ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ತಮ್ಮ ಮಗಳನ್ನೇ ಸಹ ಪೈಲೆಟ್ ಆಗಿ ಪಡೆದು ಯುದ್ಧ ವಿಮಾನ ಹಾರಾಟ ನಡೆಸಿ ಇತಿಹಾಸ ಬರೆದಿದ್ದಾರೆ.
ಬೀದರ್ ವಾಯುಪಡೆ ತರಬೇತಿ ಕೇಂದ್ರದಲ್ಲಿ ವಿಮಾನ ಹಾರಾಟಕ್ಕೂ ಮುನ್ನ ಅಪ್ಪ ಮಗಳು ಇಬ್ಬರೂ ವಿಮಾನದ ಬಳಿ ತೆಗೆಸಿಕೊಂಡ ಫೋಟೊ ಈಗ ವೈರಲ್ ಆಗಿದೆ.
ವಾಯುಪಡೆ ಅಧಿಕೃತವಾಗಿ ಈ ವಿವರವನ್ನು ಪ್ರಕಟಿಸಿದ್ದು, ಏರ್ ಕಮಾಂಡರ್ ಸಂಜಯ್ ಶರ್ಮ ಮತ್ತು ಪುತ್ರಿ ಫ್ಲೈಯಿಂಗ್ ಆಫಿಸರ್ ಅನನ್ಯ ಶರ್ಮ ಬೀದರ್ ನಲ್ಲಿ ಹ್ವಾಕ್ ಸೊರ್ಟೆ (Hawk sortie) ವಿಮಾನ ಹಾರಾಟ ನಡೆಸಿದ್ದಾರೆ.
ಮೊದಲ ಬಾರಿ ಒಂದೇ ಮಾದರಿಯ ವಿಮಾನವನ್ನು ಹಾರಿಸಿದ್ದು ವಾಯುಪಡೆ ಇತಿಹಾಸದಲ್ಲೇ ಮೊದಲ ಬಾರಿ ಅಪ್ಪ-ಮಗಳು ಒಂದೇ ಮಾದರಿಯ ಒಂದೇ ವಿಮಾನ ಹಾರಿಸಿದ್ದಾರೆ ಎಂದು ವಾಯುಪಡೆ ತಿಳಿಸಿದೆ.
ಅನನ್ಯ ಶರ್ಮ ಪಾಲಿಗೆ ಸಂಜಯ್ ಶರ್ಮ ಕೇವಲ ತಂದೆ ಮಾತ್ರವಲ್ಲ. ವಾಯುಪಡೆಯಲ್ಲಿ ಅವರು ಹಿರಿಯ ಅಧಿಕಾರಿಯೂ ಹೌದು. ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ ಎಂದು ಹೇಳಿದರು.ಅನನ್ಯಾ ಶರ್ಮ ಪ್ರಸ್ತುತ ಯುದ್ಧ ವಿಮಾನಗಳ ಹಾರಾಟದ ತರಬೇತಿಯನ್ನು ಬೀದರ್ ನಲ್ಲಿ ಪಡೆಯುತ್ತಿದ್ದಾರೆ. ಇದರಲ್ಲಿ ಪದವಿ ಪಡೆದ ನಂತರ ಆಕೆ ಮತ್ತಷ್ಟು ಉತ್ಕೃಷ್ಟ ಹಾಗೂ ವೇಗದ ಯುದ್ಧ ವಿಮಾನಗಳ ಹಾರಾಟ ತರಬೇತಿ ಪಡೆಯಲಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ