- Advertisement -
ಬೆಳಗಾವಿ – ಎನ್ ಟಿ ಇ ಪಿ ಕಾರ್ಯಕ್ರಮದಡಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಉತ್ತಮ ರೇಡಿಯೋಲಜಿ ಇಮೇಜಿಂಗ್ ಆಫೀಸರ್ ಪ್ರಶಸ್ತಿಯನ್ನು ನಗರದಲ್ಲಿಂದು ಏರ್ಪಟ್ಟಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಯ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಿರೇಬಾಗೇವಾಡಿ ಆಸ್ಪತ್ರೆಯ ಆಕಾಶ್ ಅರವಿಂದ ಥಬಾಜ್ ರವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಮುನ್ಯಾಳ, ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಡಾ. ಮಾಸ್ತಿಹೊಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾಕ್ಟರ್ ತುಕ್ಕಾರ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.