spot_img
spot_img

ನಿಜಾಮರ ಕೋಟೆಯಲ್ಲಿ (AIR SHOW) ಏರ್ ಶೋ ಪ್ರದರ್ಶನ ದಿ.2 ಮತ್ತು 3 ರಂದು

Must Read

ಬೀದರ್ – ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ನಿಜಾಮರ ಕೋಟೆಯಲ್ಲಿ ನಿಜವಾಗಲೂ ಹಬ್ಬದ ವಾತಾವರಣ.

ಇಲ್ಲಿ ನಡೆಯುವ ಏರ್ ಶೋ ಪ್ರದರ್ಶನ ನೋಡಲು ಬೀದರ್ ಜಿಲ್ಲೆಯ ಶಾಲೆ ಮಕ್ಕಳು ಮತ್ತು ಸಾರ್ವಜನಿಕರು ಕಿಕ್ಕಿರಿದು ಸೇರಿದ್ದಾರೆ.

ಭಾರತೀಯ ವಾಯುಪಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬೀದರ್‌ ಕೋಟೆ ಮೇಲೆ ಸೆಪ್ಟೆಂಬರ್ 2 ಹಾಗೂ 3 ರಂದು ಸಂಜೆ 4.30ಕ್ಕೆ ಏರ್ ಶೋ ಆಯೋಜಿಸಲಾಗಿದೆ.

ಸೆ. 2 ರಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸೆ.3ರಂದು ಸಾರ್ವಜನಿಕರ ಏರ್ ಶೋ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಬೀದರ್‌ ಕೋಟೆಯ ಮೇಲೆ ಏರ್‌ ಶೋ ನಡೆಸುವ ಕುರಿತು ಪೂರ್ವ ಭಾವಿಯಾಗಿ ಕರೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆಪ್ಟೆಂಬರ್‌ 2 ರಂದು ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಈ ಏರ್‌ ಶೋ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಅಂದು ಸಂಜೆ 4.30 ಗಂಟೆಯ ಒಳಗೆ ಎಲ್ಲಾ ವಿದ್ಯಾರ್ಥಿಗಳು ಬೀದರ್‌ ಕೋಟೆಯ ಒಳಗಡೆ ಇರುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಏರ್‌ ಶೋ ವೀಕ್ಷಿಸಬೇಕೆಂದು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!