spot_img
spot_img

ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಸದಸ್ಯರ ಕೃತಿ ಬಿಡುಗಡೆ ಸಮಾರಂಭ

Must Read

spot_img
- Advertisement -

ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ ಇದರ ವತಿಯಿಂದ ಬಸವಕಲ್ಯಾಣದಲ್ಲಿ 10 ನೆಯ ತಾರೀಕು ರವಿವಾರ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಸದಸ್ಯರ ಒಟ್ಟು ಐದು ಪುಸ್ತಕಗಳು ಬಿಡುಗಡೆಯಾದವು.

ಕಾರ್ಯಕ್ರಮದಲ್ಲಿ ಮೊದಲಿಗೆ ಡಾ. ಮೃತ್ಯುಂಜಯ ಶೆಟ್ಟರ ಅವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ನಂತರ ಡಾ. ಕೆ. ಬಿ. ಮಹದೇವಪ್ಪ ಅವರು ಶರಣರ ವಚನಗಳ ಕುರಿತು ನಮ್ಮೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಶರಣೆ ಸುಧಾ ಪಾಟೀಲ ಅವರ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡವು. ಅದರಲ್ಲಿ ” ಶರಣರ ನೆನೆದರ ಸರಗಿಯ ಇಟ್ಟಂಗ ” ಶರಣರ ಪರಿಚಯ ಮತ್ತು ವಚನ ವಿಶ್ಲೇಷಣೆ ಕೃತಿ ಯನ್ನು ಡಾ. ಬಾಬಾಸಾಹೇಬ ಗಡ್ಡೆ ಅವರು ” ಹೃದಯದ ಮಾತು ” ಕವನ ಸಂಕಲನವನ್ನು ಡಾ. ಉಮಾಕಾಂತ ಶೇಟ್ಕರ ಅವರು, ” ಚುಕ್ಕಿ ಹೇಳಿದ ಕಥೆ ” ಕವನ ಸಂಕಲನವನ್ನು ಶರಣೆ ಗೌರಮ್ಮ ನಾಶಿ ಅವರು ಉದ್ಘಾಟಿಸಿದರು.

ಡಾ. ಶರಣಮ್ಮ ಗೊರೆಬಾಳ ಅವರ ” ಮತ್ತೆ ನಕ್ಕಿತು ಭೂಮಿ ” ಕವನ ಸಂಕಲನವನ್ನು ಡಾ. ವೀಣಾ ಎಲಿಗಾರ ಅವರು ಬಿಡುಗಡೆಗೊಳಿಸಿದರು. ಶರಣೆ ಬಸಮ್ಮ ಭರಮಶೆಟ್ಟಿ ಅವರ ” ಬಾಡದಿರಲಿ ಸ್ನೇಹ ” ಕವನ ಸಂಕಲನವನ್ನು ಡಾ. ಜಯಶ್ರೀ ಪಟ್ಟಣ ಮತ್ತು ಡಾ. ಶಶಿಕಾಂತ ಪಟ್ಟಣ ಸರ್ ಅವರು ಉದ್ಘಾಟನೆ ಮಾಡಿದರು.

- Advertisement -

ಡಾ. ಶಶಿಕಾಂತ ಪಟ್ಟಣ ಅವರು ಮೂವರೂ ಸಾಹಿತಿಗಳ ಪರಿಚಯವನ್ನು ಮಾಡಿಕೊಟ್ಟು ಅವರಿಗೆಲ್ಲರಿಗೂ ಶುಭಹಾರೈಸಿದರು. ಡಾ. ಶಶಿಕಾಂತ ಪಟ್ಟಣ, ಡಾ. ಜಯಶ್ರೀ ಪಟ್ಟಣ, ಶರಣೆ ಜಯದೇವಿ ಯಾದಲಾಪುರೆ ಮತ್ತು ಶರಣೆ ಸ್ವರೂಪಾರಾಣಿ ನಾಗೂರೆ ಅವರು ಮೂವರಿಗೂ ಸನ್ಮಾನ ಮಾಡಿ ಅಭಿನಂದಿಸಲಾಯಿತು

ಈ ಕಾರ್ಯಕ್ರಮದಲ್ಲಿ ಅಕ್ಕನ ಅರಿವು ಬಳಗದ ಹಿರಿಯ ಸದಸ್ಯರಾದ ಪ್ರೊ. ಶಾರದಮ್ಮ ಪಾಟೀಲ ಅವರು, ಡಾ. ದಾನಮ್ಮ ಝಳಕಿ,ಡಾ. ಗೀತಾ ಡಿಗ್ಗೆ, ಡಾ. ಸುಧಾ ಕೌಜಗೇರಿ, ಡಾ. ಕಸ್ತೂರಿ ದಳವಾಯಿ, ಡಾ. ಬಸಮ್ಮ ಗಂಗನಳ್ಳಿ, ಡಾ. ಮೀನಾಕ್ಷಿ ಪಾಟೀಲ್, ಡಾ. ಸಂಗಮೇಶ ಕಲಹಾಳ ಮತ್ತು
ಇನ್ನೂ ಹಲವಾರು ಅಕ್ಕನ ಅರಿವು ಸದಸ್ಯರು ಭಾಗಿಯಾಗಿದ್ದರು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group