spot_img
spot_img

ಎಲ್ಲಾ ಹಿಂದುಳಿದ ವರ್ಗಗಳು ಸಾಮರಸ್ಯದಿಂದ ಬದುಕಬೇಕು

Must Read

spot_img
- Advertisement -

ಸಿಂದಗಿ: ಹಿಂದುಳಿದ ವರ್ಗಗಳು ಹಳ್ಳಿಗಳಲ್ಲಿ ಸಾಮರಸ್ಯದ ಜೀವನ ಮಾಡಬೇಕು ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಹಾಗೆ ಬದುಕಬೇಕು, ಹಾಗೂ ನಮ್ಮ ಸಂವಿಧಾನಾತ್ಮಕ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಕೂಲಿಕಬ್ಬಲಿಗ ಯುವವೇದಿಕೆಯ ರಾಜ್ಯ ಅಧ್ಯಕ್ಷ ಶಿವಾಜಿ ಮೆಟಗಾರ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮದ ಜೈಭೀಮ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ಗ್ರಾಮ ಶಾಖೆ ಉದ್ಘಾಟನೆ ಹಾಗೂ ದಲಿತ ಹಿಂದುಳಿದ, ಅಲ್ಪಸಂಖ್ಯಾತರ ಗ್ರಾಮ ಮಟ್ಟದ ಐಕ್ಯತಾ ಸಮಾವೇಶದಲ್ಲಿ ಮಾತನಾಡಿ, ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಮತ್ತು ಕುರುಬ ಸಮುದಾಯಗಳಿಗೆ ಎಸ್.ಟಿ. ಪ್ರಮಾಣ ಪತ್ರ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆಯಿದೆ ಎಂದರು.

ಜಿಲ್ಲಾ ಡಿ.ಎಸ್.ಎಸ್. ಸಂ. ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ದಲಿತ ಸಂಘರ್ಷ ಸಮಿತಿ ಕೇವಲ ಪರಿಶಿಷ್ಟರ ಹಿತಕ್ಕಾಗಿ ಕಾರ್ಯನಿರ್ವಹಿಸದೇ ಸಮಸ್ತ ಶೋಷಿತ ಸಮುದಾಯಗಳ ಹಿತಕ್ಕಾಗಿ ಶ್ರಮಿಸುತ್ತಿದೆ ಅಲ್ಲದೆ ಎಲ್ಲ ಶೋಷಿತ ಸಮುದಾಯಗಳು ಒಂದುಗೂಡಿ ಸಹೋದರ ಮನೋಭಾವದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಯನ್ನು ಸಾದಿಸಬೇಕಾಗಿರುವ ಅನಿವಾರ್ಯತೆಯಿದೆ ಎಂದು ಸಲಹೆ ನೀಡಿದರು.

- Advertisement -

ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ; ದಸ್ತಗೀರ ಮುಲ್ಲಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯವಾಗಿದೆ ಸಂವಿಧಾನ ಜಾರಿಯಾಗಿ 70 ವರ್ಷ ಗತಿಸಿದರೂ ಕೂಡಾ ಶೋಷಿತರಿಗೆ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳು ಗಗನಕುಸುಮವಾಗಿ ಕಾಣುತ್ತಿವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸನ್ನು ಕಾಣಬೇಕಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಶಂಕ್ರಯ್ಯ ಮಠ, ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷರ ಪ್ರತಿನಿಧಿ ಪೈಗಂಬರ ಮುಲ್ಲಾ, ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನ್ಯಾಯವಾದಿ ಎಸ್. ಕೆ. ಪೂಜಾರಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಆಯ್.ಎಮ್.ಮುಲ್ಲಾ, ಡಾ. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಊರಿನ ಹಿರಿಯರಾದ ಜಟ್ಟೆಪ್ಪ ಕೆ. ಹರನಾಳ ಅಧ್ಯಕ್ಷತೆ ವಹಿಸಿದ ಜಿಲ್ಲಾ ಡಿ.ಎಸ್.ಎಸ್. ಸಂಚಾಲಕರು ವಿನಾಯಕ ಗುಣಸಾಗರ, ಹಾಲುಮತ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ, ಅಖಿಲ ಮನಿಯಾರ ಮುಸ್ಲಿಂ ಮುಖಂಡರು (ಯಂಕಂಚಿ), ಅಶೋಕ ಚಲವಾದಿ, ಯಲ್ಲಪ್ಪ ಹಾದಿಮನಿ ಮಾಜಿ ಜಿ.ಪಂ. ಸದಸ್ಯರು, ಸಿದ್ದು ರಾಯಣ್ಣವರ, ಹುಯೋಗಿ ತಳ್ಳೊಳ್ಳಿ ಮಾತನಾಡಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಭೀರಪ್ಪ ಕನ್ನೂರ, ಇರ್ಫಾನ ಮುಲ್ಲಾ, ಬಸವರಾಜ ಹರನಾಳ, ಬಾಬು ರಾಠೋಡ, ಮಡಿವಾಳಪ್ಪ ಜವಳಗಿ, ಮಂಜುನಾಥ ಯಂಟಮಾನ, ಶಿವಪುತ್ರ ಮೇಲಿನಮನಿ, ಶರಣು ಚಲವಾದಿ, ನೀಲಕಂಠ ಹೊಸಮನಿ, ಬಸವರಾಜ ಇಂಗಳಗಿ, ಜೈಭೀಮ ತಳಕೇರಿ, ಜೈಭೀಮ ಕೂಚಬಾಳ, ಗ್ರಾಮ ಪಂಚಾಯತ ಸದಸ್ಯರಾ ಹೂವಣ್ಣ ಕನ್ನೂರ, ಪಕ್ರುದ್ಧಿನ ಕುಮಸಗಿ, ಮಲ್ಲು ಸಾವಕಾರ ಹಂದ್ರಾಳ, ರಾವುತಪ್ಪ ಕನ್ನೂರ, ಜಹಾಂಗೀರ ಮುಜಾವರ, ಮಲಕಪ್ಪ ಕಟ್ಟಿಮನಿ, ಮಡಿವಾಳಪ್ಪ ಜವಳಗಿ, ಪರಸು ಜವಳಗಿ, ಅಂಬಣ್ಣ ಬಂದಾಳ, ಪ್ರದೀಪ ಹಜೇನವರ, ಪ್ರಮೋದ ಬರಗಲ್ಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

- Advertisement -

ಈ ಸಂದರ್ಭದಲ್ಲಿ ಗ್ರಾಮಶಾಖಾ ಪದಾಧಿಕಾರಿಗಳಾಗಿ ಪ್ರಕಾಶ ಕೊಕಟನೂರ, ಮಂಜು ಕಾಂಬಳೆ, ಪರಸು ಸಿಂಗೆ(ಜವಳಗಿ), ಹಣಮಂತ ಚಂ ಚಲವಾದಿ, ಶಶಿಕಾಂತ ಕಾಂಬಳೆ ಇವರನ್ನು ಆಯ್ಕೆ ಮಾಡಲಾಯಿತು ಅಲ್ಲದೆ ಹುಲಿ ಬೇಟೆ ಚಿತ್ರ ತಂಡದ ನಾಯಕ ಮತ್ತು ತಂಡದ ಸದಸ್ಯರವನ್ನು ವಿಶೇಷವಾಗಿ ಸನ್ಮಾನಿಸಿದರು.

ತಾಲೂಕ ಸಂ. ಸಂಚಾಲಕ ಲಕ್ಕಪ್ಪ ಬಡಿಗೇರ ಸ್ವಾಗತಿಸಿದರು. ದೇವರಹಿಪ್ಪರಗಿ ಸಂಚಾಲಕ ಪ್ರಕಾಶ ಗುಡಿಮನಿ ನಿರೂಪಿಸಿದರು. ರಾಜು ಸಿಂದಗೇರಿ ವಂದಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group