ಕೃಷಿ ಕಾಯ್ದೆ; ಪಂಜಾಬ್ ರೈತರಿಗೆ ಖುಷಿ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಚಂಡೀಗಢ – ಪಂಜಾಬನಲ್ಲಿ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದ್ದು ಉತ್ಪನ್ನ ಮಾರಾಟದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿರುವುದು ರೈತರಲ್ಲಿ ಅತ್ಯಂತ ಹರ್ಷ ಮೂಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಹೊಸ ಕೃಷಿ ನಿಯಮಗಳು ರೈತರಿಗೆ ಅನುಕೂಲಕರವಾಗಿ ಪರಿಣಮಿಸಿದ್ದು ಈಗ ಹೊಸ ಕಾಯ್ದೆಯ ಬಗ್ಗೆ ಪಂಜಾಬ್ ನ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಾಜಪುರ ಮಂಡಿಯಲ್ಲಿ ಮಾರಾಟ ಮಾಡಲಾಗಿದ್ದ ೧೭೧ ಕ್ವಿಂಟಾಲ್ ಗೋಧಿಯ ಹಣ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಂತೆ ೧.೯೦ ಲಕ್ಷ ಹಾಗೂ ೧.೪೮ ಲಕ್ಷ ರೂ.ಗಳು ರೈತನ ಖಾತೆಗೆ ನೇರವಾಗಿ ಜಮಾ ಆಗಿದ್ದು ಅದರ ಬಗ್ಗೆ ಫೋನಿಗೆ ಸಂದೇಶ ಕೂಡ ಬಂದಿರುವುದಾಗಿ ರೈತ ದಿಲೀಪ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಗಮೋಹನ ಸಿಂಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಈವರೆಗೆ ರೈತರ ದಿಕ್ಕು ತಪ್ಪಿಸಲಾಗುತ್ತಿತ್ತು ಎಂದವರು ಹೇಳಿದ್ದಾರೆ.

ಹೊಸದಾಗಿ ಜಾರಿಗೆ ತರಲಾಗಿರುವ ಕೇಂದ್ರ ಕೃಷಿ ಕಾಯ್ದೆಯು ರೈತರ ಪರವಾಗಿದ್ದು ಮಧ್ಯವರ್ತಿಗಳ ಹಾವಳಿ ಹಾಗೂ ಶೋಷಣೆಯನ್ನು ತಪ್ಪಿಸುತ್ತವೆ. ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ.
ಇದೇ ರೀತಿ ರೂಪಾರ್ ಜಿಲ್ಲೆಯ ತ್ರಿಲೋಚನ ಸಿಂಗ್ ಎಂಬ ರೈತ ಕೂಡ ತಾನು ಬೆಳೆದ ಗೋಧಿಗೆ ೧.೫೬ ಲಕ್ಷ ರೂ.ಗಳ ಬೆಂಬಲ ಬೆಲೆ ಪಡೆದಿದ್ದು ಈ ರೀತಿ ಹಣ ಪಡೆದಿದ್ದು ಇದೇ ಮೊದಲ ಸಲ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

- Advertisement -

ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಯಿಂದ ಮಧ್ಯವರ್ತಿಗಳ ಕಾಯಕಕ್ಕೆ ಬ್ರೇಕ್ ಬಿದ್ದಿದ್ದು ಅದಕ್ಕಾಗಿ ಅವರು ರೈತರನ್ನು ರೊಚ್ಚಿಗೆಬ್ಬಿಸಿ ದಿಲ್ಲಿಯಲ್ಲಿ ಹಿಂಸಾತ್ಮಕ ಮುಷ್ಕರ ಮಾಡಿದ್ದರು. ಇವರೊಡನೆ ಖಲಿಸ್ತಾನಿ ಜನರೂ ಜೊತೆಗೂಡಿ ಕೇಂದ್ರದ ಹೆಸರು ಕೆಡಿಸಲು ಯತ್ನಿಸಿದ್ದರು ಆದರೆ ಕೇಂದ್ರದ ಮೋದಿ ಸರ್ಕಾರದ ಬಿಗಿ ನಿಲುವಿನಿಂದಾಗಿ ರೈತರು ಯಾವುದೇ ಆಮೋದಕ್ಕೆ ಒಳಗಾಗದೇ ಈಗ ಕೃಷಿ ನೀತಿಯ ಲಾಭ ಪಡೆಯುವಂತಾಗಿದೆ.

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!