spot_img
spot_img

ಅಕ್ಷರದಾಸೋಹ ಜವಾಬ್ದಾರಿಯ ಜೊತೆಗೆ ಕಲಿಕಾ ಸಾಮರ್ಥ್ಯಗಳತ್ತ ಗಮನ ಹರಿಸುವೆ – ಮೈತ್ರಾದೇವಿ ವಸ್ತ್ರದ

Must Read

ಸವದತ್ತಿಃ “ಅಕ್ಷರ ದಾಸೋಹ ಕಾರ್ಯವು ಇಲಾಖೆಯ ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು.ಮಕ್ಕಳ ಹಸಿವು ನೀಗಿಸುವ ಜೊತೆ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನು ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.ನನಗೆ ಈ ಜವಾಬ್ದಾರಿಯನ್ನು ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಜೊತೆಗೆ ಮಕ್ಕಳಿಗೆ ಅಕ್ಷರದಾಸೋಹ ಯೋಜನೆಯಡಿ ಇಲಾಖೆ ನೀಡಿದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವೆನು.ಜೊತೆಗೆ ಮಕ್ಕಳ ಕಲಿಕೆಯ ಆಸಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆನು”ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕಾರ್ಯಕ್ಕೆ ನೂತನವಾಗಿ ಕರ್ತವ್ಯಕ್ಕೆ ಹಾಜರಾದ ಮೈತ್ರಾದೇವಿ ವಸ್ತ್ರದ ತಿಳಿಸಿದರು.

ಅವರು ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಿಂದ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಂಘಟನೆ ವತಿಯಿಂದ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾದ ಸ್ವಾಗತ ಪರ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ.ತಾಲೂಕು ಪಂಚಾಯತಿಯ ಬಡೆಮ್ಮಿ.ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಎಂ.ಎಚ್.ಚಲವಾದಿ.ಆರ್.ಸಿ.ರಾಠೋಡ, ಮಮತಾ ಬಣಕಾರ.ಕರ್ನಾಟಕ ರಾಜ್ಯ ಪಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಬಿ.ಆರ್.ಪಿಗಳಾದ ರತ್ನಾ ಸೇತಸನದಿ. ಡಾ.ಬಿ.ಐ.ಚಿನಗುಡಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ.ಎಸ್.ಬಿ.ಬೆಟ್ಟದ.ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಕಮ್ಮಾರ ಮುರಕಿಬಾಬಿ ಪ್ರೌಢಶಾಲೆಯ ಆರ್.ಸಿ.ಕಂಠಿ.ಬೈಲಹೊಂಗಲದ ಸರಕಾರಿ ಪ್ರೌಢಶಾಲೆಯ ಬಿ.ಆರ್.ಪಾಟೀಲ.ಬಾವೀಹಾಳ ಪ್ರೌಢಶಾಲೆಯ ಆರ್.ಸಿ.ಕಡಕೋಳ.ಮೇಕಲಮರ್ಡಿ ಪ್ರೌಢಶಾಲೆಯ ವಿವಿಧ ಗುರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಿನಲ್ಲಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಘಟನೆಗಳಿಂದ ತಮ್ಮ ಈ ಉತ್ತಮ ಕಾರ್ಯಕ್ಕೆ ತಮ್ಮ ಬೆಂಬಲವಿದೆ.ತಾಯಿ ರೇಣುಕಾ ಮಾತೆಯ ಆಶೀರ್ವಾದದ ಮೂಲಕ ಉತ್ತಮ ಸೇವೆಗೈಯಿರಿ ಎಂದು ಕಗದಾಳ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆರ್. ಸಿ. ರಾಠೋಡ ಮತ್ತು ಕರ್ನಾಟಕ ರಾಜ್ಯ ಪಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಶುಭ ಕೋರಿದರು.

ಡಾ.ಬಿ.ಐ.ಚಿನಗುಡಿ ಕಾರ್ಯಕ್ರಮ ನಿರೂಪಿಸುವುದರೊಂದಿಗೆ ಸ್ವಾಗತ ಮತ್ತು ವಂದನಾರ್ಪಣೆಗೈದರು.

- Advertisement -
- Advertisement -

Latest News

ಗಣಿತ ಲೋಕದಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

“ಗಣಿತವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇಡೀ ಪ್ರಕೃತಿಯಲ್ಲಿಯೇ ಗಣಿತದ ಸಾರ ಅಡಗಿದ್ದು ಇವತ್ತು ತಂತ್ರಜ್ಞಾನ ಮುಂದುವರೆಯಲು ನಮ್ಮ ಭಾರತೀಯ ಅನೇಕ ಗಣಿತಶಾಸ್ತ್ರಜ್ಞರ ಕೊಡುಗೆ ಬಹಳಷ್ಟಿದೆ....
- Advertisement -

More Articles Like This

- Advertisement -
close
error: Content is protected !!