spot_img
spot_img

ಅಹಿಲ್ಯಾಬಾಯಿ ಹೋಳ್ಕರ್

Must Read

ದೇಶದ ಮೂಲೆಮೂಲೆಗಳಲ್ಲಿ ಖಿಲ್ಜಿ, ತುಘಲಕ್, ಮೊಘಲರು, ನಿಜಾಮರು ಮತ್ತಿತರ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದು ದೇವಾಲಯಗಳನ್ನು, ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ, ಒಂದೂ ಯುದ್ಧವನ್ನು ಸೋಲದೆ, ರಾಜ್ಯದ ಭೂಭಾಗದಲ್ಲಿ ಒಂದಿಂಚೂ ವಿರೋಧಿಗಳಿಗೆ ಬಿಟ್ಟುಕೊಡದೆ ಮಾಳವಾ ಸಾಮ್ರಾಜ್ಯ ಕಾಪಾಡಿದ ವೀರನಾರಿ, ಅಚ್ಚಳಿಯದೆ ಹೊಳೆಯುವ ಅರುಂಧತಿ ನಕ್ಷತ್ರ ಪುಣ್ಯಶ್ಲೋಕ ಅಹಿಲ್ಯಾಬಾಯಿ ಹೋಳ್ಕರ ಆವರ ಜಯಂತಿ ಇಂದು..ನಮ್ಮ ನಮನಗಳನ್ನು ಸಲ್ಲಿಸೋಣ!

ಮೂಲತಃ ಕುರಿಗಾಹಿ ಸಮುದಾಯವಾದರೂ ಕಾಲಾಂತರದಲ್ಲಿ ಮರಾಠರ ಸಾಮ್ರಾಜ್ಯದಲ್ಲಿ ಶಸ್ತ್ರಾಸ್ತ್ರ ಹಿಡಿದು ಸೈನ್ಯ ಹಾಗೂ ಆಡಳಿತ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಧನಗರ ವಂಶದ ಪಾಟೀಲ್ ಮಂಕೋಜಿ ಶಿಂಧೆ ಅವರು ಅಹಿಲ್ಯಾ ತಂದೆ. ಅಪ್ಪನ ಆಶೆಯಂತೆ ಓದು, ಬರಹ ಕಲಿತಿದ್ದ ಅಹಲ್ಯಾ ಬಾಲ್ಯದಿಂದಲೇ ಬುದ್ಧಿಮತ್ತೆ ಹಾಗೂ ಸೇವಾಭಾವದಿಂದ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರುವಾಸಿ.

34 ವರ್ಷ ರಾಜ್ಯವನ್ನಾಳಿದ ವಿಶ್ವದ ಏಕೈಕ ವೀರರಾಣಿ ದೇಶ ದ್ರೋಹಿಗಳ ದಾಳಿಗೆ ತುತ್ತಾಗಿ 3500 ಶಿವ ದೇವಾಲಯ ಜೀರ್ಣೋದ್ಧಾರ ಮಾಡಿ ಹಿಂದೂ ಧರ್ಮ ರಕ್ಷಣೆ ಮಾಡಿದ ಮಹಾನ್ ಧರ್ಮವಂತೆ ! ದ್ವಾದಶ ಜ್ಯೋತಿರ್ಲಿಂಗಗಳ ರಕ್ಷಕಿ ಅಷ್ಟೇ ಅಲ್ಲ ಇಂದಿನ ಕಾಶಿ ವಿಶ್ವನಾಥ ದೇವಾಲಯ ಅಹಲ್ಯಾಬಾಯಿ ಹೋಳ್ಕರ್ ಕೊಡುಗೆ, ಇಂದಿಗೂ ಗೋಕರ್ಣ ಕ್ಷೇತ್ರದಲ್ಲಿ ಇವರ ಹೆಸರಿನಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಬನವಾಸಿ ದೇವಾಲಯದ ದೊಡ್ಡ ಗಂಟೆಯಲ್ಲಿ ಇಂದಿಗೂ ತಾಯಿ ಹೆಸರಿದೆ. ಗಾಂಧಾರ ದೇವಾಲಯ ಇಂದಿಗೂ ತಾಯಿಯ ಸ್ಮರಿಸುತ್ತಿವೆ. ಅಯೋಧ್ಯೆಯಲ್ಲಿ ರಾಮನ ಮಥುರಾ ಶ್ರೀಕೃಷ್ಣನ ದೇವಾಲಯ ಉಳಿದದ್ದು ಕೂಡ ತಾಯಿಯ ಧರ್ಮನಿಷ್ಠೆಯಿಂದ.

ಕಿತ್ತೂರು ರಾಣಿ ಚೆನ್ನಮ್ಮ ಝಾಂಸಿ ರಾಣಿ ಲಕ್ಷಿಬಾಯಿಯಂತೆ ಅಹಿಲ್ಯಬಾಯಿ ಹೋಳ್ಕರ್ ಇವರೇ ಸ್ವತಃ ಖಡ್ಗ ಹಿಡಿದು ದಿಟ್ಟತನದಿಂದ ಹೋರಾಡಿ ಆಡಳಿತ ಮಾಡಿದ ಹಿಂದೂ ಧರ್ಮ ರಕ್ಷಣೆ ಮಾಡಿದ ಮಹಾನ್ ಧರ್ಮವಂತೆ.. ಶ್ರೀಮಂತ ಸಾಮ್ರಾಜ್ಯದ ಅಧಿಪತಿಯಾದರೂ ಅತ್ಯಂತ ಸರಳ ಜೀವನ ನಡೆಸಿ, ತನ್ನ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಸರಳತೆ ಮತ್ತು ಪ್ರಜಾ ಪ್ರೀತಿಯಿಂದ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಳು. ಅವಳ ಪ್ರಕಾರ ಅಧಿಕಾರವೆಂಬುದು ದೇವರು ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದೇ ಆಗಿತ್ತು.

ಉತ್ತರಭಾರತದಲ್ಲಿ ಹಿಂದೂ ಸಾಮ್ರಾಜ್ಯ ಸಂಸ್ಥಾಪಿಸಿದ ಅಹಿಲ್ಯಾ ಬಾಯಿ ಹೋಳ್ಕರ್ ಪ್ರಾತಃಸ್ಮರಣೀಯರು.

ರಾಜಮಾತಾ ಅಹಿಲ್ಯಾ ಬಾಯಿ ಹೋಳ್ಕರ್ ಗೆ ಕೋಟಿ ಕೋಟಿ ನಮನಗಳು.

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!