“ಸರ್ವ ಮಕ್ಕಳು ನಮ್ಮ ದೇಶದ ಆಸ್ತಿಗಳು”

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಸಿಂದಗಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಕ್ಷಕರು ಹಾಗೂ ಪಾಲಕರಿಗೆ ಪ್ರೋತ್ಸಾಹ ಅತ್ಯಗತ್ಯ ಎಂದು ಸಾಹಿತಿ ಬಸವರಾಜ ಅಗಸರ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಕಾಯಕ ಶಿಕ್ಷಣ ಸಂಸ್ಥೆಯ ಅಂಗವಾಗಿ ನಡೆಯುವ ಯುನಿಕ್ ಆಂಗ್ಲ ಭಾಷೆಯ ಹಾಗೂ ಡಾ.ಕೆ ಎಸ್.ಮಠ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ ಆದರೆ ಅದನ್ನು ಗುರುತಿಸಿ ಅವರಲ್ಲಿ ಇರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸಲು ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹದಂಥ ಸಲಹೆ ಮಾರ್ಗದರ್ಶನ ನೀಡುವುದು ತುಂಬಾ ಅಗತ್ಯವಾಗಿದೆ ಎಂದರು.

ಕಾಯಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಸ್ವಾಮಿ ಹತ್ತರಕಿಹಾಳಮಠ ಮಾತನಾಡಿ, ಮಕ್ಕಳು ನಮ್ಮ ದೇಶದ ಸರ್ವ ಸಂಪತ್ತು ಅವರಿಗೆ ನಮ್ಮ ಭಾರತೀಯ ಸಂಸ್ಕೃತಿ ಕಲಿಸಿ ಅವರಿಗೆ ಒಳ್ಳೆಯ ಸಂಸ್ಕಾರ ಗುಣಗಳು ಜೀವನದಲ್ಲಿ ರೂಡಿಸಿ ಕೊಳ್ಳುವಂತೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಅವರು ಮಕ್ಕಳ ಮುಂದೆ ಸುಂದರವಾಗಿ ಜಾನಪದ ಹಾಡುಗಳು ಹಾಡಿದರು.

ಶಾಲಾ ಮುಖ್ಯಗುರುಮಾತೆ ಶ್ರೀಮತಿ ವಿಜಯಲಕ್ಷ್ಮೀ ಶ್ರೀಶೈಲ ಹಿರೇಮಠ ಸಭೆ ಅಧ್ಯಕ್ಷತೆ ವಹಿಸಿದ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ನೂತನ ವಿಷಯಗಳನ್ನು ಆಟ ಪಾಠ ಹಾಡು ಕಲಿಯುತ್ತಾ ಉತ್ತಮ ಜ್ಞಾನದ ಭಂಡಾರವನ್ನು ಹೆಚ್ಚಿಸಿ ಕೊಳ್ಳಬೇಕು ಎಂದರು.

ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಸಹನಾ ಹಿರೇಮಠ,ಸಹನಾ ಜೋಗೂರ,ರೇಷ್ಮಿ ಹಿರೇಮಠ,ರಾಖೇಶ ಹೂಗಾರ ಸಸಿಗೆ ನೀರುಣಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ವಿದ್ಯಾರ್ಥಿಗಳಾದ ಕುಮಾರ ರಾಕೇಶ ಹೂಗಾರ,ಆಕಾಶ ಪಾಟೀಲ, ಚನ್ನು ನಿಗಡಿ,ಸಹನಾ ಜೋಗೂರ, ಸಾವಿತ್ರಿ ಬಿರಾದಾರ, ಗುರುರಾಜ ನಿಗಡಿ,ಶ್ವೆತಾ ಹಿರೇಮಠ,.ಸಾಧಿಕಾ ನದಾಪ, ವಿಜಯ ಬಿರಾದಾರ, ಮೌನೇಶ, ಅಮೃತಾ ಗೌಡರ,ವಿಶಾಲ,ಪ್ರತೀಕ,ಆಕಾಶ, ಖುಷಿ, ಶರಣು,ಶ್ರೇಯಾ,ಮಲ್ಲಿಕಾರ್ಜುನ,ಆದಿತ್ಯ ಪ್ರಶಾಂತ,ಆಕಾಶ, ಶರಣು, ಸುಮಂತ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಭಾಷಣ ಹಾಡು ಕಥೆ ಆಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಶಾಲಾ ಶಿಕ್ಷಕರಾದ ಅಶೋಕ ಗೌಡರ,ಯಲಗೊಂಡ, ಪೂಜಾರಿ, ಬಸವರಾಜ ಬಿರಾದಾರ, ಶ್ರೀಪಾದ ನಾನಸ್ಕರ, ರಾಜೇಶ್ವರಿ, ಶ್ರೀಮತಿ ಪಾಟೀಲ,ಶ್ರೀಮತಿ ಭಾರತಿ,ಶ್ರೀಧರ ಬಡಿಗೇರ ಭಾಗವಹಿಸಿದ್ದರು.

ಕುಮಾರಿ ಸಹನಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!