂದ 22ರವರೆಗೆ ಅಗ್ನಿಪಥ ಅಗ್ನಿ ವೀರರಿಗಾಗಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ದಕ್ಷಿಣ ಭಾತರದ ಅತಿ ದೊಡ್ಡ ನೇಮಕಾತಿ ರ್ಯಾಲಿ ಎಂದು ನೇಮಕಾತಿ ರ್ಯಾಲಿಯಲ್ಲಿ ಭಾಗಿಯಾದ ಹಿರಿಯ ಸೇನಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಂದ ಒಟ್ಟು 70,357 ಯುವಕರು ನೇಮಕಾತಿಯಲ್ಲಿ ಪಾಲ್ಗೊಳ್ಳಲು ಗಡಿ ಜಿಲ್ಲೆ ಬೀದರ್ ಗೆ ಮುಖ ಮಾಡಿದ್ಧಾರೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಟ್ಟು 70,357 ಆಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಅಗ್ನಿಪಥ ಅಗ್ನಿ ವೀರರಿಗಾಗಿ ಅತಿ ಹೆಚ್ಚು ನೋಂದಣಿ ಮಾಡಿದ ಜಿಲ್ಲೆ ಅಂದರೆ ಅದು ಬೆಳಗಾವಿ ಜಿಲ್ಲೆಯ ಐವತ್ತು ಸಾವಿರಕ್ಕೂ ಹೆಚ್ಚು ನೊಂದಣಿ ಮಾಡಿದ ವಿದ್ಯಾರ್ಥಿ ಗಳು ಎಂದು ಹೇಳಬಹುದು.
ನಿತ್ಯ ಕನಿಷ್ಠ 4 ಸಾವಿರದಿಂದ ಗರಿಷ್ಠ 4,500 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಶಿಕ್ಷಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ಇಂದಿನಿಂದ ಆರಂಭವಾಗಿರುವ ನೇಮಕಾತಿ ರ್ಯಾಲಿಯಲ್ಲಿ ಪ್ರತಿದಿನ ಬೆಳಿಗ್ಗೆ 6ಕ್ಕೆ ರನ್ನಿಂಗ್ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ ನಂತರ ಇತರೆ ಪ್ರಕ್ರಿಯೆಗಳು ನಡೆಯಲಿವೆ.
ಸೇನಾ ನೇಮಕಾತಿ ರ್ಯಾಲಿಯ ಸಂದರ್ಭದಲ್ಲಿ ಸಂಚಾರ ಒತ್ತಡ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ, ನಾಲ್ಕು ಸಿಪಿಐ, 12 ಪಿಎಸ್ಐ, 22 ಎಎಸ್ಐ, 34 ಹೆಡ್ ಕಾನ್ಸ್ಟೆಬಲ್, 37 ಪೊಲೀಸ್ ಕಾನ್ಸ್ಟೆಬಲ್ ಹಾಗೂ 50 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ